ನನ್ನದೊಂದು ಕನಸು
ನನ್ನದೊಂದು ಕನಸು
ನನ್ನದೊಂದು ಕನಸಿದೆ. ಸ್ವಚ್ಚ ಭಾರತದ ಕನಸು. ನಮ್ಮಲ್ಲಿ ಅನೇಕರಿಗೆ ಎಲ್ಲೆಂದರಲ್ಲಿ ಉಗುಳುವ ಕೆಟ್ಟ ಅಭ್ಯಾಸ ಇದೆ. ಅಕ್ಕಪಕ್ಕದವರಿಗೆ ಅಸಹ್ಯವಾಗಬಹುದೆಂಬ ಅರಿವೂ ಇಲ್ಲದೇ ಕ್ಯಾಕರಿಸಿ ಉಗುಳುವ ಜನರನ್ನು ನೋಡಿದರೆ ಕೂಡಲೇ ನನ್ನ ಸ್ವಚ್ಚ ಭಾರತದ ಕನಸು ಒಡೆದು ನುಚ್ಚುನೂರಾಗುತ್ತದೆ. ಮನಸ್ಸು ಇದಕ್ಕೆ ಪರಿಹಾರ ಏನೆಂದು ಚಿಂತಿಸುತ್ತದೆ. ಏನೋ ಆಸೆ ನನ್ನ ಮುಂದಿನ ಪೀಳಿಗೆಯವರನ್ನಾದರೂ ಆದರ್ಶ ಪ್ರಜೆಗಳನ್ನಾಗಿ ಬೆಳೆಸುವ ಕನಸು. ನಾನು ಶಿಕ್ಸಕಿಯಾಗಿದ್ದರಿಂದ ನನ್ನ ಶಾಲೆಯಲ್ಲಿ ನನ್ನ ಮಕ್ಕಳಿಗೂ ಕೂಡಾ ಅದೇ ಕನಸನ್ನು ಬಿತ್ತಿ ಪೋಷಿಸಿದೆ. ಮಾಮೂಲು ಎಲ್ಲಾ ಮಕ್ಕಳಿಗೂ ಇರುವಂತೆ ನನ್ನ ಮಕ್ಕಳಿಗೂ ನನ್ನ ಮಾತು ವೇದವಾಕ್ಯವಾಯಿತು.ಅವರೇನೋ ಅದೇ ಕನಸನ್ನು ನನಸಾಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದರು. ಆದರೆ ಅದು ಅಷ್ಟು ಸುಲಭದ ಕೆಲಸವಲ್ಲವೇ. ಆಗ ನಾನೊಂದು ಹಗಲುಗನಸು ಕಂಡೆ. ನನ್ನ ಮತ್ತು ನನ್ನ ಶಾಲೆ ಮಕ್ಕಳ ಬಳಿ ಒಂದು ರಿಮೋಟ್ ಕಂಟ್ರೋಲ್ ಇರಬೇಕು. ಅದರಲ್ಲಿ ಒಂದು ಬಟನ್ ಒತ್ತಿದರೆ ನಾವು ಯಾವ ವ್ಯಕ್ತಿಯನ್ನು ಗುರಿ ಮಾಡುತ್ತೇವೆಯೋ ಆ ವ್ಯಕ್ತಿಯ ತಲೆಯ ಮೇಲೆ ಯಾರೊ ಹೊಡೆದಂತಾಗಬೇಕು. ನಮ್ಮಲ್ಲಿ ರಿಮೋಟ್ ಇರುವುದು ಯಾರಿಗೂ ಗೊತ್ತಿರುವುದಿಲ್ಲ. ಹಾಗಾಗಿ ಯಾರು ಹೊಡೆದರೆಂಬುದು ಅವರಿಗೆ ತಿಳಿದಿರುವಿದಿಲ್ಲ. ಏನಾಯಿತು ಎಂದು ತಿಳಿಯದೇ ಕಂಗಾಲಾಗುತ್ತಾರೆ. ಆನಂತರ ಉಗುಳುವವರೆಲ್ಲಾ ಅಕ್ಕಪಕ್ಕ ನೋಡಿಕೊಂಡು ಹೆದರುತ್ತಲೇ ಉಗುಳಿದರೂ ಕೂಡ ತಕ್ಷಣ ಎಲ್ಲರ ಎದುರಿನಲ್ಲೇ ತಲೆಗೊಂದು ಪೆಟ್ಟು! ಎಂಥಾ ಅವಮಾನ! ಈ ಅವಮಾನ ಸಹಿಸಲಾರದೇಯಾದರೂ ಆ ಹೊಡೆತವನ್ನು ತಪ್ಪಿಸಿಕೊಳ್ಳಲೋಸ್ಕರವಾದರೂ ಭಯದಿಂದ ಉಗುಳುವುದನ್ನು ಬಿಡಬಹುದೇನೋ. ಬೀದಿಯಲ್ಲಿ ಜನ ಉಗುಳುವುದನ್ನು ನಿಲ್ಲಿಸಿದರೆ ನಮ್ಮ ದೇಶ ಅರ್ಧ ಸ್ವಚ್ಚವಾದಂತೆಯೇ ಸರಿ. ರಿಮೋಟ್ ಇಲ್ಲದಿದ್ದರೂ ಜನ ಅರಿತು ನಡೆಯ ಬೇಕೆಂಬ ಆಸೆ ನನ್ನದು. ಕನಸು ನನಸಾಗಲು ಸಾಧ್ಯವೇ? ನೀವೇನಂತೀರಾ?
Comments
ಉ: ನನ್ನದೊಂದು ಕನಸು
In reply to ಉ: ನನ್ನದೊಂದು ಕನಸು by gururajkodkani
ಉ: ನನ್ನದೊಂದು ಕನಸು
In reply to ಉ: ನನ್ನದೊಂದು ಕನಸು by gururajkodkani
ಉ: ನನ್ನದೊಂದು ಕನಸು
In reply to ಉ: ನನ್ನದೊಂದು ಕನಸು by madhava_hs
ಉ: ನನ್ನದೊಂದು ಕನಸು
ಉ: ನನ್ನದೊಂದು ಕನಸು
In reply to ಉ: ನನ್ನದೊಂದು ಕನಸು by veena
ಉ: ನನ್ನದೊಂದು ಕನಸು
In reply to ಉ: ನನ್ನದೊಂದು ಕನಸು by veena
ಉ: ನನ್ನದೊಂದು ಕನಸು
In reply to ಉ: ನನ್ನದೊಂದು ಕನಸು by shylaswamy
ಉ: ನನ್ನದೊಂದು ಕನಸು
In reply to ಉ: ನನ್ನದೊಂದು ಕನಸು by girish.rajanal
ಉ: ನನ್ನದೊಂದು ಕನಸು
ಉ: ನನ್ನದೊಂದು ಕನಸು
ಉ: ನನ್ನದೊಂದು ಕನಸು
In reply to ಉ: ನನ್ನದೊಂದು ಕನಸು by roopablrao
ಉ: ನನ್ನದೊಂದು ಕನಸು
ಉ: ನನ್ನದೊಂದು ಕನಸು
ಉ: ನನ್ನದೊಂದು ಕನಸು