ಗೀತಾಮೃತ - 14

ಗೀತಾಮೃತ - 14

*ಅಧ್ಯಾಯ ೪*

*ಯಜ್ಞಶಿಷ್ಟಾಮೃತಭುಜೋ ಯಾಂತಿ ಬ್ರಹ್ಮ ಸನಾತನಮ್/*

*ನಾಯಂ ಲೋಕೋಸ್ತ್ಯಯಜ್ಞಸ್ಯ ಕುತೋನ್ಯ: ಕುರುಸತ್ತಮ//೩೧//*

     ಹೇ ಕುರುಶ್ರೇಷ್ಠನಾದ ಅರ್ಜುನನೇ! ಯಜ್ಞದಲ್ಲಿ ಉಳಿದ ಅಮೃತವನ್ನು ಅನುಭವಿಸುವ ಯೋಗಿಗಳು ಸನಾತನ  ಪರಬ್ರಹ್ಮ ಪರಮಾತ್ಮನನ್ನು ಹೊಂದುತ್ತಾರೆ ಮತ್ತು ಯಜ್ಞವನ್ನು ಮಾಡದಿರುವ ಪುರುಷನಿಗಾದರೋ ಈ ಮನುಷ್ಯಲೋಕವೂ ಕೂಡ ಸುಖದಾಯಕವಾಗಿಲ್ಲ, ಮತ್ತೆ ಪರಲೋಕವು ಹೇಗೆ ಸುಖದಾಯಕವಾಗಬಲ್ಲದು?

 *ಏವಂ ಬಹುವಿಧಾ ಯಜ್ಞಾವಿತತಾ ಬ್ರಹ್ಮಣೋ ಮುಖೇ/*

*ಕರ್ಮಜಾನ್ವಿದ್ಧಿ ತಾನ್ಸರ್ವಾನೇವಂ ಜ್ಞಾತ್ವಾವಿಮೋಕ್ಷ್ಯಸೇ//೩೨//*

     ಇದೇ ಪ್ರಕಾರ ಇನ್ನು ಅನೇಕ ವಿಧವಾದ ಯಜ್ಞಗಳು ವೇದವಾಣಿಯಲ್ಲಿ ವಿಸ್ತಾರವಾಗಿ ಹೇಳಲಾಗಿದೆ.ಅವೆಲ್ಲವನ್ನೂ ನೀನು ಮನಸ್ಸು,ಇಂದ್ರಿಯ ಮತ್ತು ಶಾರೀರಿಕ ಕ್ರಿಯೆಗಳ ಮೂಲಕ ನಡೆಯುವುದೆಂದು ತಿಳಿ.ಈ ಪ್ರಕಾರವಾಗಿ ತತ್ತ್ವದಿಂದ ತಿಳಿದು ಅವುಗಳ ಅನುಷ್ಠಾನದ ಮೂಲಕ ನೀನು ಕರ್ಮಬಂಧನದಿಂದ ಸರ್ವಥಾ ಮುಕ್ತನಾಗುವೆ.

***

*ಶ್ರೇಯಾನ್ದ್ರವ್ಯಮಯಾದ್ಯಜ್ಞಾತ್ ಜ್ಞಾನಯಜ್ಞ: ಪರಂತಪ//*

*ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ//೩೩//*

    ಹೇ ಪರಂತಪ,ಅರ್ಜುನನೇ! ದ್ರವ್ಯಮಯವಾದ ಯಜ್ಞಕ್ಕಿಂತಲೂ ಜ್ಞಾನಯಜ್ಞವು ಅತ್ಯಂತ ಶ್ರೇಷ್ಠ ವಾಗಿದೆ,ಹಾಗೂ ಯಾವನ್ಮಾತ್ರ ಸಂಪೂರ್ಣಕರ್ಮಗಳು ಜ್ಞಾನದಲ್ಲಿ ಸಮಾಪ್ತಿಯಾಗುತ್ತವೆ.

*ತದ್ವದ್ಧಿ ಪ್ರಣಿಪಾತೇನ  ಪರಿಪ್ರಶ್ನೇನ  ಸೇವಯಾ*/*

*ಉಪದೇ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದರ್ಶಿನ://೩೪//*

       ಆ ಜ್ಞಾನವನ್ನು ನೀನು ತತ್ತ್ವದರ್ಶಿಗಳಾದ ಜ್ಞಾನಿಗಳ ಬಳಿಗೆ ಹೋಗಿ ತಿಳಿದುಕೋ.ಅವರಿಗೆ ಚೆನ್ನಾಗಿ ಶ್ರದ್ಧೆಯಿಂದ ದಂಡವತ್ ಪ್ರಣಾಮ ಮಾಡುವುದರಿಂದ ,ಅವರ ಸೇವೆಮಾಡುವುದರಿಂದ ಪ್ರಣಾಮ ಮಾಡುವುದರಿಂದ ,ಅವರ ಸೇವೆ ಮಾಡುವುದರಿಂದ ಮತ್ತು ಕಪಟವನ್ನು ಬಿಟ್ಟು ಸರಳತಾಪೂರ್ವಕವಾಗಿ ಪ್ರಶ್ನೆಮಾಡುವುದರಿಂದ ಪರಮಾತ್ಮ ತತ್ತ್ತ್ವವನ್ನು ಚೆನ್ನಾಗಿ ತಿಳಿದಿರುವ ಆ ಜ್ಞಾನಿಗಳೂ, ಮಹಾತ್ಮರೂ ನಿನಗೆ ತತ್ತ್ವಜ್ಞಾನದ ಉಪದೇಶವನ್ನು ಮಾಡುವರು.

***

*ಯಜ್ಞಾತ್ವಾನ ಪುನರ್ಮೋಹಮೇವಂ ಯಾಸ್ಯಸಿ ಪಾಂಡವ/*

*ಯೇನ ಭೂತಾನ್ಯಶೇಷೇಣ ದ್ರಕ್ಷ್ಯಸ್ಯಾತ್ಮನ್ಯಥೋ ಮಯಿ//೩೫//*

  ಯಾವುದನ್ನು ತಿಳಿದುಕೊಂಡ ಬಳಿಕ ನೀನು ಪುನ: ಈ ಪ್ರಕಾರವಾದ ಮೋಹವನ್ನು ಪಡೆಯಲಾರೆಯೋ ಹಾಗೂ ಹೇ ಅರ್ಜುನನೇ ! ಯಾವ ಆ ಜ್ಞಾನದ  ಮೂಲಕ ನೀನು ಸಮಸ್ತ ಭೂತಗಳನ್ನು ನಿಶ್ಯೇಷಭಾವದಿಂದ ,ಮೊದಲು ತನ್ನಲ್ಲಿ ಅನಂತರ ಸಚ್ಚಿದಾನಂದ ಘನ ಪರಮಾತ್ಮನಾದ ನನ್ನಲ್ಲಿ ನೋಡುವೆ.

     *ಅಪಿ ಚೇದಸಿ ಪಾಪೇಭ್ಯ: ಸರ್ವೇಭ್ಯ: ಪಾಪಕೃತ್ತಮ:/*

*ಸರ್ವಂ ಜ್ಞಾನಪ್ಲವೇನೈವ ವೃಜಿನಂ ಸಂತರಿಷ್ಯತಸಿ//೩೬//*

   ಒಂದು ವೇಳೆ ನೀನು ಬೇರೆಲ್ಲ ಪಾಪಿಗಳಿಗಿಂತಲೂ ಹೆಚ್ಚು ಪಾಪಗಳನ್ನು ಮಾಡಿರುವೆ ಎಂದರೂ  ಸಹ ನೀನು ಜ್ಞಾನರೂಪೀ ದೋಣಿಯ ಮೂಲಕ ನಿಸ್ಸಂದೇಹವಾಗಿ  ಸಂಪೂರ್ಣವಾದ ಪಾಪ _ ಸಮುದ್ರದಿಂದ ಸುಲಭವಾಗಿ ಪಾರಾಗಿಬಿಡುವೆ.

***

 *ಯಥೈಧಾಂಸಿ ಸಮಿದ್ಧೋಗ್ನಿರ್ಭಸ್ಮಸಾತ್ಕುರುತೇರ್ಜುನ/*

*ಜ್ಞಾನಾಗ್ನಿ: ಸರ್ವಕರ್ಮಾಣಿ ಭಸ್ಮಸಾತ್ಕುರುತೇ ತಥಾ//೩೭//*

   ಏಕೆಂದರೆ ಹೇ ಅರ್ಜುನನೇ! ಹೇಗೆ ಪ್ರಜ್ವಲಿತವಾದ ಅಗ್ನಿಯು ಇಂಧನಗಳನ್ನು ಭಸ್ಮಮಯಮಾಡಿ  ಬಿಡುತ್ತದೆಯೋ,ಹಾಗೆಯೇ ಜ್ಞಾನರೂಪೀ ಅಗ್ನಿಯು ಸಂಪೂರ್ಣ ಕರ್ಮಗಳನ್ನು ಭಸ್ಮಮಯಮಾಡಿ ಬಿಡುತ್ತದೆ.

*ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ/*

*ತತ್ತ್ವಯಂ ಯೋಗಸಂಸಿದ್ಧ: ಕಾಲೇನಾತ್ಮನಿ ವಿಂದತಿ//೩೮//*

      ಈ ಜಗತ್ತಿನಲ್ಲಿ ಜ್ಞಾನಕ್ಕೆ ಸಮಾನವಾಗಿ ಪವಿತ್ರಗೊಳಿಸುವಂತಹುದು ನಿ:ಸಂದೇಹವಾಗಿ ಯಾವುದೂ ಇಲ್ಲ.ಆ ಜ್ಞಾನವನ್ನು ಎಷ್ಟೋ ಕಾಲದಿಂದ ಕರ್ಮಯೋಗದ ಮೂಲಕ ಶುದ್ಧಾಂತ:ಕರಣವುಳ್ಳ ಮನುಷ್ಯನು,ತನ್ನಿಂದತಾನೇ ಆತ್ಮನಲ್ಲಿ ಪಡೆದುಕೊಳ್ಳುತ್ತಾನೆ.

***

*ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರ: ಸಂಯತೇಂದ್ರಿಯ:/*

*ಜ್ಞಾನಂ ಲಬ್ದ್ವಪರಾಂ ಶಾಂತಿಮಚಿರೇಣಾಧಿಗಚ್ಛತಿ//೩೯//*

       ಜಿತೇಂದ್ರಿಯನೂ,ಸಾಧನಪಾರಾಯಣನೂ ಮತ್ತು ಶ್ರದ್ಧಾವಂತನೂ ಆದ ಮನುಷ್ಯನು ಜ್ಞಾನವನ್ನು ಪಡೆಯುತ್ತಾನೆ ಹಾಗೂ ಜ್ಞಾನವನ್ನು ಪಡೆದುಕೊಂಡು ಅವನು ವಿಳಂಬವಿಲ್ಲದೆ ಭಗವತ್ ಪ್ರಾಪ್ತಿರೂಪೀ ಪರಮ ಶಾಂತಿಯನ್ನು ಹೊಂದುತ್ತಾನೆ.

 *ಅಜ್ಞಶ್ಷಾಶ್ರದ್ಧಧಾನಶ್ಚ ಸಂಶಯಾತ್ಮಾ ವಿನಶ್ಯತಿ/*

*ನಾಯಂ ಲೋಕೋಸ್ತಿನ ಪರೋ ನ ಸಂಶಯಾತ್ಮನ://೪೦//*

    ‌‌ವಿವೇಕಹೀನನೂ ,ಶ್ರದ್ಧಾರಹಿತನೂ ಮತ್ತು ಸಂಶಯಯುಕ್ತನಾದ ಮನುಷ್ಯನು ಪರಮಾರ್ಥದಿಂದ ಅವಶ್ಯವಾಗಿ ಭ್ರಷ್ಟನಾಗಿ ಹೋಗುತ್ತಾನೆ.ಇಂತಹ ಸಂಶಯವುಳ್ಳ ಮನುಷ್ಯನಿಗೆ ಇಹಲೋಕವೂ ಇಲ್ಲ,ಪರಲೋಕವೂ ಇಲ್ಲ ಮತ್ತು ಸುಖವೂ ಇಲ್ಲ.

***

-ವಿಜಯಾ ಶೆಟ್ಟಿ ಸಾಲೆತ್ತೂರು (ಸಾರ ಸಂಗ್ರಹ)

 

Comments