Accident Zone - ಆಕಸ್ಮಿಕ ವಲಯ
ರಸ್ತೆಯ ತಿರುವು ಸಿಗುತ್ತಿದ್ದಂತೆ ಬದಿಯಲ್ಲಿ "Accident Zone" (ಆಕಸ್ಮಿಕ ವಲಯ) ಎಂದು ಕೆಂಪಗೆ ಬರೆದಿತ್ತು. ಆ ರಸ್ತೆಯಲ್ಲಿ ಮೊದಲು ಬರುತಿದ್ದ ಬೈಕ್ ಸವಾರನಿಗೆ ಎಲ್ಲರೂ ಹೇಳುತಿದ್ದ ಅಪಾಯದ ತಿರುವು ಇದೆ ಎನಿಸಿತು. ಇಲ್ಲಿ ಬಹಳಷ್ಟು ಅಪಘಾತಗಳು ನಡೆದಿದೆ, ಅಲ್ಲಿ ಸತ್ತವರ ಉಪದ್ರ ಇದೆ ಎಂದೆಲ್ಲ ಹೇಳುತ್ತಿದ್ದನ್ನು ನೆನಪಿಸಿದ. ಆದರೆ ಅದೆಲ್ಲಾ ಸುಳ್ಳು ಎಂದು ಮನಸ್ಸಿಗೆ ಹೇಳತ್ತಾ ಮುಂದೆ ಬರುವಾಗ , ಒಬ್ಬ ಅಪರಿಚಿತ ಕೈತೋರಿಸುತ್ತಿದ್ದ. ಅಪರಿಚಿತನಾದರೇನು ಒಂದು ಸಹಾಯ ಮಾಡುವ ಎಂದುಕೊಂಡು ಬೈಕ್ ನಿಲ್ಲಿಸಿದ. "ಒಂದು ಕಿಲೋಮೀಟರ್ ವರೆಗೆ ನಾನಿದ್ದೇನೆ lift ಕೊಡ್ತೀರಾ?" ಎಂದು ಕೇಳಿದಾಗ ಸರಿ ಎಂದ. ಬೈಕ್ ಚಲಿಸುತ್ತಿದ್ದಂತೆ "ನೀವೆಲ್ಲಿಗೆ?" ಎಂದು ಬೈಕ್ ಚಾಲಕ ಮಾತು ಪ್ರಾರಂಬಿಸಿದ. "ಇಲ್ಲೇ ಒಂದು ಕಿಲೋಮೀಟರ್ " ಅಪರಿಚಿತ ಉತ್ತರಿಸಿದ
" ಇದು ಬಹಳ ಅಪಾಯದ ತಿರುವಂತೆ ಹೌದಾ?" ತನ್ನಲ್ಲಿರುವ ಭಯವನ್ನು ವ್ಯಕ್ತ ಪಡಿಸುವಂತೆ ಕೇಳಿದ ಬೈಕ್ ಸವಾರ.
ಅಪರಿಚಿತ ಒಮ್ಮೆ ಮೌನವಾಗಿ - "ಹೌದು ಇಲ್ಲಿ ಹಿಂದೆ ಸತ್ತವರ ಕಾಟ ಇದೆ, ಇಲ್ಲಿ ವೇಗವಾಗಿ ಹೋಗ್ಬಾರ್ದು" ಎಂದ.
ಆದರೆ ಚಾಲಕ ಅದನ್ನು ಒಪ್ಪಲಿಲ್ಲ ತನ್ನಲ್ಲಿ ಭಯವಿದ್ದರೂ - "ಅದೆಲ್ಲಾ ಸುಳ್ಳು ಇಷ್ಟೊಂದು ಒಳ್ಳೆಯ ರಸ್ತೆ ಇದೆ, ನಾನು ವೇಗವಾಗಿ ಹೋಗಬಲ್ಲೆ" - ಎಂದು ಬೈಕಿನ ವೇಗವನ್ನು ಹೆಚ್ಚಿಸಿದ.
"ನಾನು ಕೂಡ ಹೀಗೇ ಹೇಳ್ತಿದ್ದೆ, ಒಮ್ಮೆ ಹಾಗೆ ತುಂಬಾ ವೇಗವಾಗಿ ಚಲಾಯಿಸಿದ್ದೆ ಕೂಡಾ...."
"ಆಮೇಲೆ ಏನು ವೇಗವಾಗಿ ಹೋಗ್ಲಿಕ್ಕೆ ದೈರ್ಯ ಬಂದಿಲ್ವ..?" - ಅಪರಿಚಿತನ ಮಾತಿನ ಮದ್ಯೆ ಚಾಲಕ ಪ್ರಶ್ನೆ ಹಾಕಿದ.
"......... ಬದುಕಿದ್ರೆ ಇರ್ತಿತ್ತೇನೋ..!!!!" - ಅಪರಿಚಿತ ಉದ್ಗರಿಸಿದ.
"..ಆ...ಆ........................
ಏನೋ ಹೇಳಲು ಹೊರಟು, ಅಪರಿಚಿತನ ಮಾತಿನ ಅರ್ಥ ತಿಳಿದು ಕಳವಳಗೊಂಡು, ಚಾಲಕ ಒಮ್ಮೆ ತಿರುಗಿದ, ಅಲ್ಲಿ ಯಾರೂ ಇರಲಿಲ್ಲ!!.. ಮೈ-ಕೈ
ನಡುಗತೊಡಗಿತು, ಜೊತೆಗೆ ಬೈಕ್ ಕೂಡ, ಆ ಕ್ಷಣಕ್ಕೆ ಎದುರಿಗೆ ಬಂದ ಜೀಪನ್ನು ಆತ ನೋಡಿರಲೇ ಇಲ್ಲ..!
~~~
ಅಬ್ದುಲ್ ರಶೀದ್ ಸುಳ್ಯ
Comments
ಉ: Accident Zone - ಆಕಸ್ಮಿಕ ವಲಯ
In reply to ಉ: Accident Zone - ಆಕಸ್ಮಿಕ ವಲಯ by hpn
ಉ: Accident Zone - ಆಕಸ್ಮಿಕ ವಲಯ
ಉ: Accident Zone - ಆಕಸ್ಮಿಕ ವಲಯ
In reply to ಉ: Accident Zone - ಆಕಸ್ಮಿಕ ವಲಯ by savithasr
ಉ: Accident Zone - ಆಕಸ್ಮಿಕ ವಲಯ
ಉ: Accident Zone - ಆಕಸ್ಮಿಕ ವಲಯ
In reply to ಉ: Accident Zone - ಆಕಸ್ಮಿಕ ವಲಯ by basavarajKM
ಉ: Accident Zone - ಆಕಸ್ಮಿಕ ವಲಯ
ಉ: Accident Zone - ಆಕಸ್ಮಿಕ ವಲಯ
In reply to ಉ: Accident Zone - ಆಕಸ್ಮಿಕ ವಲಯ by roopablrao
ಉ: Accident Zone - ಆಕಸ್ಮಿಕ ವಲಯ