ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್
ಓದುಗರೇ,
ನೀವು ಜೀವನದಲ್ಲಿ ಪಾಪ ಮಾಡಿದ್ದೀರಾ? ಹಾಗಾದರೆ ಈ ಜಲಪಾತದಿಂದ ಹುಷಾರಾಗಿರಿ. ಇದು ನಿಮ್ಮ ಬಣ್ಣ ಬಯಲು ಮಾಡುತ್ತದೆ. ಇದು ಬದರಿನಾಥದ ಬಳಿ ಇರುವ ವಸುಧಾರಾ ಜಲಪಾತ. ಬದರಿನಾಥದಿಂದ ಮುಂದೆ ಹೋದರೆ ಸಿಗುತ್ತದೆ ಮಾನಾ ಎಂಬ ಹಳ್ಳಿ. ಅಲ್ಲಿಂದ ೮ಕಿಮೀ ನಡೆದರೆ ಸಿಗುತ್ತದೆ ವಸುಧಾರಾ ಜಲಪಾತ. ಸುತ್ತಲಿನ ಕೊರೆಯುವ ಚಳಿಗೆ, ನಿಮಗೆ ತಣ್ಣೀರಿನ ಸ್ನಾನ ಮಾಡಬೇಕಿನಿಸಿದರೆ ನೀವು ಇದರ ಕೆಳಗೆ ನಿಲ್ಲಬಹುದು. ಆದರೆ ಈ ಜಲಪಾತ ತುಂಬಾ ಚೂಸಿ (choosy) ಅಂತೆ. ನೀವು ಜೀವನದಲ್ಲಿ ಏನಾದರೂ ಪಾಪ ಮಾಡಿದ್ದರೆ ಈ ಜಲಪಾತದ ನೀರು ನಿಮ್ಮ ತಲೆಯ ಮೇಲೆ ಬೀಳುವುದೇ ಇಲ್ಲವಂತೆ. ಸ್ನೇಹಿತರ ಜೊತೆ ಹೋಗಿದ್ದ ನಾವು ರಿಸ್ಕ್ ತೆಗೆದುಕೊಳ್ಳಲು ಇಷ್ಟ ಪಡದೇ ಹಾಗೇ ಬಂದೆವು :) (ಅಲ್ಲಾ... ಪುಣ್ಯಕಾರ್ಯ ಮಾಡೋದೂ ಅಲ್ದೇ ಈ ಚಳೀನಲ್ಲಿ ಸ್ನಾನ ಮಾಡೊದು ಇದುಯಾವ ಕರ್ಮ ಎಂದ ನನ್ನ ಸ್ನೇಹಿತ).
ಏನ್ ಸ್ವಾಮೀ, ಈ ಕಾಲದಲ್ಲೂ ಇವೆಲ್ಲಾ ನಂಬ್ತೀರಾ ಅಂತ ಕೇಳೋ ಮೊದಲು ಒಮ್ಮೆ ಕೆಳಗಿನ ಚಿತ್ರಗಳನ್ನು ನೋಡಿ. ಮೊದಲನೆಯ ಚಿತ್ರದಲ್ಲಿ ವಸುಧಾರೆಯ ಧಾರೆ ಉದ್ದುದ್ದಕ್ಕೆ ಕೆಳಕ್ಕೆ ಬೀಳುತ್ತಿದ್ದರೆ ಎರಡನೆಯದರಲ್ಲಿ ಅಡ್ಡಡ್ಡಕ್ಕೆ ಗಾಳಿಯಲ್ಲಿ ತೇಲಿಹೋಗುತ್ತಿದೆ. ಕೆಳಗೆ ಒಂದು ಹನಿ ಕೂಡ ಬೀಳುತ್ತಿಲ್ಲ. ಆಚಾರವಾದಿಗಳು, ವಿಚಾರವಾದಿಗಳು ಇದರ ಕಡೆ ಕಣ್ಣು ಹಾಯಿಸಿ ತಲೆ ಕೆರೆದುಕೊಂಡು ತಮ್ಮ ಅಭಿಪ್ರಾಯವನ್ನು ತಿಳಿಸಬೇಕೆಂದು ಕೋರಿಕೆ.
ಯಾರೋ ನಿಮ್ಮಂತಹ ಪುಣ್ಯವಂತರು ಕೆಳಗೆ ನಿಂತಿರಬೇಕು
ಅರೆರೆ... ಯಾರಪ್ಪಾ ಕೆಳಗೆ ನಿಂತಿರೋದು... Gone with the wind!!!
ವಿ.ಸೂ.: ಶೀರ್ಷಿಕೆ ಚಿತ್ರ ಜುಲೈನಲ್ಲಿ ತೆಗೆದದ್ದು ಕೃಪೆ: ಪಿಕಾಸಾ. ಕೊನೆಯ ಎರಡು ಚಿತ್ರಗಳು ನಾವು ಈ ಮೇನಲ್ಲಿ ಹೋಗಿದ್ದಾಗ ತೆಗೆದದ್ದು.
Comments
ಉ: ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್
In reply to ಉ: ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್ by hpn
ಉ: ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್
In reply to ಉ: ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್ by keerthi2kiran
ಉ: ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್
ಉ: ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್
In reply to ಉ: ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್ by lgnandan
ಉ: ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್
ಉ: ವಸುಧಾರಾ ಜಲಪಾತ: ಪಾಪಿಗಳೇ ಹುಷಾರ್