ಎರಡು ಬೆಸ್ತರ ನೀಲುಗಳು
ನಡುನಡುವೆ
ಪಟ್ಣಣದತ್ತ ಕಣ್ಣಿಟ್ಟ ಬೆಸ್ತರ ಹುಡುಗ
"ಮೀನಲ್ಲಿ... ಭವಿಷ್ಯ... ಇಲ್ಲ... ಏನು ಮಾಡೋದು" ಅಂತ
ತಡೆತಡೆದು ಆಡಿದ ಮಾತುಗಳ ನಡುವೆಲ್ಲಾ
ಕಡಲ ಮೊರೆತ ತುಂಬಿಕೊಂಡಿತು
ಅನುಮಾನಕ್ಕೆಡೆ ಕೊಡದಂತೆ.
ಪ್ರಶ್ನೆಯಿಲ್ಲದ ಉತ್ತರ
"ಬೇರೆ ನೀರಿಗೆ ಹೋಗಿವೆ ಮೀನು;
ಖಾಲಿ ಬಲೆ ಎಳೆಯಲಿಕ್ಕೇಕೆ ಬೇಕು
ಪಟ್ಟಣಕ್ಕೆ ಹೋದ ಮಕ್ಕಳು" ಎನ್ನುತ್ತಲೇ
ಬೆಸ್ತರ ಮುದುಕ
ಹರಿದ ಬಲೆಯನ್ನು ಸೇರಿಸಿ
ಸೇರಿಸಿ ಹೊಲಿದೇ ಹೊಲಿದ.
ಖಾಲಿ ಬಲೆ ಎಳೆಯಲಿಕ್ಕೇಕೆ ಬೇಕು
ಪಟ್ಟಣಕ್ಕೆ ಹೋದ ಮಕ್ಕಳು" ಎನ್ನುತ್ತಲೇ
ಬೆಸ್ತರ ಮುದುಕ
ಹರಿದ ಬಲೆಯನ್ನು ಸೇರಿಸಿ
ಸೇರಿಸಿ ಹೊಲಿದೇ ಹೊಲಿದ.
Rating
Comments
ಉ: ಎರಡು ಬೆಸ್ತರ ನೀಲುಗಳು
In reply to ಉ: ಎರಡು ಬೆಸ್ತರ ನೀಲುಗಳು by roopablrao
ಉ: ಎರಡು ಬೆಸ್ತರ ನೀಲುಗಳು
ಉ: ಎರಡು ಬೆಸ್ತರ ನೀಲುಗಳು