ತಾರೆ ಜಮೀನ್ ಪರ್........

ತಾರೆ ಜಮೀನ್ ಪರ್........

ತಾರೆ ಝಮೀನ್ ಪರ್........
ಈ ಬ್ಲಾಗ್ ನ ಶೀರ್ಷಿಕೆ ನೋಡಿ ಏನ್ ಇವನು ಸಿನಿಮಾ ಕಥೆ ಹೇಳುವುದಕ್ಕೆ ಹೊರಟಿರುವವನ? ಎಂದ್ಕೊಳ್ಳಬೇಡಿ. ಇದು ನನ್ನ ಕಥೆ ಅಥವಾ ವ್ಯಥೆಯೆನ್ನಬಹುದು. ಅಮೀರ್ ಖಾನ್, ಆ ಚಿತ್ರದಲ್ಲಿ ಒಂದು ವಯಸ್ಸಿನ ಸೂಕ್ಷ್ಮ ಸಂವೇದನೆಯನ್ನು ಸ್ಪರ್ಷಿಸುವಂತೆ ನಿರ್ಧೇಶಿಸಿದ್ದಾರೆ. ನಾನು ಕೂಡ ನನ್ನ ಬಾಲ್ಯದ ಬಹುತೇಕ ದಿನಗಳನ್ನು ರೆಸಿಡೆನ್ಷಿಯಲ್ ಶಾಲೆಯಲ್ಲಿ ಕಳೆದೆ. ನನ್ನನ್ನು ಆ ಶಾಲೆಗೆ ಸೇರಿಸಲು ಕಾರಣ ನಾನೇನು ಚೆನ್ನಾಗಿ ಓದುತಿರಲಿಲ್ಲ ಎಂದಲ್ಲ, ಮನೆಯಲ್ಲಿ ನನ್ನ ರಂಪಾಟ, ಅಕ್ಕನ ಜೊತೆಯ ಧ್ಯೆನಂದಿನ ಜಗಳಗಳು (ಆಗೆ ಸುಮ್ಮನೇ), ನನ್ನ ತಂದೆ ತಾಯಿಗೆ ನನ್ನನು ಹೊರಗೆ ಕಳುಹಿಸಲು ಕಾರಣವಾಯಿತು. ಅಂತು ಇಂತು ನವೋದಯ ಎಂಬ ಶಾಲೆಗೆ ಸರಿಯಾಗಿ ಆಯ್ಕೆಯಾದೆ(6ನೇ ತರಗತಿಯಲ್ಲಿ). ಅಲ್ಲಿಗೆ ಮುಗಿಯಿತು ನನ್ನ ಜೀವನದ ಒಂದು ಘಟ್ಟ, ಅಲ್ಲಿಂದ ಶುರುವಾಯಿತು ನನ್ನ ಹಾಸ್ಟೆಲ್ ಜೀವನ, ಅದು ಇನ್ನೂ ಮುಗಿದಿಲ್ಲ ಬಿಡಿ. ಆದರೂ ನಾನು ಅಲ್ಲಿಗೆ ಹೋಗದೆ ಇದ್ದಿದ್ದರೇ ಕೆಲವು ಅಮೂಲ್ಯವಾದ ನೆನಪುಗಳನ್ನು ಮಿಸು ಮಾಡ್ಕೊಂತ ಇದ್ದೆ. ನೀವೇನೆ ಹೇಳಿ ಫ್ರೆಂಡ್-ಶಿಪ್ ನ ಮಹತ್ವ ಗೊತ್ತಾಗೋದು ಅಂತಹ ಪರಿಸ್ಥಿತಿಯಲ್ಲಿಯೆ. ನನ್ನ ಕೆಲವು ಸ್ನೇಹಿತರ ಸ್ನೇಹದಿಂದ ಅಲ್ಲಿ ಒಗ್ಗಿಕೊಳ್ಳುವುದಕ್ಕೆ ಸಾಧ್ಯವಾಯಿತು. ಅಲ್ಲಿಂದ ತಿಳಿದೆ ತಂದೆ, ತಾಯಿ, ಅಕ್ಕರಂತೆ ಸ್ನೇಹಿತರು ಅತಿ ಮುಖ್ಯ ಎಂದು. ಈಗಲೂ ಆ ನನ್ನ ಹಳೆಯ ಸ್ನೇಹಿತರ ಜೊತೆ ಒಡನಾಟ ಇಟ್ಟುಕೊಂಡಿದ್ದೇನೆ. ಆ ದಿನಗಳಲ್ಲಿ ಕಾಡುತಿದ್ದ ಮನೆಯ ನೆನಪು, ಅದನ್ನು ಮರೆಯಲು ನನ್ನ ಪ್ರಯತ್ನ, ಸ್ನೇಹಿತರ ಜೊತೆ, ಈಗ ನೆನಸಿಕೊಳ್ಳಲು ನನಗೆ ಹುಳಿದಿರುವ ಕೆಲವು ಅವಿಸ್ಮರಣೀಯ ನೆನಪುಗಳು. ನನ್ನ ಕೆಲವು ಅನುಭವಗಳಿಗೆ ಅಕ್ಷರ ರೂಪ ಕೊಡಲು ಪ್ರಯತ್ನ ಪಟ್ಟೆ. ನಿಮ್ಮಲ್ಲು ಯಾರದರು ಹಾಸ್ಟೆಲ್ ನಲ್ಲಿ ನನ್ನ ತರಹ ಜೀವನ ಸಾಗಿಸಿರುವವರಿದ್ದೀರ? ನಿಮ್ಮ ಅನಿಸಿಕೆಗಳನ್ನು ನನ್ನ ಹತ್ತಿರ ಹಂಚಿಕೊಳ್ಳುತ್ತೀರ ಎಂದು ನಂಬಿದ್ದೇನೆ.

Rating
No votes yet

Comments