ಏಕೆ ಹೀಗೆ ಅನಿಸುತ್ತದೆಯೋ!

ಏಕೆ ಹೀಗೆ ಅನಿಸುತ್ತದೆಯೋ!

ಬೆಳ್ಳಂಬೆಳಿಗ್ಗೆ ವಾಕಿಂಗ್‌ ಹೋದಾಗ, ಸುತ್ತ ಮುತ್ತ ತುಂಬಿರುವ ಶಾಂತಿ, ನಿರಾಳತೆ, ಸೊಬಗನ್ನು ನೋಡಿ ನಿಮಗೆ ಏನು ಅನ್ನಿಸುತ್ತದೆ?

ಇದರ ಹಿಂದೆ ಯಾವುದೇ ಎಳೆ ಇದೆ. ಅದೇ ಇವೆಲ್ಲವನ್ನೂ ಬಂಧಿಸಿದೆ. ಒಂದಕ್ಕೆ ಇನ್ನೊಂದನ್ನು ಆಸರೆಯಾಗಿ ಮಾಡಿದೆ ಎಂದು ಅನಿಸುವುದಿಲ್ಲವಾ? ನಾನಂತೂ ಪ್ರತಿಯೊಂದು ಸೊಗಸಿನ ಹಿಂದೆ, ನೋವಿನ ಹಿಂದೆ ಇಂಥದೊಂದು ಎಳೆ ಹುಡುಕುತ್ತಲೇ ಡಿಗ್ರಿ ಮುಗಿಸಿದೆ. ಹಲವಾರು ಗೆಳತಿಯರೊಂದಿಗೆ ಈ ಬಗ್ಗೆ ಚರ್ಚಿಸಿ ಬೈಸಿಕೊಂಡೆ. ವಯಸ್ಸಿಗೆ ತಕ್ಕ ಹಾಕಿರಬೇಕು ಎಂದು ಬುದ್ಧಿ ಹೇಳಿಸಿಕೊಂಡೆ. ವಯಸ್ಸಿಗೆ ತಕ್ಕಂತೆ ಇರುವುದು ಅಂದರೆ ಏನು? ನಮ್ಮ ಯೋಚನೆಗಳನ್ನು ವಯಸ್ಸು ನಿರ್ಧರಿಸಬೇಕೆ ಅಥವಾ ನಮ್ಮ ನಮ್ಮ ವಿಚಾರಗಳೆ?

ಇಂತಹ ಪ್ರಶ್ನೆಗಳು ನಿಮ್ಮನ್ನೂ ಕಾಡಿವೆಯೆ? ಇವೆಲ್ಲ ಘಟನೆಗಳ ಹಿಂದೆ, ಪೋಣಿಸಿಟ್ಟಂತಹ ಬೆಳವಣಿಗೆಗಳ ಹಿಂದೆ ಯಾವುದೋ ಒಂದು ಶಕ್ತಿ ಇದೆ ಎಂದು ಅನಿಸುತ್ತಿಲ್ಲವೆ? ದೇವರೆನ್ನಿ, ಪ್ರಕೃತಿ ಎನ್ನಿ, ಅಥವಾ ಭೌತಶಾಸ್ತ್ರದ ನಿಯಮಗಳು ಎನ್ನಿ, ಒಂದು ವಿಶಿಷ್ಟ ಶಕ್ತಿ ಖಂಡಿತ ಇದೆ. ಅದನ್ನು ನೆನೆದರೆ ಅಚ್ಚರಿಯಾಗುತ್ತದೆ. ಅಲ್ಲವೆ?

ನನ್ನ ವಾದವನ್ನು ನೀವು ಖಂಡಿಸಬಹುದು. ಬೆಂಬಲಿಸಬಹುದು. ಒಂದು ಆರೋಗ್ಯಕರ ಚರ್ಚೆಗೆ ಕಾರಣವಾಗಬಹುದು. ಆದರೆ ನನ್ನ ಮನಸ್ಸು ಮಾತ್ರ ಆ ಎಳೆಯನ್ನೇ ಎಲ್ಲೆಡೆ ಕಾಣುತ್ತ ಹೊಸ ಅರ್ಥವನ್ನು ಕಂಡುಕೊಳ್ಳುತ್ತ ಇದೆ. ಅದೆಲ್ಲ ಹೋಗಲಿ, ಬಾಬು ಸಿಂಗ್‌ ಠಾಕೂರ್‌ ಪೇಢಾ ತಿಂದಾಗಾದರೂ ನಿಮಗೆ ಇಂತಹ ಅನುಭವ ಆಗಿರಲಿಲ್ಲವೆ? ಹೇಳಿ?

- ಪಲ್ಲವಿ ಎಸ್‌.

Rating
No votes yet

Comments