ಇಂದ್ರನ ಗಿಡದ ಉಪಯೋಗ ಗೊತ್ತೇ?

ಇಂದ್ರನ ಗಿಡದ ಉಪಯೋಗ ಗೊತ್ತೇ?

ಕರಡಿ ಕಣ್ಣಿನ ಗಡ್ಡೆ, ಕೊಳಿಕುಟುಕನ ಗಡ್ಡೆ, ಅಗ್ನಿ ಶಿಖಾ ಅಂತ ಕರೆಯುವ ಈ ಗಿಡ ಶ್ರಾವಣ ಭಾದ್ರಪದ ಮಾಸದಲ್ಲಿ ಹೂ ಬಿಟ್ಟು ನಮ್ಮ ದೃಷ್ಟಿ ತನ್ನ ಕಡೆ ತಿರುಗುವಂತೆ ಮಾಡುತ್ತದೆ. ಕೆಲವೆಡೆ ಗೌರಿ ಹೂ ಎಂದೂ ಕರೆಯುತ್ತಾರೆ. ಹೊಸದಾಗಿ ಬಂದ ಹೂ ತುದಿಯಲ್ಲಿ ಕೆಂಪು ಬುಡದಲ್ಲಿ ಹಳದಿ. ಇದು ಉರಿಯುವ ಬೆಂಕಿಗೆ ಹೋಲಿಕೆ ಆಗುತ್ತದೆ. ಇದು ಮದ್ಯಮ ವಿಷಯುಕ್ತ. ಅಂದರೆ ತಪ್ಪಿ ಸೇವಿಸಿದರೆ ವಾಂತಿ ಭೇದಿ ಉಂಟಾಗುತ್ತದೆ. ಇದರ ಗಡ್ಡೆ ಮತ್ತು ಎಲೆಗಳನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. 

ಶುದ್ಧೀಕರಣ ಮಾಡುವ ವಿಧಾನ: ಗಡ್ಡೆ ಕಿತ್ತು ತೊಳೆದು ನೀರು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿ ಪಾತ್ರೆಗೆ ಹಾಕಿ ಮುಚ್ಚಿಡಿ. ಗಡ್ಡೆಯಲ್ಲಿ ಇರುವ ಸತ್ವ ಹಿಟ್ಟಿನ ರೂಪದಲ್ಲಿ ತಳದಲ್ಲಿ ನಿಲ್ಲುತ್ತದೆ. ಮಾರನೆಯ ದಿನ ಮೇಲಿನ ನೀರು ಬಗ್ಗಿಸಿ ಹೊಸ ನೀರು ಹಾಕಿ ಕಲಕಿ ಮತ್ತೆ ಮುಚ್ಚಿಡಿ. ಹೀಗೆ ಏಳು ದಿನಕ್ಕೆ ಶುದ್ಧವಾಗುತ್ತದೆ. ನಂತರ ಹಿಟ್ಟನ್ನು ಬಿಸಿಲಿನಲ್ಲಿ ಬಟ್ಟೆಯನ್ನು ಮುಚ್ಚಿ ಒಣಗಿಸಿ ಗಾಳಿ ಆಡದಂತೆ ತುಂಬಿ ಇಟ್ಟುಕೊಳ್ಳಬೇಕು. ಇದು ಹೊಟ್ಟೆಗೆ ತೆಗೆದುಕೊಳ್ಳಲು.

1) ಗಾಜು ಅಥವಾ ಮುಳ್ಳು ಒಳಗೆ ಹೋಗಿ ತೊಂದರೆ ಆಗಿದ್ದರೆ ಗಡ್ಡೆ ಅರೆದು ಪೇಸ್ಟ್ ಮಾಡಿ ಹಚ್ಚಿದರೆ ಒಳಗಿರುವ ಮುಳ್ಳು ತಾನೆ ತಾನಾಗಿ ಹೊರ ಬರುತ್ತದೆ.

2) ಕಾಲು ಮತ್ತು ಕೈಯ ಹೆಬ್ಬೆರಳಿಗೆ ಎಡಭಾಗದಲ್ಲಿ ಇದ್ದರೆ ಬಲಕ್ಕೆ ಬಲದಲ್ಲಿ ಇದ್ದರೆ ಎಡಕ್ಕೆ ಹಚ್ಚಿದರೆ ಕ್ರಿಮಿಯುಕ್ತ ಹಲ್ಲು ನೋವು ಗುಣವಾಗುತ್ತದೆ.

3) ಕೀಟಗಳು ಕಡಿದಾಗ ಗಡ್ಡೆ ತೇದು ಹಚ್ಚಿದರೆ ನಂಜು ನಿವಾರಕ.

4) ಶುದ್ಧೀಕರಣವಾದ ಗಡ್ಡೆಯ ಪುಡಿ ಹಾವು, ಚೇಳು ಕಡಿತದಲ್ಲಿ ಮತ್ತು ಕುಷ್ಠ, ಮೂಲವ್ಯಾಧಿ, ಗೊನ್ಹೊರಿಯಾ ಗುಣ ಪಡಿಸುವುದರಲ್ಲಿ  ಉಪಯುಕ್ತ.

5) ಈ ಗಿಡದ ಸೋಪ್ಪನ್ನು ತಲೆಗೆ ಮಾತ್ರ ಹಚ್ಚಿದರೆ ಹೇನುಗಳು ಸಾಯುತ್ತವೆ. ರಸವನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು.

6) ಸೊಪ್ಪು, ಗಡ್ಡೆ ರಸ ತೆಗೆಯುವಾಗ ಅಕಸ್ಮಾತ್ ಹೊಟ್ಟೆಗೆ ಹೋದರೆ ತುಪ್ಪವನ್ನು ತಿನ್ನಬೇಕು. ನಾಟಿವೈದ್ಯರಿಗೆ ಇದೆಲ್ಲಾ ಅನುಭವಕ್ಕೆ ಬಂದಿರುತ್ತದೆ.

-ಸುಮನಾ ಮಳಲಗದ್ದೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ 

Comments

Submitted by addoor Sat, 08/27/2022 - 12:16

ಸಂಪದದಲ್ಲಿ ಪ್ರಕಟವಾಗುವ ಬರಹಗಳನ್ನು ಜಗತ್ತಿನ ಉದ್ದಗಲದಲ್ಲಿರುವ ಕನ್ನಡಿಗರು ಓದುತ್ತಾರೆ. ಆದ್ದರಿಂದ, ಸಸ್ಯಗಳನ್ನು ಪರಿಚಯಿಸುವಾಗ ಅವುಗಳ ಸಸ್ಯಶಾಸ್ತ್ರೀಯ ಹೆಸರುಗಳನ್ನು ಲೇಖನದಲ್ಲಿ ನಮೂದಿಸುವುದು ಅಗತ್ಯ, ಅಲ್ಲವೇ?