ನರಳುವಿಕೆ-ಒಂದು ಸ್ವಗತ
ಪ್ರತಿ ದಿನ ಪ್ರತಿ ಕ್ಷಣ ನರಳುವಿಕೆ ಈ ಜೀವನ
ಬಾಳಬೇಕೆಂಬಾಸೆ ಚಿವುಟುತಿರುವಾ ಮನ
ಹುಡುಕಲೆಲ್ಲಿ ನೆಮ್ಮದಿ ಮನದಲಿ ಅರಿಯದ ಬೇಗುದಿ
ಕಂಡ ಕನಸಳಿಯುತಿದೆ ಎಲೆ ಉದುರುವ ತೆರದಿ
ಹಾರಾಡಿ ನಲಿದಾಡಿ ಕುಣಿವಾ ಹಂಬಲ
ಮೌನವಾಗಿದೆ ಕಾಣದೆ ಬೆಂಬಲ
ಬೆಳಕೆಂದು ಭ್ರಮಿಸಿ ತೆರೆದೆ ಬಾಗಿಲ
ಮಿಂಚಂತೆ ಬಂದು ಸೇರಿದೆ ಬಯಲ
ಪೂಜೆಗೆಂದು ತಂದ ಹೂವು ಕಂಡಿತೇಕಿಂತಹ ಸಾವು
ಚೂರು ಚೂರಾದರೂ ಹೃದಯ ಮಾಗದಾ ನೋವು
ಕಾಯಲೇ ನಾ ಚಂದ್ರನಿಗಾಗಿ ? ಬೇಡಲೇ ನಾ ಬೆಳಕಿಗಾಗಿ?
ಬದುಕಲೆಬೇಕಿದೆಯೇ ಈ ಮುಗಿಯದ ಬದುಕಿಗಾಗಿ ?
Rating
Comments
ಉ: ನರಳುವಿಕೆ-ಒಂದು ಸ್ವಗತ
In reply to ಉ: ನರಳುವಿಕೆ-ಒಂದು ಸ್ವಗತ by lgnandan
ಉ: ನರಳುವಿಕೆ-ಒಂದು ಸ್ವಗತ
ಉ: ನರಳುವಿಕೆ-ಒಂದು ಸ್ವಗತ
In reply to ಉ: ನರಳುವಿಕೆ-ಒಂದು ಸ್ವಗತ by ರೇಖಾ
ಉ: ನರಳುವಿಕೆ-ಒಂದು ಸ್ವಗತ
ಉ: ನರಳುವಿಕೆ-ಒಂದು ಸ್ವಗತ
In reply to ಉ: ನರಳುವಿಕೆ-ಒಂದು ಸ್ವಗತ by Khavi
ಉ: ನರಳುವಿಕೆ-ಒಂದು ಸ್ವಗತ