ಭಾಗ - ೧೮ ಮನುವಿನ ಧರ್ಮ: ಪರಿಚ್ಛೇದ ೩ ಜೈಪೂರ್ ವಿಗ್ರಹ ವಿಜಯ

ಭಾಗ - ೧೮ ಮನುವಿನ ಧರ್ಮ: ಪರಿಚ್ಛೇದ ೩ ಜೈಪೂರ್ ವಿಗ್ರಹ ವಿಜಯ

ಚಿತ್ರ

        ರಾಜಸ್ಥಾನ್ ಹೈಕೋರ್ಟಿನ ಪೂರ್ಣಪೀಠವು ಜೈಪುರದಲ್ಲಿರುವ ಉಚ್ಛನ್ಯಾಯಾಲಯದ ಪ್ರಾಂಗಣದಲ್ಲಿ ಪ್ರತಿಷ್ಠಾಪಿಸಿದ ಮಹರ್ಷಿ ಮನುವಿನ ವಿಗ್ರಹದ ಕುರಿತು ವ್ಯಕ್ತವಾದ ತೀವ್ರವಾದ ವಿವಾದ ಮತ್ತು ಪ್ರತಿಭಟನೆಯನ್ನು ಪುರಸ್ಕರಿಸಿ ೨೮ ಜುಲೈ, ೧೯೮೯ರಲ್ಲಿ ಆ ವಿಗ್ರಹವನ್ನು ಅಲ್ಲಿಂದ ತೊಲಗಿಸಬೇಕೆಂದು ಒಕ್ಕೊರಲಿನಿಂದ ತೀರ್ಮಾನಿಸಿತು. ಇದನ್ನು ಪ್ರಶ್ನಿಸಿ ಡಾಕ್ಟರ್ ಸುರೇಂದ್ರಕುಮಾರ್ ಅವರ ಸಹಾಯ ಸಹಕಾರಗಳಿಂದ ನಾನು (ಧರ್ಮಪಾಲ್ ಆರ್ಯ) ಆ ತೀರ್ಪನ್ನು ರದ್ದು ಪಡಿಸಬೇಕೆಂದು ಕೋರಿ ರಿಟ್ ಪಿಟೀಷನ್ ಒಂದನ್ನು ನ್ಯಾಯಾಲಯದಲ್ಲಿ ದಾಖಲು ಮಾಡಿದೆ. ನನ್ನ ವಾದಕ್ಕೆ ಪೂರಕವಾದ ೧೫ ಅಂಶಗಳ ನಿವೇದಿಕೆಯೊಂದನ್ನು ಪರಿಶೀಲಿಸಲು ನ್ಯಾಯಲಯದ ಮುಂದಿರಿಸಿದೆ. ಆ ಹದಿನೈದು ಅಂಶಗಳ ಆಧಾರದ ಮೇಲೆ ಮನುಮಹರ್ಷಿಯ ವಿಗ್ರಹವನ್ನು ಅದನ್ನು ಈಗಿರುವ ಜಾಗದಿಂದ ಬೇರೊಂದು ಕಡೆಗೆ ಸ್ಥಳಾಂತರಿಸಬಾರದೆಂದು ಭಿನ್ನವಿಸಿದೆ. 
ಆ ಹದಿನೈದು ಪ್ರಾಥಮಿಕ ಅಂಶಗಳು ಈ ಕೆಳಕಂಡಂತಿವೆ - 
೧) ಮನುಮಹರ್ಷಿ ಧರ್ಮಸೂತ್ರ ಸಂಹಿತೆಯನ್ನು ರಚಿಸಿದ ಮೊತ್ತಮೊದಲ ಮಹನೀಯ.
೨) ಮನು ಧರ್ಮಸ್ಥಾಪಕ ಮತ್ತು ಧರ್ಮಭೋಧಕ.
೩) ಮನುಸ್ಮೃತಿ ಒಂದು ಪವಿತ್ರ ಗ್ರಂಥ.
೪) ಮನುವು ಮೊಟ್ಟಮೊದಲ ನ್ಯಾಯಪ್ರದಾತ.
೫) ಆಧುನಿಕ ವಿದ್ವಾಂಸರ ದೃಷ್ಟಿಯಲ್ಲಿ ಮನು ಮತ್ತು ಮನುಸ್ಮೃತಿಗೆ ಅತ್ಯಂತ ಮನ್ನಣೆ ಇದೆ. 
೬) ಮನುವಿನ ವಿಗ್ರಹವು ಸರ್ವೋಚ್ಛ ನ್ಯಾಯಲಯದಲ್ಲಿಯೂ (ಸುಪ್ರೀಂ ಕೋರ್ಟ್) ಇದೆ. 
೭) ದೇಶದ ಹೊರಗಡೆ ಮನುವಿಗೆ ಮಹತ್ತರವಾದ ಗೌರವಾದರಣೆಗಳಿವೆ. 
೮) ಮನು ಮಾನವ ಜನಾಂಗಕ್ಕೆ ಪಿತೃ ಸಮಾನನಾದವನು.
೯) ಮನುವಿನ ವರ್ಣವ್ಯವಸ್ಥೆ ತರ್ಕಬದ್ಧವಾದುದು.
೧೦) ಮನುವಿನ ದೃಷ್ಟಿಯಲ್ಲಿ ಶೂದ್ರರು ಅಸ್ಪೃಶ್ಯರಲ್ಲ.
೧೧) ಮನುವಿನ ಶಿಕ್ಷಾಸ್ಮೃತಿ ಶೂದ್ರರಿಗೆ ವಿರೋಧಿಯಲ್ಲ.
೧೨) ವರ್ಣವನ್ನು ಬದಲಾಯಿಸಿಕೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ಚರಿತ್ರೆಯಲ್ಲಿ ಅನೇಕ ಉದಾಹರಣೆಗಳು ಮತ್ತು ಆಧಾರಗಳು ಇವೆ.
೧೩) ಮನುವಿನ ವಿಧಾನದ ಪ್ರಕಾರ ವರ್ಣವನ್ನು ಬದಲಾಯಿಸಿಕೊಳ್ಳುವುದು ಆಧುನಿಕ ಕಾಲದಲ್ಲಿ ಸರ್ವಸಾಧಾರಣವಾದ ವಿಷಯ. 
೧೪) ಮನುಸ್ಮೃತಿಯಲ್ಲಿ ಅಭ್ಯಂತರಕರವೆಂದು ಪದೇ ಪದೇ ಕೇಳಿಬರುವ ಶ್ಲೋಕಗಳು ಉದ್ದೇಶಪೂರ್ವಕವಾಗಿ ಮಧ್ಯದಲ್ಲಿ ಸೇರಿಸಿದವುಗಳು (ಪ್ರಕ್ಷಿಪ್ತಗಳು).
೧೫) ಮನುಸ್ಮೃತಿಯಲ್ಲಿ ಸೇರಿಸಲ್ಪಟ್ಟಿರುವ ಆ ಅಭ್ಯಂತರಕರವಾದ ಶ್ಲೋಕಗಳು ಪ್ರಕ್ಷಿಪ್ತವೆನ್ನುವುದು ಅನುಮಾನಕ್ಕೆಡೆಯಿಲ್ಲದೆ ರುಜುವಾತಾಗಿದೆ. 
ಅಹವಾಲುದಾರನ (Petitioner) ಸ್ಥಾಯಿಯಲ್ಲಿ ನನ್ನ ವಾದವನ್ನು ಮಂಡಿಸಬೆಕೆಂದು ನ್ಯಾಯಾಲಯವು ಸೂಚಿಸಿತು. ನನಗೆ ಕೊಟ್ಟಂತಹ ಸಮಯವೂ ಬಹಳ ಕಡಿಮೆಯಾಗಿತ್ತು. ಆದ್ದರಿಂದ ನಾನು ಮನುವಿನ ವಿಗ್ರಹದ ಸ್ಥಾಪನೆಯನ್ನು ವಿರೋಧಿಸುತ್ತಿದ್ದ ಪ್ರತಿವಾದಿ (Defendent) ಹಿರಿಯ ವಕೀಲರಿಗೆ ಹೀಗೆ ಭಿನ್ನವಿಸಿದೆ, "ನನ್ನ ಅಹವಾಲು ಅರ್ಜಿ (Petition) ೧೫ ಅಂಶಗಳನ್ನು ಒಳಗೊಂಡಿದೆ. ಸಮಯಾಭಾವವಿರುವುದರಿಂದ, ಇವುಗಳಲ್ಲಿ ಬಲಹೀನವಾದದ್ದು ಎಂದು ನೀವು ಭಾವಿಸುವ ಯಾವುದಾದರೂ ಮೂರು ವಿಷಯಗಳ ಮೇಲೆಯೇ ನನ್ನ ವಾದವನ್ನು ಮಂಡಿಸಿ ಉಳಿದ ಅಂಶಗಳನ್ನು ಕೈಬಿಡುತ್ತೇನೆ."
ತನ್ನ ವಾದಸರಣಿಯಲ್ಲಿ ಬಲಹೀನವಾದ ಕೇವಲ ಮೂರು ಅಂಶಗಳ ಮೇಲಷ್ಟೆ ವಾದಿಸುತ್ತೇನೆಂದು ಒಂದು ವ್ಯಾಜ್ಯದಲ್ಲಿ ಅರ್ಜಿದಾರ ಹೇಳುವುದು, ಆ ಮೂರು ಅಂಶಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರತಿವಾದಿ ವಕೀಲರಿಗೇ ಬಿಟ್ಟುಕೊಡುವುದು ನೋಡುಗರಿಗೆ ವಿಚಿತ್ರವಾಗಿ ಕಾಣಿಸಿತು. ಆದರೆ ಪ್ರತಿವಾದಿ ವಕೀಲರು ನನ್ನ ಪ್ರಸ್ತಾಪಕ್ಕೆ ಯಾವುದೇ ವಿಧದಲ್ಲಿಯೂ ಸ್ಪಂದಿಸಲಿಲ್ಲ. ಆ ಕಡೆಯಿಂದ ಉತ್ತರ ಬರದೇ ಇದ್ದುದನ್ನು ಗಮನಿಸಿದ ನ್ಯಾಯಾಲಯವು ಆ ಹದಿನೈದು ಅಂಶಗಳ ಸಾರಾಂಶವನ್ನು ತಮ್ಮ ಮುಂದೆ ಇಡುವಂತೆ ಅಹವಾಲುದಾರನಾದ ನನಗೆ ಆದೇಶಿಸಿತು. 
ನ್ಯಾಯಾಲಯದ ಆದೇಶದಂತೆ ನನ್ನ ವಾದವನ್ನು ಮಂಡಿಸಲು ಸಂಪೂರ್ಣವಾಗಿ ಮೂರು ದಿವಸಗಳು ಹಿಡಿದವು. ನ್ಯಾಯಾಲಯವು ನನ್ನ ಮಾತುಗಳನ್ನು ಶ್ರದ್ಧೆಯಿಂದ ಆಲಿಸಿತು. 
ಇನ್ನು ಪ್ರತಿವಾದಿ ವಕೀಲರು ತಮ್ಮ ವಾದವನ್ನು ಮಂಡಿಸುವ ಸಮಯವು ಬಂದಿತು. ಆ ವಕೀಲರು ಏನೂ ಮಾತನಾಡದೆ ತಮ್ಮ ದೃಷ್ಟಿಯನ್ನು ಬೇರೆಲ್ಲೋ ನೆಟ್ಟರು. ಆಗ ನ್ಯಾಯಾಲಯವು ಈ ವಿಧವಾಗಿ ದಾಖಲಿಸಿತು,
"The advocates disparging Manu could not dare say anything in reply even though the Court waited for twenty long minutes for securing a reply" 
    "ಮನುವನ್ನು ಕೆಟ್ಟವನೆಂದು ಬಿಂಬಿಸಲು ಬಯಸಿದ ಆ ಪ್ರತಿವಾದಿ ವಕೀಲರ ಪ್ರತ್ಯುತ್ತರಕ್ಕಾಗಿ ನ್ಯಾಯಾಲಯವು ಸಂಪೂರ್ಣವಾಗಿ ಇಪ್ಪತ್ತು ನಿಮಿಷಗಳ ಕಾಲ ನಿರೀಕ್ಷಿಸಿದರೂ ಸಹ ಆ ವಕೀಲರು ಯಾವುದೇ ವಿಧವಾದ ಉತ್ತರವನ್ನು ಕೊಡುವ ಸಾಹಸವನ್ನು ಮಾಡಲಾರದೇ ಹೋದರು" 
    ಕಟ್ಟಕಡೆಗೆ ನ್ಯಾಯಾಲಯವು ಮಧ್ಯಂತರ ಆದೇಶವನ್ನು ಜಾರಿ ಮಾಡಿತು. ನ್ಯಾಯಾಲಯದ ಆವರಣದಿಂದ ಮನುವಿನ ವಿಗ್ರಹವನ್ನು ಬೇರೊಂದು ಜಾಗಕ್ಕೆ ಸ್ಥಳಾಂತರಿಸಬೇಕೆಂದು ೨೮ನೇ ಜುಲೈ, ೧೯೮೯ರ ಹೊರಡಿಸಿದ್ದ ಆದೇಶವನ್ನು ಈ ಹೊಸ ಆದೇಶದ ಅನ್ವಯ ತಡೆಯೊಡ್ಡಿತು. ಇದರ ಪರಿಣಾಮವಾಗಿ ಆ ವಿಗ್ರಹವು ಮೊದಲು ಸ್ಥಾಪಿಸಲ್ಪಟ್ಟ ಜಾಗದಲ್ಲೇ ಇಂದಿಗೂ ಇದೆ. 
                                                                                                 -ಧರ್ಮಪಾಲ್ ಆರ್ಯ
೧೦ ಆಗಸ್ಟ್, ೧೯೯೫                                                                             ಕಾರ್ಯದರ್ಶಿ,
                                                                                          ಮನುಪ್ರತಿಷ್ಠಾನ ಸಂಘರ್ಷ ಸಮಿತಿ
    (ಡಾಕ್ಟರ್ ಸುರೇಂದ್ರಕುಮಾರ್ ಅವರು ರಚಿಸಿದ "Opposition to Manu - Why? ಗ್ರಂಥಕ್ಕೆ ಬರೆದ ಮುನ್ನುಡಿಯ ಭಾಗದಿಂದ) 
    
ಈ ಲೇಖನಕ್ಕೆ ಪೂರಕವಾದ ಹಳೆಯ ಲೇಖನ ಭಾಗ - ೧ ಮನುವಿನ ಧರ್ಮ: ನಮಗೆ ಬೇಡವಾದ ಮನು ಓದಲು ಈ ಕೊಂಡಿಯನ್ನು ನೋಡಿ https://sampada.net/node/48574
                                                                 *****
    ಈ ಸರಣಿಯ‌ ಹಿಂದಿನ‌ ಲೇಖನ ಭಾಗ - ೧೭ ಮನುವಿನ ಧರ್ಮ: ಪರಿಚ್ಛೇದ ೨ ಪ್ರಸಿದ್ಧರ ಹೇಳಿಕೆಗಳು ಓದಲು ಈ ಕೊಂಡಿಯನ್ನು ನೋಡಿ: https://sampada.net/blog/bhaaga-17-manauvaina-dharama-paraicachaeeda-2-parasaidadhara-haeelaikaegalau/10-10-2019/48934

ಚಿತ್ರ ಕೃಪೆ: ಗೂಗಲ್

"ಮನುವಿನ ಧರ್ಮ: ನಮಗೆ ಬೇಡವಾದ ಮನು" ಈ ಲೇಖನ ಮಾಲಿಕೆಯನ್ನು ಸಿದ್ಧಪಡಿಸಲು ಉಪಯುಕ್ತವಾದ ಆಕರ ಗ್ರಂಥಗಳು - 
 Manu Dhrama Shastra - Kewal Motwani
Laws of Manu - George Buhler
Family Law and customary Law in Asia - David Buxman
The Spirit of Hindu Law - Donald Davis
Hindu Law: Beyond Tradition and Modernity - Nerner Menski 
Islam and the Secular State - Abdullahi Ahmed An-Naim
Annihilation of Caste - Dr. B. R. Ambedkar
Castes in India - Dr. B.R.Ambedkar
Dr. Baba Saheb Ambedkar Writings and Speeches, Vol. 3
Bible in India - L.A. Jacolliot
Caste, Culture and Socialism - Swami Vivekanda
Opposition to Manu - Why? - R. Surendra Kumar
Manu Smriti, 2 Vols. - Ed. N.C. Panda
Olad Testament - Holy Bible
ತೆಲುಗು ಗ್ರಂಥಗಳು
ಮನುಸ್ಮೃತಿ - ಸರಸ್ವತಿ ವೇಂಕಟ ಸುಬ್ಬರಾಮಶಾಸ್ತ್ರಿ (ವಾವಿಳ್ಳ)
ಮನುಸ್ಮೃತಿ - ಎನ್. ಎಲ್. ನರಸಿಂಹಾಚಾರ್ಯ
ಮನುಸ್ಮೃತಿ - ಅನುವಾದ: ಆರಮಂಡ್ಲ ವೆಂಕಯ್ಯಾರ್ಯ
ಮನುಧರ್ಮಶಾಸ್ತ್ರಮು - ಕೆ.ವೈ.ಎಲ್. ನರಸಿಂಹರಾವ್
ಪರಿಶುದ್ಧ ಗ್ರಂಥಮು
ವಿಶುದ್ಧ ಮನುಸ್ಮೃತಿ - ಆರ್. ಸುರೇಂದ್ರಕುಮಾರ್, ಅನು: ಸಿ.ವಿ. ರಮಣಾ ರೆಡ್ಡಿ
ವಾಲ್ಮೀಕಿ ರಾಮಾಯಣಂ
ವ್ಯಾಸ ಮಹಾಭಾರತಂ
ಮನುಧರ್ಮಶಾಸ್ತ್ರಂ, ಶೂದ್ರ, ದಳಿತ ಬಾನಿಸತ್ವಂ - ಸೀ.ವಿ. 
ಮನುಸ್ಮೃತಿ ಮೈನಸ್ ಅಬದ್ಧಂ - ರಾವಿಪೂಡಿ ವೆಂಕಟಾದ್ರಿ 

ಇತರ ಗ್ರಂಥಗಳು (ಕನ್ನಡ ಅನುವಾದಕರಿಗೆ ಉಪಯೋಗವಾದದ್ದು) 
೧) ಭಾರತೀಯ ಸ್ಮೃತಿಗಳು - ವಿದ್ವಾನ್ ರಘುಸುತ
೨) ಮನುಸ್ಮೃತಿ ಸಾರ - ಎನ್. ಕೆ. ನಾರಾಯಣ ಮೂರ್ತಿ
೩) Justinian Law Correct - ಗೂಗಲ್ 
೪) Worldproject.org/bible/kn - ಹಳೆ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆ 
*****

ಸರಣಿ: ಮನುವಿನ ಧರ್ಮ - ೧೮
TAXONOMY UPGRADE EXTRAS - ಎಂ.ವಿ.ಆರ್ ಶಾಸ್ತ್ರಿ, ಮನುಧರ್ಮ, Opposition to Manu - Why?, 

ಬ್ಲಾಗ್ ವರ್ಗಗಳು - ಮನುಸ್ಮೃತಿ, ಧರ್ಮಪಾಲ್ ಆರ್ಯ, ಡಾ! ಸುರೇಂದ್ರಕುಮಾರ್ 

File attachments
Rating
Average: 4 (3 votes)

Comments

Submitted by Iynanda Prabhukumar Thu, 10/17/2019 - 12:21

ನಮ್ಮ ವೇದಗಳಲ್ಲಿ ಹೀಗಿವೆ, ಪುರಾಣ-ಶಾಸ್ತ್ರಗಳಲ್ಲಿ ಹೀಗಿವೆ, ರಾಮಾಯಣ, ಮಹಾಭಾರತ, ಭಗವದ್ಗೀತೆಯಲ್ಲಿ ಹೀಗೆ ಹೇಳಲಾಗಿದೆ, ಎಂದೆಲ್ಲಾ ಜೀವನದ ಧರ್ಮ-ಕರ್ಮಗಳ ಆಚರಣೆಯ ಹಲವು ಸಂದರ್ಭಗಳಲ್ಲಿ ಹೇಳಲಾಗುತ್ತದೆಯೇ ಹೊರತು ಮನುಸ್ಮೃತಿಯ ಪ್ರಕಾರ ಹೀಗಿದೆ ಎಂದು ಸಾಮಾನ್ಯವಾಗಿ ಹೇಳುವ ಪರಿಪಾಟ ಅದ್ಯಾಕೋ ಇಲ್ಲ. ಹೀಗಾಗಿ ಮನುಸ್ಮೃತಿ ಎಂದರೆ ಏನು, ಅದರಲ್ಲಿ ಏನಿವೆ, ಈ ಮುಂತಾಗಿ ಬಹಳ ಜನರಿಗೆ ತಿಳಿಯದು. ತಮ್ಮ ಲೇಖನಮಾಲೆ ಈ ನ್ಯೂನತೆ (ಶೂನ್ಯತೆಯೆಂದೇ ಹೇಳಬಹುದೇನೋ) ಬಹುಮಟ್ಟಿಗೆ ಹೋಗಲಾಡಿಸಿದೆ. 

ಅನಂತ ಧನ್ಯವಾದಗಳು.

Submitted by makara Thu, 10/17/2019 - 13:55

In reply to by Iynanda Prabhukumar

ಪ್ರಭುಕುಮಾರ್ ಸರ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಬಹುಶಃ ಅಧ್ಯಯನ ನಡೆಸದೆ ಅತೀ ಹೆಚ್ಚು (ಕು)ವ್ಯಾಖ್ಯಾನಕ್ಕೊಳಪಟ್ಟ ಬಹುಶಃ ಪ್ರಪಂಚದಲ್ಲಿ ಮನುಸ್ಮೃತಿಯೊಂದೇ ಏನೋ? ಹಾಗಾಗಿ ವಾಚಕರಿಗೆ ಮನುಸ್ಮೃತಿಯ ಒಂದು ಪ್ರಾಥಮಿಕ ಪರಿಚಯ ಮಾಡಿಸೋಣವೆಂದು ಈ ಲೇಖನ ಮಾಲಿಕೆಯನ್ನು ಬರೆಯುವ ಸಾಹಸ ಕೈಗೊಂಡೆ. ನಿಮ್ಮಂತಹ ಹಿರಿಯರು ಇದನ್ನು ಶ್ಲಾಘಿಸಿರುವುದರಿಂದ ನನ್ನ ಶ್ರಮ ಸಾರ್ಥಕವಾದಂತೆ. ಸಸ್ನೇಹ ನಮಸ್ಕಾರಗಳೊಂದಿಗೆ, ಶ್ರೀಧರ್ ಬಂಡ್ರಿ :)