ವಿಕದಿಂದ ಭೈರಪ್ಪ ಮತ್ತು ಅನಂತಮೂರ್ತಿ ಪಟಾಲಂಗೆ ಅಧ್ಬುತ ಅವಕಾಶ..ಡೆಡ್ ಲೈನ್: ಇವತ್ತು ಸಂಜಿ ೬ ರವಳಗ..

ವಿಕದಿಂದ ಭೈರಪ್ಪ ಮತ್ತು ಅನಂತಮೂರ್ತಿ ಪಟಾಲಂಗೆ ಅಧ್ಬುತ ಅವಕಾಶ..ಡೆಡ್ ಲೈನ್: ಇವತ್ತು ಸಂಜಿ ೬ ರವಳಗ..

ಎಲ್ಲರಿಗೂ ಈಗ ನಡಿಲಿಕತ್ತಿರೂ ಅನಂತಮೂರ್ತಿ ಮತ್ತು ಭೈರಪ್ಪ ವಾದ-ವಿವಾದ ಗೊತ್ತಿದೆ ಅನಕೊತಿನಿ. ಅಂಧ್ಹಂಗ ಇವತ್ತು ವಿಜಯ ಕರ್ನಾಟಕ ಈ ವಿಷಯದ ಬಗ್ಗೆ, ಅಂದ್ರ ಅನಂತಮೂರ್ತಿಯವರ ಅದ್ಭುತ ಕಾಮೆಂಟ್ ಬಗ್ಗೆ ಓದುಗರ ಅಭಿಪ್ರಾಯವನ್ನ ಕೇಳ್ಯೇದ..ಇಲ್ಲಿ ಜಗಳ್ಯಾಡಿ..ಗುದ್ಯಾಡೂ ಬದ್ಲಿ..ಸ್ವಲ್ಪ ವಿಕದಂತಹ ದೊಡ್ಡ ಗ್ರೌಂಡಿಗೆ..ಶಿಫ್ಟ್ ಅಗೂಣ...ಅದಕ್ಕ ಇವತ್ತ ಸಂಜಿ ಆರರೊಳಗ ನಿಮ್ಮ ನಿಮ್ಮ (ನಿಮ್ಮದೆ ಇರ್ಲಿ ಮತ್ತ..) ಅಭಿಪ್ರಾಯ ಕೆಳಕಂಡ ರೀತಿ ಕಳಸಬಹುದು..
1. SMS : "VKPOLL " to 8888
2. email : feedback@vijaykarnataka.com
3. Fax : 080-26250233

ನೋಡೂಣ..ಅನಂತಮೂರ್ತಿ ಮತ್ತು ಭೈರಪ್ಪ ..ಜುಗಲಬಂದಿವೊಳಗ ಯಾರ ಓದುಗರು..ಛೆಂದ ಬರಿತಾರ ಅಂತ ;-)
ಮಹಾಜನಗಳೇ..ಇವತ್ತು ಮರೆಯದಿರಿ ಮತ್ತು ಮರೆತು ಮರುಗದಿರಿ!

ಮರೆತ ಮಾತು : ಭೈರಪ್ಪನವರ ಕಾದಂಬರಿ ಮಾರಾಟ ಮತ್ತ ಆ ರೀತಿ ಯೋಚಿಸುವವರ ಜನಪ್ರಿಯತೆ ಕಂಡು ಅನಂತಮೂರ್ತಿ ’ದಿಗಿಲು’ಗೊಂಡರೆ, ನಂಗೂ ಸೈತ ಅನಂತಮೂರ್ತಿಯವರ ಅದ್ಭುತ ಕಾಮೆಂಟ್ ಗಳ ಜನಪ್ರಿಯತೆ ಕಂಡು ’ದಿಗಿಲಾಗುತ್ತದೆ’ ! ನಿಜಕ್ಕೂ..ದಿಗಿಲುಗೊಳ್ಳುವ ವಿಷಯಗಳೇ ಅವ ನಮ್ಮ ಸುತ್ತಮುತ್ತೆಲ್ಲಾ..! ;-)

Rating
No votes yet

Comments