ಆಱ್ (ಆಱು)

ಆಱ್ (ಆಱು)

Comments

ಬರಹ

ಆಱ್ (ಕ್ರಿಯಾಪದವಾದಾಗ ಎರಡು ಅರ್ಥಗಳು)
೧) ಆಱ್=ಸಮರ್ಥವಾಗು. ಹೊಸಗನ್ನಡದಲ್ಲಿ ಸಾಮಾನ್ಯವಾಗಿ ನಿಷೇಧಾರ್ಥಕವಾಗಿ ಬೞಸಲಾಗುತ್ತಿದೆ. ನಾನು ಬರೆಯಲಾಱೆ(ನು). ಆದರೆ ಹೞಗನ್ನಡದಲ್ಲಿ ಎಲ್ಲಾ ಅರ್ಥಗಳಲ್ಲೂ ಬೞಕೆಯಲ್ಲಿದೆ.
ಭೂತಕಾಲದ ರೂಪ: ಆರ್ತೆನ್, ಆರ್ತನ್/ಳ್, ಆರ್ತುದು. ಇತ್ಯಾದಿ
ಭವಿಷ್ಯತ್: ಆರ್ಪೆನ್, ಆರ್ಪನ್/ಳ್, ಆರ್ಪುದು
ಭಾವನಾಮ ಆಱ್+ಪು=ಆರ್ಪು=ಶಕ್ತತೆ, ಕೆಚ್ಚು, ಕಡುಹು
೨) ಆಱ್(ಱು)= ನಂದು ದೀಪವಾಱಿಹೋಯ್ತು.
ಭೂತಕಾಲದ ರೂಪ ಆರ್ದುದು, ಆರ್ದನ್/ಳ್ ಇತ್ಯಾದಿ
ಭವಿಷ್ಯತ್: ಆರ್ವುದು, ಆರ್ವನ್/ಆರ್ವಳ್ ಇತ್ಯಾದಿ
೩) ಆಱು=ಸಂಖ್ಯಾವಾಚಿಯಾಗಿ ಸಂಖ್ಯೆ ೬ ನ್ನು ಸೂಚಿಸುತ್ತದೆ
ಅಱುವತ್ತು=ಆಱು ಹತ್ತು (೬೦) ಹಾಗೆಯೆ ಅಱುನೂಱು=ಆಱು ನೂಱು (೬೦೦), ಅಱುಸಾಸಿರ=ಆಱು ಸಾವಿರ (೬೦೦೦)
ಅಱುವರ್=ಆಱು ಜನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet