ಹೆಂಡತಿ-ಎಂದರೆ ಜೋಕು ಯಾಕೆ ?

ಹೆಂಡತಿ-ಎಂದರೆ ಜೋಕು ಯಾಕೆ ?

Comments

ಬರಹ

ಯಾವುದೇ ಬರಹ, ಲೇಖನ, ನಾಟಕ, ಏನೆ ನೋಡಿದರೂ ಮದುವೆ ಬಗ್ಗೆ ಯಾವುದೇ ಒಳ್ಳೆಯ ಮಾತಿಲ್ಲ
ಹೆಚ್ಚಾಗಿ ಗಂಡಸರು
ಮದುವೆಯಿಂದ ಆಗಬಾರದ ಅನಾಹುತವೇನೂ ಆಗಿದೆ ಎಂಬಂತೆ ಕತೆ ಕವನ ಬರೆದು ಗೀಚಿ ಗೀಚಿ ಹಾಳೆಗಳನ್ನೆಲ್ಲಾ ,ಖಾಲಿ ಮಾಡುತ್ತಾರೆ.
ತಮ್ಮ ಸ್ವಾತಂತ್ರ ಹೋಯಿತು ಎಂದು ಬೊಬ್ಬೆ ಹೊಡೆಯುತ್ತಾರೆ
ಹೆಂಡತಿಯರ ಮೇಲೆ ಜೋಕ್ ಕಟ್ಟಿ ನಗುತ್ತಾರೆ.

ಎರೆಡು ತಿಂಗಳ ಕೆಳಗೆ ಯಾವುದೋ ಒಂದು ಬ್ಲಾಗ್‌ನಲ್ಲಿ ಒಂದು ಕತೆ ಬರೆದಿದ್ದರು (ಮಲ್ಲೇಶ್ವರಮ್ ಸುಂದರಿಯರು ಅಂತ ಕತೆ ಇರಬೇಕು )

"ಹೆಂಡತಿ ಗಂಡನನ್ನು ಬಿಟ್ಟು ಹೋಗುತ್ತೇನೆ ಎಂದಾಗ ಗಂಡ ಏನೂ ಮಾತಾಡುವುದಿಲ್ಲ ಒಂದು ರೀತಿಯ ನಿರಾಳ ಭಾವ ತುಂಬಿತು" ಎಂದು ಬರೆದಿದ್ದರು.ಅದಕ್ಕೆ ಪ್ರತಿಕ್ರಿಯಿಸಿದ ಮಹನೀಯರೊಬ್ಬರು ಎಲ್ಲರಿಗೂ ಆ ಭಾಗ್ಯ ಲಭ್ಯವಾಗುವಿದಿಲ್ಲ ಎಂದು ಅವಲತ್ತುಕೊಂಡಿದ್ದರು.
ಮತ್ತೊಬ್ಬ ಮಹನೀಯರು ಸಂಪದದಲ್ಲಿ ನಾಯಿಯೊಂದು ಒಬ್ಬನ ಹೆಂಡತಿಯನ್ನು ಕಚ್ಚಿದಾಗ ಎಲ್ಲರೂ ಅವನ ಮನೆ ಮುಂದೆ ಆ ನಾಯಿಗಾಗಿ ಕ್ಯೂ ನಿಲ್ಲುವುದನ್ನು ಒಂದು ಜೋಕಾಗಿ ಬರೆದಿದ್ದರು.

ಮತ್ತೊಬ್ಬರು (ಯುವ ಪ್ರೇಮಿಗಳು) ಯಾವುದೋ ಮಿಷನ್ ಬಗ್ಗೆ ಮಾತಾಡುತ್ತಾ ಆ ಮಿಷನ್ ಇದ್ದರೆ ಬೇಗ ಮದುವೆಯಾಗಿ ಸ್ವತಂತ್ರ ಕಳೆದುಕೊಳ್ಳ್ಳುವ ಭಯ ಇರುವುದಿಲ್ಲ ಎಂದು ಅರುಹಿದರು.

ಮೊನ್ನೆ ನಮ್ಮ ಪತಿರಾಯನ ಸ್ನೇಹಿತನೂಬ್ಬ ಇವರಿಗೆ ಒಂದು ಮಾತನ್ನು ಹೇಳಿ ಹೋಗಿದ್ದಾನೆ . ಆತ ಮತ್ತೆ ಬರುವುದನ್ನೇ ಕಾಯುತ್ತಿದ್ದೇನೆ ಗ್ರಹಚಾರ ಬಿಡಿಸಲು
"ಹೆಂಡತಿ ಚಾಕ್ಲೇಟ್ ಯಾವಾಗ ಬೇಕಾದರೂ ತಿನ್ನಬಹುದು. ಆದರೆ ಬೇರೆ ಹೆಂಗಸರು ಐಸ್‌ಕ್ರೀಮ್ ಇದ್ದಂತೆ ಕರಗುವ ಮುಂಚೆ ತಿನ್ನಬೇಕು " ಇದು ಆತ ಹೇಳಿಕೊಟ್ಟ ಜೋಕು

ಇದ್ದಿದರಲ್ಲಿ ಏ. ಆರ ಮಣಿಕಾಂತ್ ವಿಜಯ ಕರ್ನಾಟಕದಲ್ಲಿ ಹೆಂಡತಿಯ ಮಹತ್ವದ ಬಗ್ಗೆ ಒಂದು ಪುಟ್ಟ ಕತೆ ಕೊಟ್ಟಿದ್ದರು . ಅವರೇ ವಾಸಿ

ಯಾಕೆ ಹೀಗೆ.

ಪ್ರತಿಯೊಬ್ಬರಿಗೂ ಮದುವೆ ಹೆಂಡತಿ ಅಂದರೆ ತಾಪತ್ರಯ ಅಂತ ಗೊತ್ತಿದ್ದರೂ ಯಾಕೆ ಮದುವೆ ಆಗುತ್ತಾರೆ?

ಯಾಕೆಂದರೆ ಈ ಜೋಕು, ಕತೆಗಳಲ್ಲಿ ಬರುವುದೆಲ್ಲ ನಿಜವಿರುವುದಿಲ್ಲ.

ತಾಯಿ ಮದುವೆಯ ತನಕ ಜೊತೆ ಇರುತ್ತಾಳೆ. ನಂತರ ಹೆಂಡತಿಯೇ ಕೊನೆತನಕ ಜೊತೆಯಲಿ ತಾಯಿಯ ಮಮತೆಯನ್ನು ಧಾರೆ ಎರೆಯುತ್ತಾಳೆ.
ಆದರೂ ಅಂದಿನ ಕಾಲದಿಂದ ಇಂದಿನವರೆಗೂ ಹೆಂಡತಿ ಸರ್ದಾರ್ಜಿ ತರಹ ನಗೆಪಾಟಲಿಗೆ ಈಡಾಗುವುದು ಮಾತ್ರ ತಪ್ಪಿಲ್ಲ.

ಮದುವೆ ಆಗುವವರು, ಆದವರು, ಆಗಲಿರುವವರು , ಏನು ಹೇಳುತ್ತೀರಾ
ಹಾಗೆ ನಾನು ಮದುವೆಯೇ ಆಗುವುದಿಲ್ಲ ಎಂದು ಘೋಷಿಸುವವರು ಯಾರ್ಯಾರು ಇದ್ದೀರಾ ನೋಡೋಣ.

ಇದು ಹಿತಕರವಾದ ಚರ್ಚೆಯಾಗಿರಲಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet