ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ನಮ್ಮ ಅಮ್ಮನ ಮನೆಯಲ್ಲಿ ಇದ್ದಾಗ ನಂಗೆ ಅಡಿಗೆ ಮಾಡೋಕೆ ಬರ್ತಿರಲಿಲ ಅನ್ನೊ ವಿಷಯ ಈಗಾಗಲೆ ಹೇಳಿದೀನಿ ಅದರಿಂದಾದ ಪಜೀತಿನೊ ಒಳ್ಳೆ ಮೆಗಾ ಧಾರವಾಹಿ ತರಹ ಎಳೆದು ಬರೆದಿದ್ದೀನಿ
ಹ್ಯಾಗೊ ಅಲ್ಲಿ ಇಲ್ಲಿ ನೋಡಿ ಕಲಿತು ಒಂದದು ಹುಳಿ , ಸಾರು ಆಂಬೊಡೆ, ಜಾಮೂನು ಇವುಗಳನ್ನ ಚೆನ್ನಾಗಿ ಮಾಡೋದನ್ನ ಕಲ್ತಿದೀನಿ.
ಈಗ ಮೂರು ತಿಂಗಳಿಂದ ನಮ್ಮ ಪತಿರಾಯರು ನಮ್ಮ ಚಿಕ್ಕಮ್ಮ (ಅವರ ಮಗನಿಗೆ ಹೆಣ್ಣು ಹುಡುಕಬೇಕಾದ್ದು) ಮುದ್ದೆ ಎಷ್ಟು ಚೆನ್ನಾಗಿ ಮಾಡ್ತಾರೆ ಗೊತ್ತಾ ಅದೆಲ್ಲಾ ಮಾಡೋಕೆ ಪುಣ್ಯ ಮಾಡಿರಬೇಕು ಅಂತ ಹಂಗಿಸುತಿದ್ದರು.
ನನಗೂ ಸಾಕಾಯಿತು. ಒಮ್ಮೆ ಮಾಡೋಣ ಅಂತ ಕೈ ಹಾಕಿದೆ
ಗಂಟು ಗಂಟಾದ ಗಂಜಿಯ ರೀತಿಯ ರಾಗಿ ಹಿಟ್ಟು ಆಯಿತು
ಇನ್ನು ಮೇಲೆ ಮುದ್ದೆಯ ಹೆಸರೂ ಕೂಡ ಅಪ್ಪಿತಪ್ಪಿ ನಿನ್ನ ಮುಂದೆ ಹೇಳೊದಿಲ್ಲ ಅಂತಂದುಬಿಟ್ಟರು.
ಸರಿ ಮತ್ತೊಮ್ಮೆಸ್ವಲ್ಪ ನೀರು ಕಡಿಮೆ ಹಾಕಿ ಮಾಡಿದೆ
ಹಸಿ ಹಸಿ ಹಿಟ್ಟು ಬಾಯಿಗೆ ಸಿಕ್ಕಿತು
ಈ ಬಾರಿ ಅವರಿಗೆ ಕೊಡಲಿಲ್ಲ
ಹಾಗೆ ಇಂಟರ್ನೆಟ್ನಲ್ಲಿ ಗೂಗಲ್ ಸರ್ಚ್ ಮಾಡಿದೆ ರಾಗಿ ಮುದ್ದೆ ಅಂತ
ಮಧು ಅವರ ಈ ಬ್ಲಾಗ್ನಲ್ಲಿ
http://ruchii.wordpress.com/2006/09/13/ragi-mudde/
ಸಿಕ್ಕಿತು
ಕೊನೆಗೆ ಅವರು ಹೇಳಿದ ಅಳತೆಗೆ ನೀರಿಟ್ಟು ಮಾಡಿದೆ
ಅಬ್ಬಾ i just can't believe it "ಅಷ್ಟೊಂದು ಈಸಿಯಾಗಿ ಬಂತು.
ನಮ್ಮ ಮನೆಯಲ್ಲಿ ಹೇಳಿದ್ದೇ ಹೇಳಿದ್ದು
ಇವರ ಚಿಕ್ಕಮ್ಮ ನೂ ಇಷ್ಟು ಚೆನ್ನಾಗಿ ಮಾಡೋದಿಲ್ಲವಂತೆ. ಅದಕ್ಕೆ ಕಾಳು ಹುಳಿ ಮಾಡಿಕೊಟ್ಟರಂತೂ ಚಪ್ಪರಿಸಿಕೊಂಡು ತಿನ್ನುತ್ತಾರೆ
ಇವರ ಅಮ್ಮನ ಮನೆಗೆ , ನಮ್ಮ ಅಮ್ಮನಿಗೆ, ಅಕ್ಕನಿಗೆ ಎಲ್ಲರಿಗೂ ಈ ಮೆಥೆಡ್ ಹೇಳಿದ್ದೇ ಹೇಳಿದ್ದು.
ನಾನಂತೂ ಯುರೇಕಾ ಅಂತಾ ಆಗಸದ ಮೇಲೆ ತೇಲುತ್ತಿದ್ದೇನೆ
ಅದನ್ನ ಕನ್ನಡದಲ್ಲಿ ಹೇಳೊದಾದರೆ
ಮೊದಲು ಒಂದು ಅಳತೆಯ ನೀರಿಗೆ ಒಂದು ಅಳತೆಯ ಹಿಟ್ಟನ್ನು ಗಂಟಾಗದಂತೆ ಕಲಸಿ
ನಂತರ ಒಂದು ಅಳತೆಯ ನೀರನ್ನು ಕುದಿಯೋಕೆ ಇಟ್ಟು ಕುದ್ದ ಮೇಲೆ ಕಲಸಿಕೊಂಡ ಪೇಸ್ಟ್ನ್ನು ಅದಕ್ಕೆ ಹಾಕೆ ಗೊಟಾಯಿಸಬೇಕು ನಂತರ ಕೆಳಗಿಳಿಸಿಕೊಂಡು ಮುದ್ದೆಯಾಕಾರ ಮಾಡಬೇಕು.
ಮಾಡಿ ನೋಡಿ
ಹುಡುಗರಾ ಇದು ನಮಗಲ್ಲ ಅಂತ ಬಿಗುಮಾನ ಬೇಡ. ಯಾರಿಗೆ ಗೊತ್ತು ಮುಂದೆ ನಿಮ್ಮ ಹೆಂದತಿಯಾಗುವವಳಿಗೆ ಮುದ್ದೆ ಮಾಡಿಕೊಡಬೇಕಾಗೂ ಬರಬಹುದು :)
Comments
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
In reply to ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ by vikashegde
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
In reply to ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ by roopablrao
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
In reply to ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ by roopablrao
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
In reply to ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ by raghava
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ
ಉ: ಗೆದ್ದೆ ರಾಗಿ ಮುದ್ದೆ ಮಾಡಿ ಗೆದ್ದೆ