ಕುಮಾರವ್ಯಾಸ ಭಾರತ

ಕುಮಾರವ್ಯಾಸ ಭಾರತ

ಕುಮಾರವ್ಯಾಸ ಭಾರತ ಒಂದು ಸಮಗ್ರ ಕನ್ನಡ ಪುರಾಣ ಕಾವ್ಯ. ಇದರಲ್ಲಿ ಎಲ್ಲ ಸಂದರ್ಭಗಳನ್ನು ರಸವತ್ತಾಗಿ ವರ್ಣಿಸಿ ಪ್ರತಿಯೊಂದು ಘಟನಾವಳಿಗಳ ಹಿನ್ನೆಲೆ ಯನ್ನು ಅದರ ಕಾರಣ ಸಮೇತ ವರ್ಣಿಸಿದ್ದಾನೆ ಕವಿ. ಆದರೂ ಕರ್ನಾಟಕದಲ್ಲಿ ಕುಮಾರವ್ಯಾಸ ಭಾರತ ಕೇವಲ ಗಮಕವಾಚನಕಾರರಿಗೆ ಮಾತ್ರ ಸೀಮಿತವಾಗಿದೆಯೇನೋ ಅನ್ನಿಸುತ್ತದೆ. ಅಲ್ಲೊಬ್ಬರು ಇಲ್ಲೊಬ್ಬರು (ಶತಾವಧಾನಿ ಗಣೇಶ್, ಪಾವಗಡ ಪ್ರಕಾಶರಾವ್) ಹೆಚ್ಚು ಕನ್ನಡ ಪಾಂಡಿತ್ಯವಿದ್ದವರು ಬಿಟ್ಟರೆ ಇತರ ವಿಧ್ವತ್ ಜನರ ನಡುವೆ ಇದು ಅಷ್ಟೊಂದು ಪ್ರಚಾರ ಪಡೆದುಕೊಂಡಿಲ್ಲ. ಪ್ರೊ.ಕೆ.ಎಸ್.ನಾರಾಯಣಾಚಾರ್ಯರು ಬರೆದಿರುವ ’ಆ ಹದಿನೆಂಟು ದಿನಗಳು’ ಸಹ ಮಹಾಭಾರತವನ್ನಾದರಿಸಿದ ಕೃತಿ. ಇದು ಹಿಂದೆ ತರಂಗದಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು.
ಕನ್ನಡದಲ್ಲಿ ಮಹಾಭಾರತವನ್ನಾದರಿಸಿ ಬರೆದ ಮಹತ್ತಾದ ಕೃತಿಗಳು ಇನ್ಯಾವುವು?

Rating
No votes yet

Comments