No free left turn - ನಾನು ಇಂಗ್ಲೀಷ್ ಓದಲ್ಲ

No free left turn - ನಾನು ಇಂಗ್ಲೀಷ್ ಓದಲ್ಲ

Comments

ಬರಹ

ನಾನು ರಸ್ತೆಯಲ್ಲಿ ಓಡಾಡುವಾಗ ಬಹಳ ಕಡೆಗಳಲ್ಲಿ ನೋಡುತ್ತೇನೆ. ಟ್ರಾಫಿಕ್ ಸೂಚನೆಗಳನ್ನು ಬರೀ ಇಂಗ್ಲೀಷಿನಲ್ಲಿ ಹಾಕಿರುತ್ತಾರೆ.
ನಾನು ಹೋಗುವ ದಾರಿಯಲ್ಲಿ ಒಂದು ಕಡೆ no free left turn ಎಂದು ಬರೆದಿದ್ದಾರೆ. ಅಲ್ಲಿ ಯಾವುದೇ ಬೇರೆ ಸಿಗ್ನಲ್ ದೀಪವಾಗಲೀ ಅಥವಾ ಚಿನ್ಹೆ ಆಗಲೀ ಇಲ್ಲ.

ಈಗ ನನ್ನ ಸಂಶಯ ಏನೆಂದರೆ , ನಾನು ಉದ್ದೇಶಪೂರ್ವಕವಾಗಿಯೇ ಆ ನಿಯಮವನ್ನು ಮುರಿದು ಪೋಲೀಸರ ಕೈಗೆ ಸಿಕ್ಕುತ್ತೇನೆ. ನಂತರ ಅವರು ದಂಡ ಕೇಳಿದರೆ ಅಲ್ಲಿ ಬರೆದದ್ದು ನಾನು ಓದಲಿಲ್ಲ , ಆದ್ದರಿಂದ ದಂಡವನ್ನೂ ಕಟ್ಟುವುದಿಲ್ಲ ಎನ್ನುತ್ತೇನೆ. ಕೇಸ್ ಕೋರ್ಟಿಗೆ ಹೋಗುತ್ತದೆ. ನಂತರ ವಿಚಾರಣೆಯ ಸಂದರ್ಭದಲ್ಲಿ ಇದೇ ಕಾರಣವನ್ನು ಕೊಡುತ್ತೇನೆ. ಅಂದರೆ ನನಗೆ ಇಂಗ್ಲೀಷ್ ಓದಲು ಬರೆಯಲು ಬರುತ್ತದೆ ಎಂದು ಕೋರ್ಟಿಗೆ ಗೊತ್ತಾಗುತ್ತದೆ. ಆದರೆ ನನಗೆ ಇಂಗ್ಲೀಷ್ ಓದಲು ಇಷ್ಟವಿಲ್ಲ. ಕರ್ನಾಟಕದ ಭಾಷೆ ಕನ್ನಡವಾದ್ದರಿಂದ ಟ್ರಾಫಿಕ್ ಸೂಚನೆಗಳನ್ನು ಕನ್ನಡದಲ್ಲಿ ಬರೆದಿದ್ದರೆ ಮಾತ್ರ ಓದುತ್ತೇನೆ ಎಂಬ ವಾದವು ಸರಿಯೆ? ಇದನ್ನೇ ಆಧಾರವಾಗಿಟ್ಟುಕೊಂಡು ಖುಲಾಸೆಯಾಗಲು ಸಾಧ್ಯವಿದೆಯೆ? ಒಂದು ವೇಳೆ ಯಾರೋ ನಿಜವಾಗಲೂ ಇಂಗ್ಲೀಷ್ ಬರದಿದ್ದವರು ಗೊತ್ತಾಗದೇ/ಇಂಗ್ಲೀಷ್ ಸೂಚನೆಗಳನ್ನು ಓದಲಾಗದೇ ಟ್ರಾಫಿಕ್ ನಿಯಮ ಮುರಿದರೂ ಕೂಡ ಅವರದೂ ತಪ್ಪೆ? ಎಲ್ಲ ಸೂಚನೆಗಳೂ ಕನ್ನಡದಲ್ಲಿರುವು ಅಗತ್ಯವಲ್ಲವೆ?

ಬಲ್ಲವರು ಕಾನೂನು ಸಲಹೆ ಕೊಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet