ಮನಸ್ಸಿಗೂ ಅಂಗಿ. . ?
ಮರೆತಿದ್ದೇವೆ ಬೆತ್ತಲಾಗುವುದನ್ನ...
ಹೂವಿನಂಗಿ ಗೆರೆಯಂಗಿ
ಚುಕ್ಕಿಯಂಗಿ ಚಮಕಿಯಂಗಿ
ಚಳಿ ಅಂಗಿ, ಮಳೆ ಅಂಗಿ
ಎಲ್ಲದಕ್ಕೂ ಒಂದು ಅಂಗಿ
ಮರೆತಿದ್ದೇವೆ ಬೆತ್ತಲಾಗುವುದನ್ನ...
ಬಣ್ಣದ ಬಣ್ಣದ ಅಂಗಿ
ಒಗೆದು, ಒಣಗಿಸಿ, ತಿರುಚಿ
ಹಾಕಿಕೊಳ್ಳುವ ಅಂಗಿ
ಇದಿಲ್ಲದಿದ್ದರೆ ಇನ್ನೊಂದು ಅಂಗಿ
ಮರೆತಿದ್ದೇವೆ ಬೆತ್ತಲಾಗುವುದನ್ನ...
ಹೊತ್ತೊತ್ತಿಗೊಂದು ಅಂಗಿ
ಅವರಂಗಿ ಇವರಿಗೆ
ಇವರಂಗಿ ಅವರಿಗೆ
ತೊಡಿಸುತ್ತ ತೊಡುತ್ತ
ಮರೆತಿದ್ದೇವೆ ಬೆತ್ತಲಾಗುವುದನ್ನ...
ಉಸಿರ ಪರಿಮಳವ ಕಟ್ಟಿಟ್ಟ ಅಂಗಿ
ಒತ್ತಾದ ಕಣ್ಣೀರ ಮುತ್ತಾಗಿಸಿದ ಅಂಗಿ
ನೀರ್ಮುತ್ತು ಸುರಿದು
ಕರಗಿದರೂ ಕಲ್ಲು
ಮೈಗಂಟಲೇಬೇಕು ಅಂಗಿ
ಮರೆತಿದ್ದೇವೆ ಬೆತ್ತಲಾಗುವುದನ್ನ...
-ಶ್ರೀದೇವಿ ಕಳಸದ
Rating
Comments
ಉ: ಮನಸ್ಸಿಗೂ ಅಂಗಿ. . ?
In reply to ಉ: ಮನಸ್ಸಿಗೂ ಅಂಗಿ. . ? by Chamaraj
ಉ: ಮನಸ್ಸಿಗೂ ಅಂಗಿ. . ?
ಉ: ಮನಸ್ಸಿಗೂ ಅಂಗಿ. . ?
In reply to ಉ: ಮನಸ್ಸಿಗೂ ಅಂಗಿ. . ? by anivaasi
ಉ: ಮನಸ್ಸಿಗೂ ಅಂಗಿ. . ?