ದ್ವಿಭಾಷಾ ಅಕ್ಷರರೂಪ? ಕನ್ನಡಿಗರು ಈಗ ಹತ್ತು ಹೆಜ್ಜೆ ಹಿಂದಕ್ಕೆ!

ದ್ವಿಭಾಷಾ ಅಕ್ಷರರೂಪ? ಕನ್ನಡಿಗರು ಈಗ ಹತ್ತು ಹೆಜ್ಜೆ ಹಿಂದಕ್ಕೆ!

"ಇವತ್ತು ಸರಕಾರ ನೋಟಿಫಿಕೇಶನ್ ಹೊರಡಿಸಿದೇರಿ. ಬೈ-ಲಿಂಗ್ಯುಯಲ್ ಫಾಂಟ್ಸ್ ಅಂತೆ"
ಪತ್ರಕರ್ತ ಸ್ನೇಹಿತರೊಬ್ಬರು ಫೋನಿನಲ್ಲಿ ತಿಳಿಸಿದರು.

"ಹಾಂ?"
ನಿದ್ರೆಯಲ್ಲಿದ್ದೀನಾ ಅನ್ನಿಸಿತು.

ಒಂದೆರಡು ಕ್ಷಣಗಳ ನಂತರವೇ ಕ್ಲಿಯರ್ ಆಗಿದ್ದು: ಎಚ್ಚರವಾಗಿಯೇ ಇದ್ದೀನಿ, ಫೋನಿನಲ್ಲಿ ಆ ಕಡೆಯಿಂದ ಬಂದ ಮಾಹಿತಿಯೂ ನಿಜವೇ ಎಂಬುದು!

ನನಗೆ ತಲೆಯಲ್ಲಿ,
"ಏನಿದು? ಇದ್ಯಾಕೆ ಈಗ ಇಂತದ್ದನ್ನು ಹೊರತರುತ್ತಿದ್ದಾರೆ?

ಹೋಗಲಿ, ಇದೇನು ಬೈಲಿಂಗ್ಯುಯಲ್ ಫಾಂಟ್? ಈಗಾಗಲೇ ಪ್ರಪಂಚದಾದ್ಯಂತ ಎಲ್ಲರಿಂದಲೂ ಬಳಕೆಯರೋ, ವಿಶ್ವವಿಡೀ ಮಾನ್ಯತೆ ಪಡೆದಿರೋ ಯೂನಿಕೋಡ್ ಹಾಗೂ ಅದರಲ್ಲಿನ ಮಲ್ಟಿಲಿಂಗ್ಯುಯಲ್ ಫಾಂಟುಗಳೇ ಇರುವಾಗ!

ಅದೂ ಹಳೆಯ [:http://en.wikipedia.org/wiki/Character_encoding|ಎನ್ಕೋಡಿಂಗ್!] ಇದನ್ನು ಪ್ರಪಂಚದ ಇನ್ನೆಲ್ಲೂ ಸಪೋರ್ಟ್ ಮಾಡೋದಿಲ್ಲ, ಯಾವ ತಂತ್ರಾಂಶದಲ್ಲೂ ನೇಟಿವ್ ಆಗಿ ಸಪೋರ್ಟ್ ಮಾಡೋದಿಲ್ಲ. ಅತ್ತ ತಮಿಳು, ತೆಲುಗು, ಮಲಯಾಳ, ಹಿಂದಿ ಕಂಪ್ಯೂಟರಿನಲ್ಲಿ ವಿಜೃಂಭಿಸುತ್ತಿರುವಾಗ ಮೊದಲೇ ಹಿಂದಿರುವ ಕನ್ನಡ ಇನ್ನೂ ಹಿಂದುಳಿಯೋದಿಲ್ಲವೆ?"
ಎಂದೆಲ್ಲಾ ಆಲೋಚನೆಗಳು ಹರಿದಾಡಿದವು.

ಗೂಗಲ್ ಯೂನಿಕೋಡ್ ಬಳಸುತ್ತದೆ. ಯಾಹೂ ಯೂನಿಕೋಡ್ ಬಳಸುತ್ತದೆ. ಪ್ರಪಂಚದ ಎಲ್ಲ ಮಾನ್ಯತೆ ಪಡೆದಿರುವ ತಂತ್ರಾಂಶಗಳು ಯೂನಿಕೋಡ್ ಬೆಂಬಲದೊಂದಿಗೆ ಹೊರಬರುತ್ತಿವೆ. ನೀವೀಗ ಇಲ್ಲಿ ಓದುತ್ತಿರುವ ಕನ್ನಡವೂ ಯೂನಿಕೋಡ್ ಮೂಲಕ! (ನಾಳೆ ಗೂಗಲ್ಲಿನಲ್ಲಿ "ದ್ವಿಭಾಷಾ ಅಕ್ಷರರೂಪ" ಎಂದು ಸರ್ಚ್ ಮಾಡಿದರೆ ಯೂನಿಕೋಡ್ ನಲ್ಲಿರುವ ಈ ಪುಟ ಸಿಗತ್ತೆ!)

ಭಾಷೆಗಳನ್ನು ಕಂಪ್ಯೂಟರ್ ಜಗತ್ತಿನಲ್ಲಿ ಇಂಗ್ಲೀಷಿಗೆ ಸಮವಾಗಿ ತರಲು ಇರುವ ಹೆದ್ದಾರಿ ಯೂನಿಕೋಡ್ ಎನ್ನಬಹುದು. ಇಷ್ಟೆಲ್ಲದರ ನಡುವೆಯೂ [:http://www.karnataka.gov.in/notification/draft-kannada-bi-lingual-code.pdf|ಕರ್ನಾಟಕದ ಸರಕಾರ ಹತ್ತು ಹೆಜ್ಜೆ ಹಿಂದಕ್ಕೆ ಇಡುತ್ತಿರುವುದು ನೋಡಿದರೆ] ಸುಮಾರು ಪ್ರಶ್ನೆಗಳೇ ಕಾಡುತ್ತವೆ.

Rating
No votes yet

Comments