ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್

"ಇಂಗ್ಲೀಶ್ ಮೀಡಿಯಮ್‌ನಲ್ಲಿ ಓದಿದ್ರೆ ಮಕ್ಕಳು ತುಂಬಾ ಬುದ್ದಿವಂತರಾಗ್ತಾರೆ"

"ಸಂಸ್ಕೃತ ತಗೊಂಡ್ರೆ ಹೈ ಸ್ಕೋರ್‍ ಮಾಡಬಹುದು, ಕನ್ನಡಕ್ಕೆ ಮಾರ್ಕೇ ಹಾಕಲ್ಲ"

ಇದು ಈಗಿನ ಅಲ್ಲ ಯಾವಾಗಿನಿಂದಲೋ ಬರುತ್ತಿರುವ ಕೂಗು. ನಾನು ಚಿಕ್ಕವಳಿದ್ದಾಗಲಿಂದಲೂ ಇದೇ ಕೂಗು

ನಾನು ಏಳನೇ ಕ್ಲಾಸ್ ಮುಗಿಸಿ ಎಂಟನೇ ತರಗತಿಗೆ ಸರ್ಕಾರಿ ಸ್ಕೂಲ್ ಒಂದಕ್ಕೆ ಸೇರಬೇಕಿತ್ತು
ನನ್ನ ಮಾತು ನನ್ನ ಮಾರ್ಕ್ಸು ನೋಡಿ ನಮ್ಮ ಹೆಡ್ ಮಾಸ್ಟರ್ "ನಿಮ್ಮ ಮಗಳನ್ನ ಇಂಗ್ಲೀಷ್ ಮೀಡಿಯಮ್‌ಗೆ ಸೇರಿಸಿ ಚೆನ್ನಾಗಿ ಓದ್ತಾಳೆ . ಮುಂದೆ ಒಳ್ಳೆ ಭವಿಷ್ಯ ಇದೆ " ಅಂದಿದ್ದರು.
ಅಮ್ಮಾನೂ ಹಾಗೆ ಹೇಳಿದರು.
ಆದರೆ ನಾನು ಒಪ್ಪಲಿಲ್ಲ
ನಂಗೆ ಗೊತ್ತಿತ್ತು ನಾನು ಓದಿದ್ದು ಕನ್ನಡ ಮೀಡಿಯಮ್‌‍ನಲ್ಲಿ ಹಾಗಾಗಿ ಇಂಗ್ಲೀಷ ಸ್ವಲ್ಪ ಕಷ್ಟ ಅಂತ. ಜೊತೆಗೆ ಕನ್ನಡದಲ್ಲಿ ಓದಿದರೆ ಅರ್ಥವಾಗೋ ಎಷ್ಟೋ ವಿಷಯಗಳು ಇಂಗ್ಲೀಷನಲ್ಲಿ ಸರಿಯಾಗಿ ತಿಳಿಯುತ್ತಿರಲಿಲ್ಲ. ಹಠ ಮಾಡಿ ಕನ್ನಡ ಮೀಡಿಯಮ್ ಸೇರಿದೆ.
ಹಾಗೇನೆ ಕ್ಲಾಸ್‌ಗೆ ಮೊದಲೂ ಬರುತ್ತಿದ್ದೆ
ಆದರೆ ಈ ಕನ್ನಡ ಮೀಡಿಯಮ್‌ನಲ್ಲಿ ಓದಿದ್ದಕ್ಕೆ ನಾನು ಕೊಡಬೇಕಾಗಿ ಬಂದ ಬೆಲೆ ನಾನು ಹತ್ತನೇ ತರಗತಿಗೆ ಬಂದಾಗಿನಿಂದ ತಿಳಿಯಿತು.
೧)
ಸ್ಕೂಲ್ ಎಲೆಕ್ಷನ್‌ನಲ್ಲಿ ಪ್ರೆಸಿಡೆಂಟ್ ಆಗಿ ನಾನೆ ಆರಿಸಿ ಬಂದರೂ . ಕೇವಲ ಇಂಗ್ಲೀಷ ಸರಿಯಾಗಿ ಮಾತನಾಡಲು ಬರುವುದಿಲ್ಲ ಹಾಗೂ ಸ್ಕೂಲ್ ರೆಪ್ರೆಸೆಂಟ್ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ನನ್ನನ್ನು ವೈಸ್ ಪ್ರೆಸಿಡೆಂಟ ಮಾಡಿ ನನಗಿಂತ ಎರೆಡನೆಯವಳಾಗಿ ಆರಿಸಿ ಬಂದಿದ್ದ ಇಂಗ್ಲೀಷ್ ಮೀಡಿಯಮ್ ನಲ್ಲಿ ಓದುತಿದ್ದ ಇನ್ನೊಬ್ಬಳನ್ನು ಪ್ರೆಸಿಡೆಂಟ್ ಮಾಡಿದಾಗ.

೨) ಹತ್ತನೇ ತರಗತಿಯಲ್ಲಿ ಒಳ್ಳೆ ಮಾರ್ಕ್ಸ್ ತೆಗೆದುಕೊಂಡು ವಿಜ್ನಾನ ವಿಷಯ ಆರಿಸಿಕೊಂಡೆ . ಅಲ್ಲಿದ್ದ ಎಷ್ಟೊಂದು ಪದಗಳು ಅರ್ಥವಾಗದೆ ಕಣ್ಣು ಕಣ್ಣು ಬಿಟ್ಟು ಅತ್ತಾಗ.

೩) ಪಿ ಯು ಸಿ ಯಲ್ಲಿ ವಿಷಯಗಳನ್ನೆಲ್ಲಾ ಚೆನ್ನಾಗಿ ತಿಳಿದ್ದಿದ್ದರೂ ಅದನ್ನು ಪೇಪರ್ ಮೇಲೆ ಮೂಡಿಸಲು ಸಾಧ್ಯವಾಗದೆ ಹೋಗಿ ಕಡಿಮೆ ಅಂಕ ತೆಗೆದುಕೊಂಡಾಗ.

ಹೀಗೆ ಹತ್ತು ಹಲವು ಕಡೆ ಇಂಗ್ಲೀಶ್‌ ಇಲ್ಲದೆ ನೊಂದಾಗ ನನಗೆ ಅನ್ನಿಸಿದ್ದುದ್ದು . ನಾನು ಇಂಗ್ಲೀಷ್ ಮೀಡಿಯಮ್‍ನಲ್ಲಿ ಓದಿದ್ದರೆ ಚೆನ್ನಾಗಿರುತ್ತಿತ್ತು

ಈಗ ಪರವಾಗಿಲ್ಲ ವೃತ್ತಿ ಬದುಕಿನ ಒಂದೆಡೆ ನಿಂತಾಗ ನಾನು ಹೇಳುತ್ತೇನೆ." ಕನ್ನಡ ಮೀಡಿಯಮ್‌ನಲ್ಲಿ ಓದಿದರೆ ಏನೂ ಆಗಲ್ಲ ಈಗ ನಾವೆಲ್ಲಾ ಇಲ್ಲವಾ. ಇಂಗ್ಲೀಶ್ ಮೀಡಿಯಮ್‍ನಲ್ಲಿ ಓದಿದವರಿಗಿಂತ ಒಂದು ಪಟ್ಟು ಮೇಲೆ ಸಂಪಾದಿಸ್ತೀವೆ"

ಆದರೆ ಆಗೆಲ್ಲಾ ನಾನು ಅನುಭವಿಸಿದ ನೋವು ............... ಆ ವಯಸ್ಸಿನಲ್ಲಿ ಆದ ಆಘಾತ........................ ಅದಕ್ಕೆ ಬೆಲೆ ಉಂಟೇ

ಇದೆಲ್ಲಾ ಗಮನಿಸಿದಾಗ

ಮಕ್ಕಳನ್ನು ಇಂಗ್ಲೀಷ್ ಮೀಡಿಯಮ್‍ನಲ್ಲೇ ಓದಿಸುವುದು ಮೇಲು. ನಾವೆಲ್ಲಾ ಓದುತ್ತಿದ್ದಾಗ ಇದ್ದ ಸ್ಪರ್ಧೆಗೂ ಈಗಿನ ಸ್ಪರ್ದೆಗೂ ಅಜಗಜಾಂತರವಿದೆ. ಈಗಿನ ಮಕ್ಕಳಿಗೆ ನಮಗಿದ್ದ ತಾಳ್ಮೆ ಇಲ್ಲ . ಜೀವನದಲ್ಲಿ ಒಂದು ಚಿಕ್ಕ ಸೋಲೂ ಸಹ ಅವರನ್ನು ಹಣ್ಣಾಗಿಸುತ್ತದೆ. ಅದಕ್ಕೆ ನಾವೇಕೆ ಆಸ್ಪದ ಮಾಡಿಕೊಡಬೇಕು?.

ಆದರೆ ಈ ಸಂಸ್ಕೃತ ಮೊದಲ ಭಾಷೆಯನ್ನಾಗಿ ತೆಗೆದುಕೊಳ್ಳುವುದು ಕೇವಲ ಅಂಕಗಳ ಆಸೆಗೆ.

ಕನ್ನಡ ಭಾಷೆಗೂ ಮೌಲ್ಯಮಾಪನ ಸ್ವಲ್ಪ ಸಡಿಲವಾಗಿದ್ದರೆ ಖಂಡಿತಾ ಕನ್ನಡವನ್ನೇ ಪ್ರಥಮ ಭಾಷೆಯಾಗಿ ತೆಗೆದುಕೊಳ್ಳುತ್ತಾರೆ
ಹಾಗಾಗಿಯಾದರೂ ಕನ್ನಡ ಕಲಿಯುತ್ತಾರೆ

ನಾನು ಈಗ ಕನ್ನಡಿಗಳಾಗಿ ನನ್ನ ಮಗಳಿಗೆ ಮನೆಯಲ್ಲಿ ಕನ್ನಡದಲ್ಲೇ ಮಾತಾಡಿಸುತ್ತೇನೆ

ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಜೊತೆಗೆ ತಾರೆಗಳ ತೋಟದಿಂದ ಚಂದಿರ ಬಂದ

ಪುಸ್ಸಿ ಕ್ಯಾಟ್ ಪುಸ್ಸಿ ಕ್ಯಾಟ್ ಜೊತೆಗೆ ಬೆಕ್ಕೇ ಬೆಕ್ಕೆ ಮುದ್ದಿನ ಸೊಕ್ಕೆ

ಜಾಕ್ ಅಂಡ್ ಜಿಲ್ ಜೊತೆಗೆ ಬಣ್ಣದ ತಗಡಿನ ತುತ್ತೂರಿ

ಪದ್ಯಗಳನ್ನೂ ಹೇಳಿಕೊಡುತ್ತೇನೆ

ABCD ಜೊತೆಗೆ ಅ ಆ ಬರೆಯಲೂ ಕಲಿಸುತ್ತಿದ್ದೇನೆ

ಇದು ಕನ್ನಡಿಗಳಾಗಿ ನನ್ನ ಕರ್ತವ್ಯ

ಆದರೆ ಕಳಿಸುವುದು ಇಂಗ್ಲೀಷ್ ಮೀಡಿಯಮ್‌ಗೆ ಅದೂ ICSE ಸಿಲಬಸ್ ಇರುವ ಸ್ಕೂಲ್‌‌‍ಗೆ. ಏಕೆಂದರೆ ನಾನು ಒಬ್ಬ ತಾಯಿಯಾಗಿ ನನ್ನ ಮಗಳ ಭವಿಶ್ಯದ ಕಡೆಗೆ ಯೋಚಿಸುವುದು ಮಾತೃ ಧರ್ಮ.

ಎಲ್ಲಾ ತಾಯಂದಿರೂ ಕನ್ನಡದ ಗಂಧವನ್ನು ಸ್ವಲ್ಪ ತೇದರೆ ಸಾಕು ಮಕ್ಕಳು ವಿದೇಶದಲ್ಲಿ ಇದ್ದರೂ ಅದರ ಗಂಧವನ್ನು ತಮ್ಮಲ್ಲಿ ಪಸರಿಸಿಕೊಂಡು ಎಲ್ಲೆಡೆ ಹರಡುತ್ತಾರೆ

ಸುಮ್ಮನೆ ಮಕ್ಕಳನ್ನು ಕನ್ನಡ ಮೀಡಿಯಮ್‌ಗೆ ಕಳಿಸಿದರೆ ತೊಂದರೆಯಾಗುವುದು ಕನ್ನಡ ಮಾಧ್ಯಮದಲ್ಲೇ ಪಾಥಮಿಕ ಶಿಕ್ಶ್ಗಣ ಇರಲಿ ಎಂದು ಬೊಬ್ಬೆ ಹೊಡೆಯುವವರಿಗಲ್ಲ ಆ ಮಕ್ಕಳಿಗೆ.

ಹಾಗೆ ಬೊಬ್ಬೆ ಹೊಡೆದವರ ಮಕ್ಕಳೂ ಇಂಗ್ಲೀಷ್ ಮೀಡಿಯಮ್‍ನಲ್ಲೇ ಓದುತ್ತಿರುವುದು ಎಂಬುದು ಮರೆಯಬಾರದು

Rating
No votes yet

Comments