ಪೊನ್

ಪೊನ್

Comments

ಬರಹ

ಪೊನ್ (ನಾಮಪದ) [ತಮಿಳು, ಮಲಯಾಳ: ಪೊನ್, ತುಳು: ಪೊನ್ನು, ಕೊಡವ: ಪೊನ್, ತೆಲುಗು: ಪೊನ್ನು, ಹೊನ್ನು, ಹೊಂ]

೧. ಕಬ್ಬಿಣ, ತಾಮ್ರ, ಚಿನ್ನ ಮುಂತಾದ ಖನಿಜ; ಲೋಹ ೨. ಬಂಗಾರ; ಚಿನ್ನ; ಸ್ವರ್ಣ ೩. (ಹಿಂದೆ ಚಲಾವಣೆಯಲ್ಲಿದ್ದ) ಹತ್ತು ಹಣ ಬೆಲೆಯುಳ್ಳ ಒಂದು ಚಿನ್ನದ ನಾಣ್ಯ; ಗದ್ಯಾಣ ೪. ಸಂಪತ್ತು; ಐಶ್ವರ್ಯ; ನಿಧಿ ೫. ಹಣ; ಧನ; ದುಡ್ಡು ೬. (ಚಿನ್ನದ) ಒಡವೆ, ಆಭರಣ ೭. ಶ್ರೇಷ್ಠವಾದುದು; ಅತ್ಯುತ್ತಮವಾದುದು ೮. ಪ್ರೀತಿಪಾತ್ರರನ್ನು ಮುದ್ದಿನಿಂದ ಕರೆಯುವ ಮಾತು

(ಪೊನ್ನ ಪೂ=ಚಿನ್ನದ ಹೂ; ಪೊನ್ನಬೆಟ್ಟು=ಚಿನ್ನದ ಪರ್ವತ; ಪೊನ್ನಮೞೆ=ಚಿನ್ನದ ಮಳೆ; ಪೊನ್ನಮೈಯವನು=ಬ್ರಹ್ಮ; ಪೊನ್ನರ್ಧ=ಗದ್ಯಾಣದ ಅರ್ಧಭಾಗ; ಪೊನ್ನವಣ=ಚಿನ್ನದ ಒಂದು ಬಗೆಯ ನಾಣ್ಯ; ಪೊನ್ನುಳ್ಳವಂ=ಧನಿಕ; ಹೊನ್ನಕನಸು=ಹೊಂಗನಸು; ಹೊನ್ನುತಾ ಗುಬ್ಬಿಯಾಟ=ಕೈಯ ಬೆರಳುಗಳನ್ನು ಮುಚ್ಚಿ, ಬಿಡುವ ಆಟ; ಹೊನ್ನದಾರ=ಚಿನ್ನದ ಒಡ್ಯಾಣ; ಹೊನ್ನಹುಳು=ಮಿಂಚುಹುಳು; ಪೊನ್ನಂಡೆ=ಚಿನ್ನದ ಜೀರ್ಕೊಳವೆ, ಬಂಗಾರದ ಪಿಚಕಾರಿ; ಪೊನ್ನಂದಳ=ಚಿನ್ನದ ಪಲ್ಲಕ್ಕಿ; ಪೊನ್ನಂದುಗೆ=ಚಿನ್ನದ ಕಾಲುಕಡಗ; ಪೊನ್ನಂಬು=ಚಿನ್ನದ ಬಾಣ; ಪೊನ್ನಲರ್‍=ಬಂಗಾರದ ಹೂ; ಪೊನ್ನಾಣ್ಮ=ಕುಬೇರ; ಪೊನ್ನಾಯ=ಒಂದು ಬಗೆಯ ತೆರಿಗೆ; ಪೊನ್ನಾಯುಗ=ಕತ್ತಿಯ ಚಿನ್ನದ ಹಿಡಿಕೆ; ಪೊನ್ನಾಯೋಗ=ಆಭರಣ; ಪೊನ್ನಾಳ್=ಶ್ರೇಷ್ಠನಾದ ಯೋಧ; ಪೊನ್ನೀರ್‍=೧.ಹೊಂಬಣ್ಣದ ಕಾಂತಿ ೨.ಹೊಂಬಣ್ಣದ ನೀರು; ಪೊನ್ನುಗ=ಅಕ್ಕಸಾಲಿಗ; ಪೊನ್ನುಡೆ=ಜರತಾರಿ ವಸ್ತ್ರ; ಪೊನ್ನುಯ್ಯಲ್=ಚಿನ್ನದ ಜೋಕಾಲಿ; ಪೊನ್ನೊರೆ=ಚಿನ್ನದ ಮೆರುಗು; ಪೊನ್ನೊಱೆ=ಕತ್ತಿಯನ್ನಿಡುವ ಚಿನ್ನದ ಕೋಶ; ಪೊನ್ನೋಲೆ=ಚಿನ್ನದ ಓಲೆ; ಪೊನ್ಮುಡಿ=ಚಿನ್ನದ ಕಿರೀಟ; ಪೊನ್ಮೋದಿರ=ಚಿನ್ನದುಂಗುರ)

(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet