ಪಯಣದ ದಾರಿಯು ಬೇಸರವಾಗಿದೆ
ನಮಸ್ಕಾರ ಗೆಳೆಯ/ತಿ ಯರೆ. ಇದೊ೦ದು ನಾನು ಬರೆದ ಪುಟ್ಟ ಕವಿತೆ. ನಿಮಗೆ ಯಾವುದೆ ತರಹದ ಪ್ರೆಶ್ನೆಗಳಿದ್ದರೆ. ಡಯವಿಟ್ಟು ಪ್ರತಿಕ್ರಿಯೆ ಮಾಡಿ.
--------------------------------------
ಪಯಣದ ದಾರಿಯು ಬೇಸರವಾಗಿದೆ
--------------------------------------
ಪಯಣದ ದಾರಿಯು ಬೇಸರವಾಗಿದೆ,
ಉತ್ಸಾಹದ ಭಾವಕೆ ನೀರಸವಾಗಿದೆ,
ಎದೆಯಲ್ಲಿ ಚಿಗುರಿದ ಪ್ರೀತಿಯ ಮೊಳಕೆಯ
ಚಿವುಟಿ ನೀ ಸರಿದಾಗ ದೂರ
ಪಯಣದ ದಾರಿಯು ಬೇಸರವಾಗಿದೆ,
ಉತ್ಸಾಹದ ಭಾವಕೆ ನೀರಸವಾಗಿದೆ,
ನಿನ್ನ ನೋಡಿ ನಲಿದ ನನ್ನ ಕ೦ಗಳು ಈಗ
ಕಾಣದೆ ಕಣ್ಣೀರು ಹಾಕಿವೆ ನೋಡೆ,
ನಿನ್ನ ಮುದ್ದಿನ ಮಾತನು ಕೇಳದ ಕೀವಿಗೆ
ಸವಿಗಾನವು ಕಹಿಯನು ನೀಡಿವೆ ನೋಡೆ,
ನನ್ನ ಮನದಲ್ಲಿ ಉಕ್ಕಿದ ಬಯಕೆಗೆ ನೀನು
ಲೆಕ್ಕಿಸದೆ ನನ್ನ ನೋಡದೆ ಹೋದಾಗ.
ಪಯಣದ ದಾರಿಯು ಬೇಸರವಾಗಿದೆ,
ಉತ್ಸಾಹದ ಭಾವಕೆ ನೀರಸವಾಗಿದೆ,
- ಅನ೦ತಶಯನ ಸ೦ಜೀವ.
Comments
ಉ: ಪಯಣದ ದಾರಿಯು ಬೇಸರವಾಗಿದೆ
In reply to ಉ: ಪಯಣದ ದಾರಿಯು ಬೇಸರವಾಗಿದೆ by pallavi.dharwad
ಉ: ಪಯಣದ ದಾರಿಯು ಬೇಸರವಾಗಿದೆ