ಆ ನಾರ್ಥಿಗೆ ಇದು ಬೇಕಿತ್ತಾ

ಆ ನಾರ್ಥಿಗೆ ಇದು ಬೇಕಿತ್ತಾ

Comments

ಬರಹ

ನೆನ್ನೆ ಆತ ಬಂದಿದ್ದ ವಿನಯ ಅಂತೇನೊ ಅವನ ಹೆಸರು ನಾರ್ಥ್ ಇಂಡಿಯನ್ ಕೆಂಪಗೆ ಇದ್ದಾನೆ. ಅವನ್ನ ನೋಡಿದ ತಕ್ಷಣ ಮೈಯ್ಯೆಲ್ಲಾ ಉರಿದು ಹೋಯ್ತು.
ಅವನೂ ನನ್ನನ್ನು ಇಲ್ಲಿ expect ಮಾಡಿರ್ಲಿಲ್ಲ ಅನ್ನಿಸುತ್ತೆ. ಕಕ್ಕಾಬಿಕ್ಕಿಯಾಗಿ ಹೋದ . ನಾನು ಚಾನ್ಸ್ ಬಿಡ್ತೀನಾ . ಇಂತಹದೊಂದು ಅವಕಾಶಕ್ಕೆ ಕಾಯ್ತಾ ಇದ್ದೆ ನಾನು . ನಾನೇನು ಮಾಡಿದೆ ಅನ್ನೊದಿಕ್ಕೆ ಮುಂಚೆ ಯಾಕೆ ಹಾಗೆ ಮಾಡಿದೆ ಅಂತ ತಿಳ್ಕೊಳ್ಳೋಣ.

ಆಗ ತಾನೆ ಕೆಲ್ಸ ಕಳ್ಕೊಂಡು ಕೆಲ್ಸಕ್ಕಾಗಿ ಒದ್ದಾಡ್ತಾ ಇದ್ದೆ ನಾನು. ಹೀಗೆ ಒಮ್ಮೆ ಬಸ್‌ನಲ್ಲಿ ಇವನ ಪರಿಚಯವಾಯ್ತು. ಇನ್ಫೊಸಿಸ್‌ನಲ್ಲಿ ಅವನ ಕೆಲಸ
ಜೆ.ಸಿ ರೋಡ್ ನಲ್ಲಿ ಕನ್ಸಲ್ಟೆನ್ಸಿ ಒಂದಿದೆ ಅವರು ಕೆಲಸ ಕೊಡಿಸ್ತಾರೆ .ಅಲ್ಲಿಗೆ ಬಂದರೆ ಅವರನ್ನ ಪರಿಚಯ ಮಾಡಿಸ್ತೀನಿ ಎಂದು ಹೇಳಿ ಮರು ದಿನ ಅಲ್ಲಿ ಸಿಗುವಂತೆ ಹೇಳಿದ.
ಜೆ.ಸಿ ರೋಡ್‌ಗೆ ಹೋದೆ . ನಂತರ ಅವನೂ ಬಂದ . ಕನ್ಸಲ್ಟೆನ್ಚಿಯವರು ಇನ್ನೂ ಬಂದಿಲ್ಲ ಹೋಟೆಲಿಗೆ ತಿಂಡಿ ತಿನ್ನೋಣಾ ಬನ್ನಿ ಎಂದು ಬಲವಂತಿಸಿ ಕರೆದುಕೊಂಡು ಹೋದನಂತರ ಆತನ
ಒಂದೊಂದೇ ಮಾತಿನಲ್ಲಿ ನಾನು ಅವನ ಗರ್ಲ್ ಫ್ರೆಂಡ್ ಆದರೆ ಕೆಲಸ ಗ್ಯಾರೆಂಟಿ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದ. ನಂಗೆ ಅವನಿಂದ ತಪ್ಪಿಸಿಕೊಂಡು ಬಂದರೆ ಸಾಕು ಅನ್ನಿಸುವಷ್ಟು ಬೇಸರವಾಗಿತ್ತು (ನಿಮಗೆ ಗೊತ್ತಿಲ್ಲ ಕೆಲಸ ಸಿಗುತ್ತದೆಂಬ ಆಸೆಯಲ್ಲಿ ಹೋಗಿ ಈ ರೀತಿಯ ಬೇಡಿಕೆ ಬಂದಾಗ ಹೆಂಗಳೆಯರ (ಹುಡುಗಿಯರ) ಮನದಲ್ಲಿ ಆಗುವ ನೋವು ).
ಬೈಯ್ಯಲು ಧೈರ್ಯ ಇರಲಿಲ್ಲ
"sorry i want to go home . " ಅಂದೆ
"then you dont want job?" ಒಂಥರ ಅಸಹ್ಯವಾಗಿ ನೋಡಿ ಹೇಳಿದ
"No I can find it on my self . I am already engaged"
" No problem . marry with whom you are engaged . be my girl friend for some time no commitment"

ನಂತರ ನಾನು ಅಲ್ಲಿರಲಿಲ್ಲ

ಆ ಕೊನೆಯ ಮಾತು ನನ್ನನ್ನು ಎಷ್ಟು ವಿಚಲಿತಗೊಳಿಸಿತೆಂದರೆ, ಅಲ್ಲಿಂದ ಮುಂದೆ ನಾನು ಯಾವ ಗಂಡಸಿನ ಹತ್ತಿರವೂ ನನಗೆ ಕೆಲಸ ಇಲ್ಲ ಅಂತ ಹೇಳಲೇ ಇಲ್ಲ.

_________________________***********************_______________________________
ಅಂತಹವನು ನೆನ್ನೆ ಬಂದಿದ್ದ ತನ್ನ ಹೆಂಡತಿಯ ಜೊತೆ
ಅವಳಿಗೆ ಇಂಗ್ಲೀಷ್ ಬರುವುದಿಲ್ಲ . ಕನ್ನಡವೂ ಬರುವುದಿಲ್ಲ

ಅವಳಿಗೆ ಇಂಗ್ಲೀಷ್ ಕಲಿಸಿ ಕೊಡಬೇಕೆಂದು ನಮ್ಮ ಕೌನ್ಸೆಲರ್ ಬಳಿ ಮಾತಾಡುತ್ತಿದ್ದ.
ನನ್ನನ್ನು ನೋಡಿದ ತಕ್ಷಣ
"ಚಲೋ ಚಲೊ ಇದರ್ ನಹಿ ಚಾಹಿಯೆ"
ಅಂತ ಹೇಳಿ ಹೆಂಡತಿಯನ್ನು ಕರೆದು ಕೊಂಡು ಹೋಗುತ್ತಿದ್ದ

ನಾನೆ
"ರುಕಿಯೇ ಆಪ್ ಆಯಿಯೆ " ಅಂತ ಅವನ ಹೆಂಡತಿಯನ್ನ ಕರೆದು ಆಫೀಸಿನ ಒಳಗೆ ಕೂರಿಸಿಕೊಂಡೆ
"ಆಪ್ ಇಂಗ್ಲೀಶ್ ಸೀಕನೆ ಸೆ ಪಹೆಲೆ ಆಪಕಾ ಪತೀಕೊ ತಮೀಜ್ ಸಿಕಾಯಿಯೆ. ನೈ ತೊ ಆಪ್ ಯಾ ಆಪ್ ಕಾ ಪತಿ ಇಸ್ ಏರಿಯಾಮೆ ರಹ್ ನಹಿ ಸಕ್ತೆ " ಎಂದೆ
(ನೀವು ಇಂಗ್ಲೀಶ್ ಕಲಿಯುವ ಮೊದಲು ನಿಮ್ಮ ಪತಿಗೆ ಹದ್ದುಬಸ್ತಿನಲ್ಲಿರುಲು ಕಲಿಸಿ. ಇಲ್ಲವಾದರೆ ನೀವು ಅಥವ ನಿಮ್ಮ ಗಂಡ ಈ ಏರಿಯಾದಲ್ಲಿರಲು ಸಾಧ್ಯವಿಲ್ಲ)
"ಕ್ಯೋ ಎ ಕೆಹ್ ರಹೇ ಹೈ ಆಪ್ " (ಇದನ್ನ ಯಾಕೆ ಹೇಳ್ತಾ ಇದೀರಾ ನೀವು)

"ಆಪ್ ಕಾ ಪತಿ ಸೆ ಪೂಚಿಯೆ" (ನಿಮ್ಮ ಗಂಡನ್ನ ಕೇಳಿ)

"ಕ್ಯೊ ಕ್ಯಾ ಪ್ರಾಬ್ಲ್ಮ್ ಹೈ" (ಯಾಕೆ ಏನಾದ್ರೂ ಪ್ರಾಬ್ಲಮ್ ಇದೆಯಾ)

" ಉನ್ ಸೆ ಪೂಚಿಯೆ " (ಅವರನ್ನೇ ಕೇಳಿ)

ಅವಳು ಬುಸುಗುಡುತ್ತಾ ಗಂಡನ ಹಿಂದೆ ಹೋಗಿ ಏನೋ ಬೈಯ್ಯುತ್ತಿದ್ದಳು.

ಸ್ವಲ್ಪ ಹೊತ್ತಿನ ನಂತರ ಆತ ಬಂದ

"what is this i don't even remember your name . How can you tell all these things to my wife ?" ಎಗರಾಡಿದ

"if you stand for some more time i will tell to every body in this area and even in your comnpany" ನಾನು ತಣ್ಣಗೇ ಹೇಳಿದೆ
ಆತ ಮಾತಾಡಲಿಲ್ಲ
ಸುಮ್ಮನೇ ಕ್ಯಾಬಿನ್‍ನಿಂದ ಹೊರಟು ಹೋದ

ನಾನು ಸೇಡು ತೀರಿಸಿಕೊಂಡ ನೆಮ್ಮದಿಯಿಂದ ಹಾಯಾಗಿ ಬಾದಾಮಿಹಾಲು ಕುಡಿದೆ.

ಆದ್ದರಿಂದ ಐಟಿ ಯಲ್ಲಿರುವ ಸಂಪದದ ಹುಡುಗರೇ . ದಯವಿಟ್ಟು ಹುಡುಗಿಯರ ಅಸಹಾಯಕತೆಯನ್ನ ಮುಂದಿಟ್ಟುಕೊಂಡು ಅವರಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿ ಬಲೆಗೆ ಹಾಕಿಕೊಳ್ಳುವ ಯೋಚನೆಯನ್ನು ಕನಸಿನಲ್ಲೂ ಮಾಡಬೇಡಿ.

ಇದು ನಿಮ್ಮೆಲ್ಲರ ರೂಪಕ್ಕನ ವಿನಂತಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet