ನಿಮಗೆ ಇವರು ಸಿಕ್ಕರೆ ನನಗೆ ಹೇಳಿ...
ಬರಹ
ಪುಟ್ಟ ಪುಟ್ಟ ಕಿಟಕಿಗಳ ದೊಟ್ಟ ಕಟ್ಟಡಗಳು. ಪಕ್ಕದಲ್ಲಿ ನಾವೂ ಇದ್ದೇವೆ ಎನ್ನುತ್ತ ಅಲ್ಲಲ್ಲಿ, ಆಗೊಮ್ಮೆ ಈಗೊಮ್ಮೆ ಕೈಬೀಸುವ ಮರಗಳು... ಎಷ್ಟು ಏಣಿ ಜೋಡಿಸಿದರೂ ನಿಲುಕದ ಬಯಲಲ್ಲಿ ಇಲಿಯ ಮೇಲೆ ಆನೆ ಸವಾರಿ(?!) ಅದ ನೋಡುತ್ತಿವೆ ಎರಡು ಪುಟ್ಟ ಪುಟ್ಟ ಗುಬ್ಬಚ್ಚಿಗಳು ಅಲ್ಲಲ್ಲಾ ಕಾಗೆಗಳೇನೋ.... ಹಾರುವ ಕುದುರೆಗೆ ಅಡ್ಡಗಾಲು ಹಾಕುವ ಹುನ್ನಾರದಲ್ಲಿ ಮಾರ್ಜಾಲರಾಯ.! ಇದೆಲ್ಲ ನೋಡಿ ಹೌಹಾರಿದ ಆಕೆಯ ಕಾಲಲ್ಲಿ ಪುಟ್ಟ ಮೊಲವೊಂದು ಕಚಗುಳಿ ಇಡುತ್ತಿದೆ. ಗಂಭೀರವಾಗಿ ನೋಡುತ್ತಿದ್ದಾನೆ ಒಬ್ಬ ಅಜ್ಜ, ಮುಖ ಮಾತ್ರ ತೋರಿಸುತ್ತ. ಛೆ. ಆದರೆ ಈ ಆಟವೆಲ್ಲ, ಚೆಂದದ ನೋಟವೆಲ್ಲ ಕೆಲ ಕಾಲವಷ್ಟೇ. ಕೆಲವೇ ಕೆಲವು ನಿಮಿಷ. ಅದೆಲ್ಲಿಂದಲೋ ಅಡರುತ್ತದೆ ಕಪ್ಪು. ಬಿಕ್ಕುತ್ತದೆ ಈ ಎಲ್ಲ ಪರಿವಾರ....ಬಿಕ್ಕಳಿಕೆ ಹನಿಯಾಗಿ, ಹನಿ ಹಳ್ಳವಾಗಿ, ಹಳ್ಳ ನದಿಯಾಗಿ, ನದಿ ಸಾಗರವಾಗಿ ಮತ್ತೆ ಮೂಡುವೆ ಅದೇ ಗುಬ್ಬಚ್ಚಿ, ಕಾಗೆ, ಇಲಿ, ಆನೆ, ಆಕೆ, ಅಜ್ಜ, ಮೊಲ ಏನೆಲ್ಲ...ಈ ಮೋಡದ ಮೋಡಿ ಸವಿಯುವ ಅವಕಾಶ ನಿಮಗೆ ಸಿಕ್ಕಿತ್ತೋ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ನಿಮಗೆ ಇವರು ಸಿಕ್ಕರೆ ನನಗೆ ಹೇಳಿ...