ಕನ್ನಡ ನಾಡಿಗೆ ಪ್ರಾದೇಶಿಕ ಪಕ್ಷ ಬೇಕೆ?
ಬರಹ
ಭಾಜಪ ಇಲ್ಲಿ ಗದ್ದುಗೆ ಏರಾಗಿದೆ. ಮುಂಬರೋ ಲೋಕಸಭೆ ಚುನಾವಣೇಲಿ ಮತ್ತೆ ಕಾಂಗ್ರೆಸ್ಸೇ ಗೆದ್ದರೆ? ಮತ್ತೆ ನಮ್ಮ ನಾಡು ನುಡಿಯ ಕೆಲಸಗಳಿಗೆ ಕೇಂದ್ರದ ಒತ್ತಾಸೆ ಸಿಗಲಾರದು.ಮತ್ತೆ "ಮಲತಾಯಿ" ಆರೈಕೆ ಶುರುವಾಗತ್ತೆ ಅನ್ನೋ ಭಯ. ಇದು ಸುಮಾರು ೩೦ ವರ್ಷದಿಂದ ಇರೋ ತೊಂದರೆ.
ತಮಿಳುನಾಡಿನ ತರ ಪ್ರಾದೇಶಿಕ ಪಕ್ಷ ಇರಬೇಕು ( ಒಂದಲ್ಲ ಎರಡು) ..ಪ್ರಾದೇಶಿಕ ಪಕ್ಷವಾದರೆ ಯಾವ ಕಡೆಯಿಂದಾದರೂ ಬೇಳೆ ಬೇಯಿಸಬಹುದು. ಕಡೇ ಪಕ್ಷ ಇಲ್ಲಿರೋ ರಾಷ್ಟ್ರೀಯ ಪಕ್ಷಗಳಲ್ಲಿ ಸೆಡ್ಡು ಹೊಡೆದು ನಿಲ್ಲುವಂತ ಗಟ್ಟಿಯಾದ ಮುಂದಾಳುಗಳು ಬೇಕು.
ದೇವೇಗೌಡರ ತರದಲ್ಲದ ಜನ ಬೇಕು. ವಾಟಾಳ್, ಬಂಗಾರಪ್ಪ ಇವರೆಲ್ಲ ಯಾಕೆ ಮುಂದೆ ಬರಲಿಲ್ಲ ಅಥವಾ ಬೆಳೀಲಿಲ್ಲ? ಈಗ ಕರವೇ ಕೂಡ ಅದೇ "ವೇ"ನಲ್ಲಿ ಹೋಗ್ತಾ ಇದೆ. ಕನ್ನಡಿಗರ ಹಣೆಬರಹ ಇಷ್ಟೇನಾ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಕನ್ನಡ ನಾಡಿಗೆ ಪ್ರಾದೇಶಿಕ ಪಕ್ಷ ಬೇಕೆ?