ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :)
ನಾವು ಚಿಕ್ಕವ್ರಿರೋವಾಗ ಯಾವುದೋ ಕಥೆ ಕೇಳ್ತಿದ್ದ ನೆನಪು. ಅದೇನೋ ಹೋಯ್ತು ಅದೇನೋ ಬಂತು ಡುಂ ಡುಂ ಅಂತ ಅದ್ರಲ್ಲಿ ಬರ್ತಿತ್ತು. ಹಾಳಾದ್ದು ಯಾವ ಕಥೆ ಅಂತ ನೆನಪೇ ಆಗ್ತಿಲ್ಲ ನೋಡಿ.
ಇವತ್ತು ನನ್ನ ಒಬ್ರು ಒಳ್ಳೇ ಗೆಳೆಯರೊಬ್ಬರ ಜೊತೆ ಮಾತಾಡ್ತಿದ್ದೆ.
"ನೀವ್ಯಾಕ್ರೀ ನಿಮ್ಮ ಬ್ಲಾಗಿನಲ್ಲಿ ಅದ್ಯಾವ್ದೋ ಚಿತ್ರ ಹಾಕ್ಕೊಂಡಿದೀರಾ? ಅದ್ರದ್ದು ಏನು ಅರ್ಥ" ಅಂದ್ರು.
"ಅದು ಸಿಗ್ನಸ್ ಅಂತ ಒಂದು ಆಕಾಶದಲ್ಲಿ ಕಾಣೋ ರಾಶಿ. ಹಂಗಂದ್ರೆ, ಮೇಷ ವೃಷಭದಿಂದ ಮೀನದ ವರೆಗೆ ಹನ್ನೆರಡೇ ಅಲ್ಲ್ದೆ, ಆಕಾಶದಲ್ಲಿ ಒಟ್ಟು ೮೮ ಕಾನ್ಸ್ಟೆಲ್ಲೇಶನ್ ಗಳಿವೆ. ಅದರಲ್ಲಿ ಇದೂ ಒಂದು. ಅದಕ್ಕೆ ಬೇರೆ ಒಳ್ಳೆ ಕನ್ನಡದ ಪದ ಇಲ್ದೆ ಅದಕ್ಕೂ ರಾಶಿ ಅಂತ ಅಂದೆ. ರಾಜಹಂಸ ಅಂತ ಕನ್ನಡಕ್ಕೆ (ಅಥ್ವಾ ಸಂಸ್ಕೃತಕ್ಕೆ ;) )ಆನುವಾದ ಮಾಡಿ ಹೇಳಬಹುದು. ಆದ್ರೆ, ಈ ವಿಷಯದಲ್ಲೇನೋ ನನಗೆ ಸಿಗ್ನಸ್ ಅನ್ನೋದೇ ಸೌಕರ್ಯ" ಅಂದೆ.
http://www.sampada.net/image/9240
"ಸರಿ, ಅದು ಗೊತ್ತಾಗಿರ್ಲಿಲ್ಲ" ಅಂದ್ರು ಆ ಸ್ನೇಹಿತರು.
"ಅಂದ್ಹಾಗೆ, ಸಿಗ್ನಸ್ ಗೆ ನಾರ್ದರ್ನ್ ಕ್ರಾಸ್ ಅಂತ್ಲೂ ಅಂತಾರೆ. ಯಾಕಂದ್ರೆ, ಅದು ಒಂಥರ ಶಿಲುಬೆ ಆಕಾರದಲ್ಲಿದೆ ಅದಕ್ಕೆ. ಇದು ಸಂಜೆ ಕಾಲದಲ್ಲಿ ಆಕಾಶದಲ್ಲಿ ಕಾಣೋದು ಅಂದ್ರೆ ಜುಲೈ ಆಗಸ್ಟ್ ಸೆಪ್ಟೆಂಬರ್ ಗಳಲ್ಲಿ. ಆಗ, ನಮ್ಮ ದೇಶದಲ್ಲಿ ಆಷಾಢ ಶ್ರಾವಣ ಭಾದ್ರಪದಗಳ ಮಳೆಗಾಲ. ಸುಮಾರಾಗಿ ಅರ್ದಂಬರ್ಧ ಮೋಡ ಕವ್ಕೊಂಡಿರತ್ತೆ. ಅದಕ್ಕೇ, ನಮ್ಮ ದೇಶದಲ್ಲಿ ಹಿಂದೆ ನಕ್ಷತ್ರ ವೀಕ್ಷಣೆ ಮಾಡಿ ರಾಶಿ ನಕ್ಷತ್ರ ಅಂತ ಹೆಸರು ಕೊಟ್ಟೋರು ಈ ಸಿಗ್ನಸ್ ಅನ್ನು ಗಮನ್ಸ್ಲಿಲ್ಲ ಅಂತ ಕಾಣತ್ತೆ. ಅದೇ ತರಹ ಪಶ್ಚಿಮದ ದೇಶಗಳಲ್ಲಿರೋ ತರಹ ಬೇಸಿಗೆ ತ್ರಿಕೋನ (summer triangle), ಮಾಗಿ ತ್ರಿಕೋನ (winter triangle) ಗಳನ್ನ ಕೂಡ ನಮ್ಮೋರು ಗಮನಿಸ್ಲಿಲ್ಲ. ಆದ್ರೆ ಎಷ್ಟೋ ವಿಷಯ ಗಮನಿಸಿದ್ದಾರೆ, ಅನ್ನೋದು ನವಗ್ರಹ ಸ್ತೋತ್ರ ಕೇಳಿದ್ರೆ ಗೊತ್ತಾಗತ್ತೆ. ಅಂದ್ರೆ, ವಿಷಯಕ್ಕೆ ಬರ್ತಾ..." ಅಂತ ಏನ್ನೋ ಹೇಳಕ್ಕೆ ಹೊರಟೆ.
ಅಷ್ಟರಲ್ಲಿ, ಅವ್ರು "ಅದು ಸರಿ, ವಿಷಯಕ್ಕೆ ಬರ್ತಾ, ನಾವು ಪೆನ್-ನೇಮ್ ಬೇಕಾದ್ರೆ ಇಟ್ಟುಕೋಬಹುದು. ಆದ್ರೆ, ಐಡೆಂಟಿಟಿ ಉಳೀಬೇಕು" ಅಂದರು.
ಯೋಚಿಸ್ದೆ. "ಹೌದಲ್ವಾ?" ಅನ್ನಿಸ್ತು.
ಅವ್ರು ಹೇಳಿದ್ದು ತಪ್ಪೇನಿಲ್ಲ. ಅಲ್ವಾ?
ಅದಕ್ಕೇ ಬದ್ಲಾಯ್ಸಿಬಿಟ್ಟೆ. ನನ್ನ ಸಂಪದ ಪ್ರೊಫೈಲನ್ನ.
ಹಂಸದ ಚಿತ್ರ ಹೋಯ್ತು. ಮುಖದ ಚಿತ್ರ ಬಂತು. ಡುಂ ಡುಂ :)
-ಹಂಸಾನಂದಿ
Comments
ಉ: ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :)
In reply to ಉ: ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :) by sumanajois
ಉ: ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :)
In reply to ಉ: ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :) by ahankari
ಉ: ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :)
ಉ: ಹಕ್ಕಿ ಹೋಯ್ತು, ಫೋಟೋ ಬಂತು ಡುಂ ಡುಂ :)