ಕನ್ನಡದ ಪದಗಳನ್ನೊಂದಿಷ್ಟು ಕುಱಿತು

ಕನ್ನಡದ ಪದಗಳನ್ನೊಂದಿಷ್ಟು ಕುಱಿತು

Comments

ಬರಹ

ಕನ್ನಡದ ಈ ಪದಗಳನ್ನು ಗಮನಿಸಿ
ನನೆ,ನೆನೆ
ನನೆ=ಒದ್ದೆಯಾಗು ನಾನು ಮೞೆಯಲ್ಲಿ ನನೆದೆನು (ನೆನೆ ಅಲ್ಲ).
ದೋಸೆಗೆ ಅಕ್ಕಿ ನನೆ ಹಾಕು. (ಹೋಲಿಕೆ: ತಮಿೞಿನ ನನೈ)
ನೆನೆ=ನಾನು ನಿನ್ನನ್ನು ನೆನೆದಾಗಲೇ ನೀನು ಬಂದೆ. (ತಮಿೞಿನ ನಿನೈ)
ಪಕ್ಕಿ ಬಾನೊಳ್ ಪಾಱುತ್ತಾ ಪೋಗುಂ.
ತಾಯ್ ಮಗನ ಬರವಂ ಪಾರುತ್ತಾ ನಿಲ್ವಳ್.
ಪಾಱು=ಹಕ್ಕಿಯಂತೆ ಬಾನಲ್ಲಿ ಹಾಱು.
ಪಾರು= ನಿರೀಕ್ಷಿಸು, ಎದುರು ನೋಡು (ಪ್ರಾಯಶಃ ಹೊಸಗನ್ನಡದಲ್ಲಿ ಹಾರು ಎಂದು ಹೇೞಬಹುದು)
ಪಱಮೆ=ದುಂಬಿ (ಕನ್ನಡದಲ್ಲಿ)
ಪಱವೈ=ಹಕ್ಕಿ (ತಮಿೞಿನಲ್ಲಿ) ಆದರೆ ಇವೆರಡಱ ಒಂದೇ ಲಕ್ಷಣ ಹಾಱುವುದು. ದುಂಬಿಯೂ ಹಾಱುವುದು. ಹಕ್ಕಿಯೂ ಹಾಱುವುದು

ಬಳೆ=ಅಭಿವೃದ್ಧಿ ಹೊಂದು, ಏೞ್ಗೆವಡೆ. ನಾವು ಜೀವನದಲ್ಲಿ ಬೆಳೆಯೋಣ (ತಮಿೞಿನ ವಳಮುಡನ್)
ಬೆಳೆ=ಸಸ್ಯ ಬೆಳೆಯುತ್ತದೆ (ತಮಿೞಿನ ವಿಳೈ)

ಈ ಶಬ್ದ್ಗಗಳಲ್ಲಿ ಕೆಲವನ್ನು ಕನ್ನಡಿಗರು ಬಳಕೆಯಲ್ಲಿ ಬಿಟ್ಟಿದ್ದಾರೆ ಉದಾಹರಣೆ(ಪಾರು=ನಿರೀಕ್ಷಿಸು) ಹಾಗೆ ಎರಡೂ ಕ್ರಿಯೆಗಳಿಗೂ ಒಂದೇ ಪದವನ್ನು ಬಳಸುತ್ತಾರೆ. ಉದಾಹರಣೆ(ನನೆ=ನೆನೆ, ಬೆಳೆ=ಬಳೆ)
ಈ ಮಾಹಿತಿ ಉಪಯುಕ್ತವೆಂದು ಇಲ್ಲಿ ತಿಳಿಸಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet