ಪರಿಸರ ಸಂರಕ್ಷಣೆ ಅನ್ನೋ ಜೋಕು -

ಪರಿಸರ ಸಂರಕ್ಷಣೆ ಅನ್ನೋ ಜೋಕು -

ನಿನ್ನೆ "ವಿಶ್ವ ಪರಿಸರ ದಿನ". ಪರಿಸರ ಸಂರಕ್ಷಣೆಯ ಕೂಗು ಇನ್ನೂ ಬಹಳಷ್ಟು 'ಮಾನವ ಪ್ರಾಣಿಗಳ' ಕಿವಿಗೆ ಬೀಳಬೇಕು. ವಿಪರ್ಯಾಸವೆಂದರೆ, "ಪರಿಸರ ದಿನ" ಅಂತದು ಒಂದಿದೆ ಅಂತ ಜನಕ್ಕೆ (ವಿದ್ಯಾವಂತರು) ಹೇಳಿದರೆ, "ಹಾಗೇನೂ...." ಅಂತಾರೆ ವಿನ:, ಅದರ ಮಹತ್ವ ಯಾರಿಗೂ ಬೇಕಾಗಿಲ್ಲ.

ನನ್ನ ಅನುಭವಗಳಲ್ಲೇ ಹೇಳಬೇಕಾದ್ರೆ, ನಿಮ್ಮ ಮನೆಗಳಲ್ಲಿ ಸುಮ್-ಸುಮ್ನೆ ಲೈಟ್ ಉರಿಸಬೇಡಿ ಅಂತ ಹೇಳಿದ್ರೂ, "ಜನ"(ನನಗೆ ಗೊತ್ತಿರೋರು) ’ಬಿಲ್ ನೀನು ಕಟ್ತೀಯಾ..?’ ಅಂತ ಕೇಳ್ತಾರೆ. ಅಯ್ಯೋ...!!, ನೀರು ವೇಸ್ಟ್ ಮಾಡ್ಬ್ಯಾಡಿ ಸ್ವಾಮಿ ಅಂದ್ರೆ, "ಜನ" ’ನಿಂದೇನೋ ?’ ಅಂತಾರೆ. (ಅಂತವರಿಗೆ ಮುಂದಿನ ಜನ್ಮ ಅಂತಿದ್ರೆ ಹಲ್ಲಿ ಆಗಿ ಹುಟ್ಟೋದಂತೂ ಖಚಿತ.) ಕಾರುಗಳ್ನ (ಎರಡ್ಮೂರು) ತಗಳ್ಳದು ಪ್ರತಿಷ್ಟೆ ವಿಶ್ಯ. Global Warming ಅಂದ್ರೆ, ’ಇವ್ನದೇನೋ ಸುಡ್-ತೈತಂತೆ ನೋಡ್ರಲಾ..’ ಅಂತಾ ಅನ್ನೋ ಹಾಗೆ smile ಕೊಡ್ತಾರೆ. ’ರಾತ್ರಿ ಮನೆಗೆ ಹೋಗ್ತಾ monitor ಆಫ್ ಮಾಡಿ’ ಅಂದ್ರೆ, ಬಿಲ್ ಕಂಪ್ನಿ ಕೊಡುತ್ತೆ ಅನ್ನೋ ಉಡಾಫೆ. ’ಇಂತಾ ಚಿಕ್ಕ-ಚಿಕ್ಕ ವಿಶ್ಯಗಳು matter ಆಗ್ತವೆ ಕಣ್ರಪ್ಪಾ’ ಅಂದ್ರೆ, ಅಲ್ಲಿಗೇ matter ಕ್ಲೋಸು. ಹೇಳ್ತಾ ಹೋದ್ರೆ, ಮೈಯೆಲ್ಲಾ ಉರ್ದೋಗುತ್ತೆ.

ಥೂ.... ಜನಕ್ಕೆ ಅರ್ಥ ಆಗಲ್ಲಾ, ಅನುಭವಿಸ್ತಾರೆ, ಮುಂದೆ...

ಬರೀ ದುಡ್ಡೊಂದಿದ್ರೇ ಸಾಕು ಅಂತ ತಿಳ್ಕಂಡಿರೋ ಜನಗಳಿಗೆ ಎನ್-ಹೇಳೋದು ಆಗಲ್ಲಾ. ಥೂ ......... ಪರಿಸರ ಕಾಳಜಿ ಬಗ್ಗೆ ಮಾತಾಡಕ್ಕೆ ಮನಸ್ಸಾಗಲ್ಲ. ಏನ್ ಮಾಡಿದ್ರೂ ಇದಿಷ್ಟೇ.., ಇದು ಹಿಂಗೆ....., ನಡಿಯತಂಕ ನಡೀತದೆ.(ಇದು ನನ್ನ ನಿರಾಶಾವಾದಿ ಭಾವನೆ ಅಂತ ಅನ್ಕಂಡ್ರೆ, I dont give it a damn......)

ಅಂದ ಹಾಗೆ, ಮೊದ್ಲಿಂದ ಮಾನವ-ಪ್ರಾಣಿ ತನ್ನ ಯಾವ ತಪ್ಪನ್ನಾದ್ರೂ ಸರಿಪಡಿಸಿಕೊಂಡು "ಜಾಣ" ಆಗಿದಾನೆ ಅನ್ನೋಕೆ ಒಂದು ಉದಾಹರಣೆ ಕೊಡಿ ನೋಡಣಾ..............

Rating
No votes yet

Comments