ಸುದ್ಧಿವಾಹಿನಿಗಳಲ್ಲಿ ಕರ್ನಾಟಕ!
ನಿನ್ನೆ ಸಿಎನ್ಎನ್-ಐಬಿಎನ್ನಲ್ಲಿ ಕರ್ನಾಟಕದ ಮುಸ್ಲೀಮರ ಬಗ್ಗೆ ಒಂದು ಚಿಕ್ಕ ರಿಪೋರ್ಟ್ ಇತ್ತು. . ಅದರಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಜನಪದ ಕವಿ ಎಸ್.ಕೆ.ಕರೀಮ್ ಖಾನ್ ಅವರು ನಾನು ಕನ್ನಡಿಗನೂ ಹೌದು , ಮುಸಲ್ಮಾನನು ಹೌದು ಎಂದರು.ಆಮೇಲೆ ಸಂತ ಶಿಶುನಾಳ ಶರೀಫರ ಬಗ್ಗೆ ಶಿವಮೊಗ್ಗ ಸುಬ್ಬಣ್ಣ ಮಾತನಾಡಿದರು.ಹಿನ್ನಲೆಯಲ್ಲಿ ಸುಬ್ಬಣ್ಣನವರ
ಢ್ವನಿಯಲ್ಲಿ "ತಾಳಲಾರೆ ತಗಣೆಯ ಕಾಟ" ಬರ್ತಾ ಇತ್ತು.ಹಾಡಿನ ಉಳಿದ ಸಾಲುಗಳು ನೆನಪಿಲ್ಲ.ಹಾಡು ಅರ್ಥವೂ ಆಗಲಿಲ್ಲ.:-(
ಕೇರಳ ಮೂಲದವರಾದ ಯೂಸಫ್ ಆರಕ್ಕಲ್ ಅವರು , ನಾನು ಮುಸಲ್ಮಾನನಿಗಿಂತ ಮೊದಲು ಕನ್ನಡಿಗ ಎಂದರು.ನನಗೆ ಇಬ್ಬರು ತಾಯಿಯರು, ಜನ್ಮ ಕೊಟ್ಟ ತಾಯಿ ಕೇರಳ ಮತ್ತು ಸಾಕು ತಾಯಿ ಕರ್ನಾಟಕ .ಆದರೆ ನನ್ನ ಜನ್ಮ ಕೊಟ್ಟ ತಾಯಿ ನನಗೆ ಏನು ಕೊಡುತ್ತಿದ್ದರೋ ಅದಕ್ಕಿಂತ ಜಾಸ್ತಿ ನನ್ನ ಸಾಕು ತಾಯಿ ನನಗೆ ಕೊಟ್ಟಿದ್ದಾರೆ ಎಂದರು.
ಎನ್ಡಿಟಿವಿ ಇಂಡಿಯದಲ್ಲಿ ಕುಂಬ್ಳೆಯ ಬಗ್ಗೆ ಹೇಳುತ್ತಾ, ಈತನಲ್ಲಿ ಉತ್ತರ ಭಾರತದ ರೋಷಾವೇಶಗಳು ಕಾಣುವುದಿಲ್ಲ.ಆದರೆ ದಕ್ಷಿಣ ಭಾರತದ ಕರ್ನಾಟಿಕ್ ಶೈಲಿಯ ಸಾಧನೆ ಇದೆ ಎಂದರು.
ಹೆಮ್ಮೆಯ ಕ್ಷಣಗಳು :-)
Comments
ತಾಳಲಾರೆ ತಗಣೆಯ ಕಾಟ
In reply to ತಾಳಲಾರೆ ತಗಣೆಯ ಕಾಟ by suchara
ಉ:ತಾಳಲಾರೆ ತಗಣೆಯ ಕಾಟ