ಜನಪದ ಲೆಕ್ಕ
ಜಾಣ್ಮೆ ಲೆಕ್ಕ
ಇಬ್ರ ಅಣ್ಣ ತಮ್ಮ. ಇಬ್ರ ಹತ್ರು ತಲಾ ಮೂವತ್ತ ಲಿಂಬಿಹಣ್ಣ. ಅಣ್ಣ ರೂಪಾಯ್ಕ ಎರಡು ಮಾರಾಟಕ್ಕ ಹಚ್ಚಿದ. ತಮ್ಮ ರೂಪಾಯ್ಕ ಮೂರು ಹಚ್ಚಿದ. ಇಬ್ರು ಒಂದ ಕಡೆ ಕೂತು ಮಾರತಿದ್ದರು. ಅಣ್ಣಂಗೇನೋ ತುರ್ತು ಕೆಲಸ ಬಂತು. ತಮ್ಮಗ
ಹೇಳಿ ಹೋದ. ತಮ್ಮ ಎರಡೂ ಸೇರಿಸಿ ಎರಡ ರೂಪಾಯ್ಕ ಐದರಂಗ ಮಾರಿದ. ಒಟ್ಟು ಇಪ್ಪತ್ನಾಲ್ಕು ರೂಪಾಯ್ ಬಂದ್ವು.
ಅಣ್ಣಗ ಹದಿನೈದು ಕೊಟ್ಟ. ತಮ್ಮಗ ಒಂಬತ್ತ ಉಳಿದವು. ಖರೆ ಅಂದ್ರ ತಮ್ಮಗ ಹತ್ತು ರೂ. ಬರಬೇಕಿತ್ತು. ಇನ್ನೊಂದು ರೂಪಾಯ್ ಎಲ್ಲಿ ಹೋಯ್ತು ! ರೂಪಾಯ್ಕ ಎರಡರಂಗ/ಮೂರಂಗ ಮಾರಿದ್ರೂ ಒಂದ. ಎರಡು ರೂಪಾಯ್ಕ ಐದ ಮಾರಿದರೂ
ಒಂದ. ಹಿಂಗಿದ್ದೂ ಒಂದ ರೂ. ಕಡಿಮಿಯಾಕ ಬಂತು ! ಹುಡಿಕಿ ಕೊಡತೀರಿ ?
ವಿಚಿತ್ರಾನ್ನದಿಂದ ಒಂದೀಟ ಹೊರಗ ಬಂದು ತೆಲಿ ಕೆಡಸಗೋರ್ರಿ.
ನಿಮಗೆಲ್ಲಾರಿಗೂ ನಮ್ಮ ನಮಸ್ಕಾರಿ.
ಚಂದ್ರಗೌಡ ಕುಲಕರ್ಣಿ
Rating
Comments
ಉ: ಜನಪದ ಲೆಕ್ಕ
In reply to ಉ: ಜನಪದ ಲೆಕ್ಕ by keerthi2kiran
ಉ: ಜನಪದ ಲೆಕ್ಕ
ಉ: ಜನಪದ ಲೆಕ್ಕ