ದಕ್ಷಿಣಾಯನ

ದಕ್ಷಿಣಾಯನ

ಇವತ್ತಿಂದ ದಕ್ಷಿಣಾಯನ ಶುರು. ಸೂರ್ಯ ಆಕಾಶದಲ್ಲಿ ವರ್ಷೇ ವರ್ಷೇ ಮಾಡೋ ಪ್ರಯಾಣದಲ್ಲಿ ಇವತ್ತು ಯುನಿವರ್ಸಲ್ ಟೈಮ್ 23:59 ಕ್ಕೆ (ಅಂದರೆ ಜೂನ್ 20ರ ಗ್ರೀನ್ ವಿಚ್ ಸಮಯ ರಾತ್ರಿ 11 ಗಂಟೆ, 59 ನಿಮಿಷದಲ್ಲಿ, ತನ್ನ ದಾರಿಯ ಅತೀ ಉತ್ತರದ ಭಾಗದಲ್ಲಿರುತ್ತಾನೆ. ನೀವೆಲ್ಲಿದ್ದೀರೋ ಅದರ ಮೇಲೆ ಕೆಲ್ವು ಘಂಟೆ ಸೇರಿಸ್ಕೊಂಡೋ, ಕಳ್ಕೊಂಡೋ ಮಾಡಿದ್ರೆ, ನಿಮ್ಮೂರಲ್ಲಿ ಇದು ಎಷ್ಟು ಹೊತ್ತಿಗೆ ಅಂತ ಗೊತ್ತಾಗತ್ತೆ. ಇಲ್ಲಿಂದ ಸೂರ್ಯ ಪ್ರತಿ ಕ್ಷಣವೂ ದಕ್ಷಿಣಕ್ಕೆ ಸರಿಯೋದ್ರಿಂದ ಇವತ್ತಿಂದ ದಕ್ಷಿಣಾಯನ, ಇನ್ನು ಆರು ತಿಂಗಳು.

ಇವತ್ತೇ ಉತ್ತರಾರ್ಧ ಗೋಳದಲ್ಲಿ ಅತಿ ಹೆಚ್ಚು ಹಗಲು,ಮತ್ತೆ ಅತಿ ಕಡಿಮೆ ರಾತ್ರಿಯ ಅವಧಿ. ನಾನಿರೋ ಕಡೆ 14 ಗಂಟೆ, 45 ನಿಮಿಷ ಹಗಲಿರತ್ತೆ ಇವತ್ತು. ಇನ್ನು ಇವತ್ತಿಂದ ಆರ್ಕ್ಟಿಕ್ ಸರ್ಕಲ್ ಒಳಗಿರೋ ಭಾಗದಲ್ಲಿ ಮುಳುಗದ ಸೂರ್ಯನ ಆರುತಿಂಗಳ ಮುಗಿಯದ ಹಗಲು! ಅದೇ ದಕ್ಷಿಣಾರ್ಧ ಗೋಳದಲ್ಲೋ ಇವತ್ತು ಅತೀ ಉದ್ದದ ರಾತ್ರಿ. ಅಂಟಾರ್ಕ್ಟಿಕಾದಲ್ಲಿ, ಆರು ತಿಂಗಳ ಕಾಲ ಸೂರ್ಯನ ಮುಖವೂ ಕಾಣದು.

ಇವತ್ತು ಗೂಗಲ್ ಮುಖಪುಟ ಆಕರ್ಷಕವಾಗಿತ್ತು. ಅದನ್ನೇ ಹಾಕಿದೀನಿ ಇಲ್ಲಿ,ಇವತ್ತು ನೋಡದೇ ಹೋಗಿದ್ದವರಿಗೆ ಅಂತ!

-ಹಂಸಾನಂದಿ

 

Rating
No votes yet

Comments