ಮರೆತ ಹಣ್ಣುಗಳು

ಮರೆತ ಹಣ್ಣುಗಳು

"I want only strawberry, no apple" ಎಂದು ಇಲ್ಲಿ ಒಂದು ಮಗು ಅಳುತ್ತಿದ್ದಾಗ ನೆನಪಿಗೆ ಬಂದದ್ದು ನಾನು ತಿಂದ ಹಣ್ಣುಗಳಲ್ಲಿ ಎಂದಿಗೂ ಮರೆಯಲಾಗದಂಥದ್ದು, ಸ್ವಲ್ಪವಾದರೂ ಅಪರೂಪ ಎನ್ನುವವು.

೧೦ ವರ್ಷಗಳ ಹಿಂದೆ ನಾನು ಶಿವಮೊಗ್ಗದಲ್ಲಿದ್ದಾಗ ಪಕ್ಕದ ಮನೆಯಲ್ಲಿ ಅಪರೂಪದ "ರಾಮಫಲ" ಮರ ಇತ್ತು. ನಮಗೆ ದಿನಾ ಎಲ್ಲಾ ಅದರ ಸುತ್ತಲೇ ಆಟ. ರಾಮಫಲದ ಹಣ್ಣಿನ ರುಚಿ ಹೇಗೆ ತಿಳಿಸಲಿ?? ಆಗ ತಿಂದ ರಾಮಫಲ ಶಿವಮೊಗ್ಗ ಬಿಟ್ಟ ಮೇಲೆ ತಿಂದೇ ಇಲ್ಲ. ರಾಮಫಲ ಸೀತಾಫಲಕ್ಕಿಂತ ಸ್ವಲ್ಪ ದೊಡ್ಡದಿರುತ್ತದೆ. ಸ್ವಲ್ಪ ತರಿ ಜಾಸ್ತಿ. ರುಚಿ ವ್ಯತ್ಯಾಸ. ಹೆಚ್ಚಿಗೆ ನೆನೆಪು ಬರುತ್ತಿಲ್ಲ. ಹಿರಿಯರು ತಿಳಿಸಬೇಕು.

ನನ್ನ ಅಮ್ಮ ಯಾವಾಗಲೂ ನೆನೆಸಿಕೊಳ್ಳುವುದು ಪನ್ನೇರಳೆ ಹಣ್ಣು. ಆಗ ಅವರ ಮನೆಯಲ್ಲೇ ಪನ್ನೇರಳೆ ಮರ ಇತ್ತಂತೆ.(ನಾನು ಹುಟ್ಟುವ ವೇಳೆಗೆ ಕಡಿಸಿಬಿಟ್ಟಿದ್ದರು). ನಾನು ಈ ಹಣ್ಣನ್ನು ಎಲ್ಲೋ ಗಾಂಧೀಬಜಾರ್ ನಲ್ಲಿ ತಿಂದದ್ದು ನೆನಪು. ತಿಂದದ್ದು ೨ ಹಣ್ಣು. ಮೊದಲನೆಯ ಹಣ್ಣು ಒಗಚು ಎನ್ನಿಸಿದರೂ ಎರಡನೆಯ ಹಣ್ಣು ಚೆನ್ನಾಗಿದೆ ಅನ್ನಿಸಿತ್ತು. ನನ್ನ ಸೋದರಮಾವ ಮನೆಯಲ್ಲಿದ್ದ ಪನ್ನೇರಳೆ ಮರದಿಂದ ಹಣ್ಣು ಕಿತ್ತು ದಿನಾ ಇಡೀ ತಿಂದು ಮಾರನೇ ದಿನ ಮೂಗಿನವರೆಗೂ ಕಫ ತುಂಬಿತ್ತು ಎಂದು ಈಗಲೂ ನೆನಪಿಸಿಕೊಳ್ಳುತ್ತಾರೆ.

ಶಿವಮೊಗ್ಗದಲ್ಲಿ ನಾನು ಬಹಳ ಇಷ್ಟಪಟ್ಟ ಇನ್ನೊಂದು ಹಣ್ಣು "ಚಂದ್ರ ಹಲಸು". ಈ ಹಲಸಿನ ತೊಳೆ ಕೆಂಪು/ಕೇಸರಿ ಬಣ್ಣದಲ್ಲಿರುತ್ತದೆ. ರುಚಿ ಅದ್ಭುತ. ಗೆಳೆಯ ಶ್ರೀಶನಿಗೆ (ಶ್ರೀಶ ಕಾರಂತ) ನೆನಪಿರಬಹುದು. ಈ ಹಣ್ಣನ್ನೂ ನಾನು ಶಿವಮೊಗ್ಗ ಬಿಟ್ಟಮೇಲೆ ತಿಂದಿಲ್ಲ.

ಕೊನೆಯದಾಗಿ "ನಾಯಿ-ನೇರಳೆ" . ಈ ಮರ ನಮ್ಮ ಶಿವಮೊಗ್ಗ ಮನೆಯಲ್ಲೇ ಇತ್ತು. ಸಾಮಾನ್ಯವಾಗಿ ಸಿಗುವ ನೇರಳೆ ಹಣ್ಣಿಗಿಂತ ಚಿಕ್ಕದು. ಸ್ವಲ್ಪ ಹುಳಿ ಜಾಸ್ತಿ. ಚಿಕ್ಕವರಿದ್ದಾಗ ಈ ಹಣ್ಣು ತಿಂದು, ಬಾಯಿ-ಹಲ್ಲೆಲ್ಲಾ ನೀಲಿ ಮಾಡಿಕೊಂಡು ಬೈಸಿಕೊಳ್ಳುತ್ತಿದ್ದೆವು. ಬೆಂಗಳೂರಿಗೆ ಬಂದಮೇಲೆ ನೇರಳೆ ಹಣ್ಣು ಸೇರಿಗೆ ೧೦ರೂ....

Rating
No votes yet

Comments

Submitted by ramvani Mon, 05/27/2013 - 15:14

ನಮಸ್ಕಾರ,

ಮರೆಯಲಾಗದ ಹಣ್ಣುಗಳ ನೆನಪು ಮಾಡಿಕೊಟ್ಟಿದ್ದಕ್ಕೆ ವಂದನೆಗಳು. ಕಾಕಿ ಹಣ್ಣು ಇದನ್ನು ನಾವು ಮಂತ್ರಂಗಾಳಿ ಹಣ್ಣು, ಎನ್ನುತ್ತಿದ್ದೆವು. ಸಿಂಗಪುರದಲ್ಲಿ ರಾಮಫಲ ಸಿಗುತ್ತೆ, ಸೀತಾಫಲದಷ್ಟು ಸಿಹಿ ಅಲ್ಲವದು, ನಾಯಿ-ನೇರಳೆ ತಿಂದು ಏಟು ತಿಂದ ನೆನಪು ಇನ್ನೂ ಹಸಿ ಆಗಿದೆ. ವಾಣಿ