ದಿನಕ್ಕೊಂದು ಪದ
ಭಿತ್ತಿ (ನಾ)
೧. ಮುರಿಯುವುದು; ಒಡೆಯುವುದು; ಬೇರ್ಪಡಿಸುವುದು.
೨. ಚೂರು; ಮುರುಕು; ತುಂಡು.
೩. ಒಡೆದುಹೋಗಿರುವ ಅಥವಾ ಭಾಗವಾಗಿರುವ ಯಾವುದಾದರೂ ವಸ್ತು.
೪. ಬಿರುಕು; ಸೀಳು; ಛಿದ್ರ.
೫. ಗೋಡೆ; ಕುಡ್ಯ : ಭಿತ್ತಿಃ, ಕುಡ್ಯಂ-೨ ಗೋಡೆಯ ಹೆಸರುಗಳು (ಸಿದ್ಧಾಂತಿ ೯೯); ಇದಿರೊಳ್ ಪೊಳೆವ ಪಳುಕಿನ ಭಿತ್ತಿಯಂತೆ ಸುತ್ತಿದ ನೇತ್ರದುಕೂಲದೊಳಂ (ಕಾದಂಪೂ ೭೯); ಭಿತ್ತಿ ಮೂಱಱ ಮೇಲೆ ಚಿತ್ರ ಬರೆಯಿತ್ತು (ಅವಚಂ ೯೨-೪೦೯).
೬. ಚಿತ್ರವನ್ನು ಬರೆಯುವ ಮೂಲ ಆಧಾರ; ಹಲಗೆ, ಬಟ್ಟೆ, ಗೋಡೆ ಮೊದಲಾದ ಸಾಧನ: ಭಿತ್ತಿಯೆನೆ ಪುಸ್ತಕಂ (ಮಂಗರಾ ೧೦೬-೧೫); ಭಿತ್ತಿಯಿಲ್ಲದೆ ಬರೆಯಬಹುದೆ ಚಿತ್ತಾರವ ಬಿತ್ತಿ ಬೆಳೆಯಬಹುದೆ ಧರೆಯಿಲ್ಲದೆ (ಬಸವ ೩೯೮); ಭಿತ್ತಿಯೊಂದಿಲ್ಲದಿರೆ ಚಿತ್ತವೆಂತಿರಲಹುದು? ಚಿತ್ರವಿಲ್ಲದೆ ಭಿತ್ತಿ ಸೊಗಸಹುದೆಂತು? (ಮಂಕುಕ ೧೦೫)
೭. ಮೂಲ; ತಳ : ಅರ್ಚನೆಯವನರ್ಚಿಸಿದಲ್ಲಿ ಪುಣ್ಯದ ಫಲ ಭಕ್ತಿಯಿಂ ದ್ರವ್ಯವ ಕೊಡುವುದು ಮುಕ್ತಿಲೋಕದೊಳಗು ಈ ಉಭಯದ ಭಿತ್ತಿಯನಱಿದು ನಿತ್ಯ ತಿಳಿದವಂಗೆ ಏನೂ ಎನಲಿಲ್ಲ (ಮೋಳಿಗೆಯ ಮಾರಯ್ಯ ೧೬-೬೦)
೮. ಜೀವನ ನಡೆಸಲು ಅಥವಾ ದೇವತೋತ್ಸವಾದಿಗಳು ನಡೆಯಲು ಸ್ಥಾಪಿಸುವ ಆಧಾರಭೂತವಾದ ಶಾಸನವುಳ್ಳ ಭೂಮಿ, ಇಡುಗಂಟು ಮೊದಲಾದವು; ಆಶ್ರಯನಿಧಿ: ಉತ್ಸವಗಳು ನಡೆಯತಕ್ಕ ಬಗೆ ನಮ್ಮ ಹತ್ತು ಮಂದಿ ಒಪ್ಪಿ ಭಿತ್ತಿ ಮಾಡಿಕೊಟ್ಟಿರುವುದೇನೆಂದರೆ (ಎಪಿಗ್ರಾಫಿಯಾ ಕರ್ನಾಟಿಕಾ IX (S), ಅನೇಕ ೧೦೭ ೬; 1802)
೯. ಹಿನ್ನೆಲೆ: ಮುಂದುಗಡೆ ಇರುವ ಮುಖ್ಯ ವ್ಯಕ್ತಿಗಳಿಗೆ ಅಥವಾ ವಸ್ತುಗಳಿಗೆ ಪ್ರಾಧಾನ್ಯ ಕೊಡುವಂಥ ದೃಶ್ಯ . . . ಹಿನ್ನೆಲೆ; ಭಿತ್ತಿ; ಮರೆ; ಅಪ್ರಸಿದ್ಧಿ (Back-ground. ಇಂಗ್ಲಿಷ್ ಕನ್ನಡ ನಿಘಂಟು)
(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)
Comments
ಉ: ದಿನಕ್ಕೊಂದು ಪದ
ಉ: ದಿನಕ್ಕೊಂದು ಪದ
ಉ: ದಿನಕ್ಕೊಂದು ಪದ
In reply to ಉ: ದಿನಕ್ಕೊಂದು ಪದ by anil.ramesh
ಉ: ದಿನಕ್ಕೊಂದು ಪದ
In reply to ಉ: ದಿನಕ್ಕೊಂದು ಪದ by cmariejoseph
ಉ: ದಿನಕ್ಕೊಂದು ಪದ