ನೀನ್ಯಾರೆ?

ನೀನ್ಯಾರೆ?

ಕವನ

ಹಗಲಿನ ಸೂರ್ಯ
ಸಂಜೆ ಕೆಂಪಾಗೋ ವೇಳೆಯಲಿ
ಇಂಪಾಗಿ, ತಂಪಾಗಿ
ಸುಯ್ಯೆಂದು ಬೀಸಿ,
ಮನಸಲಿ ಇಲ್ಲದಿರೋ
ಪ್ರೀತಿಯನು ಮೂಡಿಸಿ,
ಕಾಣದ ಕನಸೊಂದನು
ಸೃಷ್ಟಿಸಿ, ಕಣ್ಣ್ ಕಟ್ಟಿಸಿ,
ಭಾವಲತೆಗಳಲಿ ಆಸೆಯನು ಚಿಗುರಿಸಿ,
ಭಾವಾಂತಾರಾಳ ಕಲಕುವಂತೆ 
ಬೀಸಿದ ತಂಗಾಳಿಯೇ!
ಏನೇ ನಿನ್ನ ಹೆಸರು? ಯಾವುದೇ ನಿನ್ನ ಊರು?
 

Comments