ಲೀಲಾವತಿ

ಲೀಲಾವತಿ

ಲೀಲಾವತಿ
ಭಾಸ್ಕರಾಚಾರ್ಯರು ಕನ್ನಡದ ಗಣಿತ ತಜ್ಞರು ಇವರ ’ಲೀಲಾವತಿ ಗ್ರಂಥ’ ಇವರ ಮೇಧಾಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಗಣಿತದ ಜೊತೆಗೆ ಸಾಹಿತ್ಯದ ಬೆಸುಗೆ ಇವರ ವೈಶಿಷ್ಟ್ಯ.
“ಲೀಲಾವತಿಯನ್ನೋದಿದರೆ ಸುಂದರವಾದ ಒಂದು ರತ್ನಾಭರಣದ ನೆನಪಾಗುತ್ತದೆ. ಆಭರಣದ ಚಿನ್ನದ ಗೂಡುಗಳಲ್ಲಿ ಹೊಳೆಯುವ ರತ್ನಗಳಂತೆ ಲೀಲಾವತಿಯ ಸಾಹಿತ್ಯದ ಗೂಡುಗಳಲ್ಲಿ ಗಣಿತದ ರತ್ನಗಳು ಪ್ರಕಾಶಿಸುತ್ತವೆ.” ಹೀಗೆ ಸೀತಾರಾಮ ಶಾಸ್ತ್ರಿ ಎಂಬ ಗಣಿತಜ್ಞರು ಹೇಳಿದ್ದಾರೆ. ಎಂತಹಾ ಚಿನ್ನದ ಮಾತುಗಳು.
ನಾನು ಆ ಚಿನ್ನದ ಗೂಡಿನಿಂದ ಒಂದು ರತ್ನವನ್ನು ಇಲ್ಲಿ ತೋರಿಸುತ್ತೇನೆ.
ಶ್ಲೋಕ ಹೀಗಿದೆ,
“ಬಾಲೆ ಮರಾಲಕುಲ ಮೂಲದಲಾನಿ ಸಪ್ತ ತೀರೇ
ವಿಲಾಸಭರ ಮಂಥರಗಾನ್ಯ ಪಶ್ಯಂ
ಕುರ್ವನ್ ಚ ಕೇಲಿ ಕಲಹಂ ಸಯುಗ್ಮಂ
ಶೇಷಂ ಜಲೇ ವದ ಮರಾಲಕುಲ ಪ್ರಮಾಣಂ”
ಇದರರ್ಥ ಹೀಗಿದೆ,
“ಎಲೈ ಬಾಲೆಯೇ ಒಂದು ಗುಂಪಿನಲ್ಲಿರುವ ಹಂಸಗಳ ಸಂಖ್ಯೆಯ ವರ್ಗಮೂಲದ ಎರಡನೇ ಏಳರಷ್ಟು ಒಂದು ಕೆರೆಯ ತೀರದಲ್ಲಿ ವಿಹರಿಸುತ್ತಿವೆ. ಉಳಿದ ಎರಡು ಹಂಸಗಳು ನೀರಿನಲ್ಲಿ ಪ್ರೇಮ ಕಲಹ ಮಾಡುತ್ತಿವೆ. ಹಾಗಾದರೆ ಹಂಸಗಳ ಒಟ್ಟು ಸಂಖ್ಯೆ ಎಷ್ಟು?”
ಗೆಳೆಯರೆ, ಈ ಸಮಸ್ಯೆಯ ಪರಿಹಾರ ನಾನು ಸೂಚಿಸಲೋ ಅಥವಾ ಯಾರಾದರೂ ಸೂಚಿಸುವಿರೋ?

Rating
No votes yet

Comments