ಗುಂಡಿನ ಮತ್ತ್ತೇ ಗಮ್ಮತ್ತು
"
ನೆನ್ನೆ ಪಾರ್ಟಿಯೊಂದಕ್ಕೆ ಹೋಗಿದ್ದೆ.
ನಾನು ಯಾವಾಗಲೂ ಮಾಝ ಕುಡಿಯೋದು
ಸ್ನೇಹಿತೆಯೊಬ್ಬಳು ನನಗೆ ಏನೋ ಒಂದು ಪಾನೀಯ ಕೊಟ್ಟಳು
ನನಗೇನು ಗೊತ್ತು ಅದು ಸಿಗ್ನೇಚರ್ ಬ್ರಾಂಡ್ ಅಂತ.
ಸರಿ ಒಂದು ಮೂರು ಪೆಗ್ ಏರಿಸಿಯೇ ಬಿಟ್ಟೇ. ರುಚಿಯಲ್ಲಿ ಇರಿಸು ಮುರಿಸಾದರೂ ....................
ಚೆನ್ನಾಗಿತ್ತು.
ಅಷ್ಟೇ
ನದೀಂ ದಿಂತನ ನದೀಂ ದೀಂ ತನ
ತಲೆ ಗಿರ್ ಅನ್ನಿಸಿತು. ಆಹಾ ಏಲ್ಲೋ ತೇಲ್ತಾ ಇದೀನಿ ಅನ್ನಿಸಿತು.
ಎಲ್ಲಾರೂ ಮೂರು ಮೂರು ಜನ ಕಾಣ್ತಿದಾರೆ
ಒಬ್ಬರಂತೂ ಉಲ್ಟಾ ನಿಂತಿದಾನೆ.
ಒಬ್ಬನ ಮುಖ ಕುದುರೆ ಮುಖದಂತೆ ಕಾಣಿಸಿತು
ಅರೇ ನನ್ನ ಎದುರುಗಡೆ ಇದ್ದ ಸ್ನೇಹಿತೆ ಇಷ್ಟೊಂದು ದಪ್ಪ ಆಗಿದಾಳೆ.
ಏನೋ ನಗ್ತಾ ಇದಾಳೆ ಬೇರೆ
ನನಗೇನೋ ಆಗಿದೆಯಲ್ಲಾ ?
ಅಯ್ಯೋ ಇದೇನು ಯಾವ ಲೋಕಕ್ಕೆ ಬಂದೆ ನಾನು ಅಂತ ಯೋಚನೆ ಮಾಡಿಕೊಂಡು ಕಾರ ಹತ್ತಿ ಸೀದಾ ಮನೆಗೆ ಹೋದೆ
ಅಲ್ಲಿ ನೋಡಿದ್ರೆ ನಮ್ಮನೇನೆ ಗೊತ್ತಾಗಿಲ್ಲ ಸರಿ ಯಾವ್ದೋ ಹುಡುಗನ್ನ ಕರೆದು ನಮ್ಮನೆ ಕೇಳ್ಕೊಂಡು ಮನೆಗೆ ಹೋದ್ರೆ
ಅಲ್ಲಿ ಯಾರೋ ಮನೆ ಹತ್ತಿರ ನಿಂತಿದಾರೆ ..............ಯಾರು ಅಂತ ನೋಡಿದ್ರೆ ಅವರು ನಂಗೆ ಗೊತ್ತಿರೋರೆ. ಓ ಹೌದು ಅವರು ನಮ್ಮ ಯಜಮಾನರಲ್ಲವಾ? ಅಂತ ಅನ್ಕೊಂಡು ಕೀ ಕೊಟ್ಟೇ.
ಅವರು ನನ್ನ ಬಯ್ಯೋದಕ್ಕೆ ಶುರು ಮಾಡಿದ್ರು
ಹಾಗೂ ಹೀಗೂ ರಾತ್ರಿ ನಾನು ಅವರ ಹತ್ತಿರ ಏನೇನೋ ಮಾತಾಡಿದೆ
ಮದುವೆಗೆ ಮುಂಚೆ ನಡೆದಿದ್ದನ್ನೆಲ್ಲಾ ಅವರ ಹತ್ತಿರ ಬಾಯಿ ಬಿಟ್ಟಿದ್ದೆ. ಹಾಗೆ ಅವರನ್ನ ಬಾಯಿಗ್ಗೆ ಬಂದ ಹಾಗೆ ಬೈದು ಬಿಟ್ಟೆ
ಇನ್ನು ಕೇಳ್ಬೇಕಾ ಅವರು ಜೋರು ಜಗಳ ಮಾಡಿ ನನ್ನ ಮೇಲೆ ಕೋಪ ಮಾಡ್ಕೊಂಡಿದಾರೆ . ನನ್ನ ಜೊತೆ ಇರಲ್ಲ ಅಂತ ಹೇಳ್ತಾ ಇದಾರೆ
ಕಣೆ ರೂಪ ಹ್ಯಾಗಾದ್ರೂ ಮಾಡಿ ಅವರನ್ನ ಸಮಾಧಾನ ಮಾಡೇ ರೂಪ . ನಂದೇನು ತಪ್ಪಿಲ್ಲ ಅಂತ ಹೇಳೆ
"
ಎಂದು ನನ್ನ ಆಪ್ತ ಸ್ನೇಹಿತೆ ಕೇಳ್ಕೊಂಡಾಗ
ಗುಂಡು ಅಪ್ಪಿ ತಪ್ಪಿ ಹೊಟ್ಟೆ ಸೇರಿದರೆ ಇಷ್ಟು ಕಷ್ಟ.
ಇನ್ನು ಯಾವಾಗಲೂ ಕುಡಿಯೋರ ಪಾಡು ಗೋವಿಂದ ಗೋವಿಂದ.............
ಕುಡಿತದಿಂದ ಸಂಸಾರ ನಷ್ಟ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ .
ಇದನ್ನ ಹಾಗೆ ಬರೆದ್ರೆ ಹ್ಯಾಗಿರುತ್ತೆ ಅನ್ನೋ ಕಲ್ಪನೇಲಿ ಬರೆದೆ
ಬೇಸ್ತು ಬಿದ್ದಿರಾ ?
(note: ಮಡಿವಂತರೇ ಕ್ಷಮೆ ಇರಲಿ)
Comments
ಉ: ಗುಂಡಿನ ಮತ್ತ್ತೇ ಗಮ್ಮತ್ತು
ಉ: ಗುಂಡಿನ ಮತ್ತ್ತೇ ಗಮ್ಮತ್ತು
In reply to ಉ: ಗುಂಡಿನ ಮತ್ತ್ತೇ ಗಮ್ಮತ್ತು by gururajkodkani
ಉ: ಗುಂಡಿನ ಮತ್ತ್ತೇ ಗಮ್ಮತ್ತು
ಉ: ಗುಂಡಿನ ಮತ್ತ್ತೇ ಗಮ್ಮತ್ತು
ಉ: ಗುಂಡಿನ ಮತ್ತ್ತೇ ಗಮ್ಮತ್ತು