(ಮನೆ) ಅಳಿಯ! ಮನೆ ತೊಳಿಯ !!
ದಿನವಿಡೀ ಮುನಿಸು ಎಂದಿಗೂ ವಕ್ರ
ಬಯಸುವನು ಮರಿಯಾದೆಯನು ಸದಾ
ಕನ್ಯಾರಾಶಿಯಲಿ ನೆಲೆನಿಂತಿಹನೋ ಈ
(ಮನೆ*) ಅಳಿಯನೆಂಬ ಹತ್ತನೇ ಗ್ರಹ!
ಸಂಸ್ಕೃತ ಮೂಲ - ಕನ್ನಡ ಕಂದರ ಕೃಪೆಯಿಂದ
ಸದಾ ರುಷ್ಟಃ ಸದಾ ವಕ್ರಃ ಸದಾ ಪೂಜಾಮಪೇಕ್ಷತೇ
ಕನ್ಯಾರಾಶಿಸ್ಥಿತೋ ನಿತ್ಯಂ ಜಾಮಾತಾ ದಶಮೋ ಗ್ರಹಃ||
*: ಮೂಲದಲ್ಲಿ ಮನೆ ಅಳಿಯನೆಂದಿಲ್ಲ; ಬರೀ ಅಳಿಯನೆಂದಿದೆ
ಆದರೆ, ಸ್ವಸ್ಥಾನಕ್ಕೆ ಹೋಗದೆ, ’ಕನ್ಯಾ’ ರಾಶಿ :) ಯಲ್ಲೇ ನೆಲೆನಿಂತಿದ್ದಾನೆ ಎಂದು ಕವಿ ಹೇಳುವಾಗ, ಅವನು ಕಾಡುವ ಮನೆ ಅಳಿಯನೇ ಆಗಿರಬೇಕೆಂದು ನನಗೆ ತೋರಿತು!
-ಹಂಸಾನಂದಿ
Rating
Comments
ಉ: (ಮನೆ) ಅಳಿಯ! ಮನೆ ತೊಳಿಯ !!
In reply to ಉ: (ಮನೆ) ಅಳಿಯ! ಮನೆ ತೊಳಿಯ !! by ASHOKKUMAR
ಉ: (ಮನೆ) ಅಳಿಯ! ಮನೆ ತೊಳಿಯ !!