ಕನ್ನಡದ ನುಡಿದಾಟಿ ಎಂತದು?

ಕನ್ನಡದ ನುಡಿದಾಟಿ ಎಂತದು?

ಯಾವುದೇ ನುಡಿಗೆ ಒಂದು ದಾಟಿ ಇರುತ್ತದೆ. ಹಾಗೆಯೇ ಕನ್ನಡಕ್ಕೂ ಒಂದು ದಾಟಿ ಇದೆ. ಅಂದರೆ ಕನ್ನಡದ ಪದಗಳು ಹೇಗಿವೆ ಅಂದರೆ ಒಂದು ಪದವು ಇನ್ನೊಂದು ಕನ್ನಡದ್ದೇ ಪದದೊಂದಿಗೆ ಅಗದಿ ಆರಾಮಾಗಿ ಕೂಡಿಕೊಳ್ಳುತ್ತದೆ. ಕನ್ನಡದ ಹಲವಾರು ಹಾಡುಗಳನ್ನು ತೆಗೆದುಕೊಂಡರೆ,.. ನಾವು ಇಂದು ಮಾತಿನಲ್ಲಿ ಬಳಸದೇ ಇರದಂತ ಎನಿತೋ ಪದಗಳು ಕಾಣುತ್ತವೆ. ಮಾದರಿಗೆ,

ನೂರಾರು ಸಾವಿರ ಓಲೆ - ಗುಬ್ಬಚ್ಚಿ ಗೂಡಿನಲ್ಲಿ ಹಾಡು -ಬಿಂದಾಸ್ ಸಿನಿಮಾದಿಂದ,  ನಾಡಿಯಲ್ಲಿ ನೆತ್ತರು ಹರಿಯೋದು ನಿಂತೇ ಹೋದರು- ಕೊಲ್ಲೆ ಹಾಡು- ಅರಮನೆ ಸಿನಿಮಾದಿಂದ, ಸೋಕುತಿರಲು ಬಿಸಿ ಬಿಸಿ ಒಡಲು - ಬಾ ಚೋರಿ ನೀ ಮುದ್ದಾಟಕೆ ಹಾಡು - ಬೆಳದಿಂಗಳಾಗಿ ಬಾ ಸಿನಿಮಾದಿಂದ. ಆ ಹಾಡನ್ನುಇಲ್ಲಿ ಕೇಳಬಹುದು.ಈ ಮಾದರಿಗಳಲ್ಲಿ ನೋಡಿ,. ನಾವು ಓಲೆ, ನಾಡಿ, ನೆತ್ತರು, ಒಡಲು ಈ ಪದಗಳನ್ನು ಮಾತಿನಲ್ಲಿ ಬಳಸುವದನ್ನು ಬಿಟ್ಟೇ ಬಿಟ್ಟಿದಿವಿ,.. ಓಲೆಗೆ ಹಿಂದೆ ಪತ್ರ ಅಂತಿದ್ದೆವು, ಈಗ ಲೆಟ್ಟರ್ ಅಂತೀವಿ, ನಾಡಿಗೆ ರಕ್ತನಾಳ ಇಲ್ಲವೇ ಪಲ್ಸ್ ಅಂತೀವಿ, ಹಳ್ಳಿಗಳಲ್ಲಿ ನಾಡಿನೇ ಅಂತಾರೆ,. ನೆತ್ತರಿಗೆ ಹಳ್ಳಿ, ಪೇಟೆಗಳಲ್ಲೆಲ್ಲಾ ರಕ್ತಾನೇ ಅಂತಾರೆ, ಈಗಿನ ಒರೆ ಬ್ಲಡ್.., ಒಡಲಿಗೆ ಶರೀರ, ಈಗ body ಅಂತೀವಿ. ಆದರೂ ಮೇಲಿನ ಹಾಡುಗಳಲ್ಲೇಕೆ ಎಲ್ಲಿಯೂ ಸುಳಿಯದ ಒಡಲು, ನೆತ್ತರು,ಓಲೆ ಅನ್ನುವಂತ ಒರೆಗಳು ಬಂದವು? ಬೆರಗಲ್ಲವೇ??

ಹಾಡುಗಳಲ್ಲಿ ಕನ್ನಡ ಒರೆಗಳೇ ತುಂಬ ಚೆನ್ನಾಗಿ ಒಂದಕ್ಕೊಂದು ಹೊಂದಿಕೊಂಡು, ಹಾಡು ಚಂದವಾಗುತ್ತದೆ. ಹಿಂದೆ ಒಬ್ಬರು auditory imagination, ಕೇಳ್ ಒಳಕಾಣುವಿಕೆಯ ಬಗ್ಗೆ ಸಂಪದದಲ್ಲೇ ಬಲಾಗಿದ್ದರು,. ಬೇರೆ ನುಡಿಯ ಒರೆಗಳು ಈ ಕೇಳ್ಒಳಕಾಣ್ವಿಕೆಯ ಹಲಗೆಯ ಮೇಲೆ ಸರಿಯಾಗಿ ಕೂರುವದಿಲ್ಲ, fit ಆಗುವದಿಲ್ಲ.

ಒಂದೊಂದು ಭಾಷೆಯಲ್ಲೂ ಇವು ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟವಾಗಿ ಸಂಯೋಜನೆಗೊಂಡಿರುತ್ತವೆ. ಆ ಭಾಷೆ, ಆ ಭಾಷೆಯನ್ನಾಡುವ ಜನರ ವ್ಯಕ್ತಿತ್ವ, ಅವರ ಮಾತಿನ ಧಾಟಿ, ಇವೆಲ್ಲದರ ಸಮ್ಮಿಳನ ಆ ಭಾಷೆಯ ಸಂಗೀತ ಅಥವಾ ಛಂದಸ್ಸಂಗೀತ. ಭಾಷೆಯಲ್ಲಿ ಮೇಲು ನೋಟಕ್ಕೆ ಯಾವನು ಯಾವ ಶಬ್ದವನ್ನು ಹೇಗೆ ಬೇಕಾದರೂ ಉಚ್ಚರಿಸಬಹುದಾದ ಸ್ವಾತಂರ್ತ್ಯ ವಿರುವಂತೆ ಕಾಣುತ್ತದೆ. ಆದರೆ ಭಾಷೆಯಲ್ಲಿನ ಪ್ರತಿಯೊಂದು ಶಬ್ದವೂ ಒಂದು ಅರ್ಥಪೂರ್ಣ ವಾಕ್ಯದಲ್ಲಿ ತನ್ ಅಕ್ಕಪಕ್ಕದ ಶಬ್ದಗಳ ಸರಣಿಯಲ್ಲಿ ಸಂಯೋಜನೆಗೊಂಡ ನಾದ.

ಹಾಗಾಗಿ ಕನ್ನಡದಲ್ಲಿ ಕನ್ನಡದ್ದೇ ಒರೆಗಳನ್ನು ಸೇರಿಸಿ ಮಾತಾಡೋಕೆ ಹೆಚ್ಚಾಗಿ ನೋಡೂನು.. ಬೇರೆ ದಾರಿನೇ ಇಲ್ಲದಾದಾಗ,. ಬೇರೆ ನುಡಿಯ ಒರೆಯನ್ನು ಸೇರಿಸಿದರೆ ತಪ್ಪಿಲ್ಲ.,. ಆದರೆ ನಮ್ಮ ನುಡಿದಾಟಿಗೆ ಹೊಂದುವಂತೆ ಆ ಒರೆಯನ್ನು ಬಗ್ಗಿಸಿ, ಸೇರಿಸಲು ನೋಡುನು. ಹೌದಲ್ಲರೀ?

 

Rating
No votes yet

Comments