ಕೊಡುವ ಕಾಣಿಕೆ
ರವಿಯ ಕಿರಣ ಸೋಲುತಿದೆ
ಪೂರ್ಣ ಚಂದ್ರ ಕರಗುತಿದೆ
ಸ್ಥಬ್ಧ ನಿತ್ಯ ಹಸಿರು ವನ
ಸುಪ್ತ ಸೋನೆ ಮಳೆಯ ಜನನ
ಹರಿಯುವ ನದಿ ಮಾಯವಾಗಿ
ಬೀಸುವ ತಂಗಾಳಿ ಬಿಸಿಯಾಗಿ
ಕಲ್ಲಾಗಿ ಕೊರೆವ ಕುಡಿವ ಜಲ
ದಿಗ್ಗನೆ ಬಾಯ್ತೆರೆದು ಕುಸಿದ ನೆಲ
ಆದಿ ಅಂತ್ಯ ಯಾವುದಿಲ್ಲಿ
ಸಕಲ ಶೂನ್ಯವೆಲ್ಲ ಇಲ್ಲಿ
ನಶ್ವರವಾಗುತಿರಲು ಬದುಕು
ಬೆಳಗಳಿದೆಯೇ ಬಾಳ ಬೆಳಕು
ಹಸಿರು ಅಳಿಸಿ ಹಸಿವು ಬೆಳೆಸಿ
ರಸ ರಹಿತ ಜಗವ ಉಳಿಸಿ
ಇದುವೆ ನಾವು ಕೊಡುವ ಕಾಣಿಕೆ
ಮುಂದೆ ಜನ್ಮ ಪಡೆವ ಕೂಸಿಗೆ
( ವಕ್ರ ವ್ಯಾಕರಣಗಳ ತಿಳಿಸಿ ಸಹಕರಿಸುವವರಿಗೆ ನನ್ನಿ. )
Rating
Comments
ಉ: ಕೊಡುವ ಕಾಣಿಕೆ