ಚೀನಾದಿಂದ ಕಲಿಯಬೇಕಾದ ಪಾಠ

ಚೀನಾದಿಂದ ಕಲಿಯಬೇಕಾದ ಪಾಠ

ಸ್ನೇಹಿತರೆ,
ನಿನ್ನೆ ನಡೆದ ಒಲಂಪಿಕ್ಸ್ ನ ಉದ್ಘಾಟನಾ ಸಮಾರಂಭ ಟಿ.ವಿಯಲ್ಲಿ ನೋಡ್ತಾ ಇದ್ದೆ.. ಚೀನಿಯರ ಭಾಷಾ ಪ್ರೇಮ ನೋಡಿ ಸಕತ್ ಖುಷಿ ಆಯ್ತು.

  • ಉದ್ಘಾಟನೆ ಮಾಡಿ ಮಾತಾಡಿದ ಚೀನಾದ ಅಧ್ಯಕ್ಷ ಹೂ ಜಿಂಟಾವೋ ಚೈನಿಸ್ ಭಾಷೆಯಲ್ಲಿ ತಮ್ಮ ದೇಶದ ಬಗ್ಗೆ, ಒಲಂಪಿಕ್ಸ್ ಕನಸು ನನಸು ಆಗ್ತಿರೊ ಬಗ್ಗೆ ಮಾತಾಡಿದ್ರು, ನೆನಪಿರಲಿ ಅಲ್ಲಿ ಅಮೇರಿಕದ ಅಧ್ಯಕ್ಷ ಬುಶ್ ಇದ್ರು, ಬೇರೆ ಬೇರೆ ದೇಶದ ಗಣ್ಯರು ಇದ್ರು, ಹಾಗಂತ ಚೀನಾದ ಅಧ್ಯಕ್ಷರು ಅವರಿಗೆಲ್ಲ ಬೇಜಾರು ಆಗಬಾರದು ಅಂತಾ ಇಂಗ್ಲೀಷ್ ಅಲ್ಲೇನು ಮಾತಾಡಲಿಲ್ಲ.
  • ಉದ್ಘಾಟನಾ ಸಮಾರಂಭದಲ್ಲಿ ನಡೆದ ಬೆಳಕಿನ ಚಿತ್ತಾರದಲ್ಲಿ ಕಾಣಿಸಿದ್ದು, ಚೀನಾದ 5000 ವರ್ಷಗಳ ಭವ್ಯ ಇತಿಹಾಸ, ಸಂಸ್ಕೃತಿ ಸಾರೋ ದೃಶ್ಯಾವಳಿ, once again ಅದು ಕೂಡಾ ಅವರ ಭಾಷೆಯಲ್ಲೇ.
  • ಒಲಂಪಿಕ್ಸ್ ನ ವೆಬ್ ಸೈಟ್ ಚೈನಿಸ್ ಅಲ್ಲಿ ಕೂಡ ಇದೆ. ( http://en.beijing2008.cn/ )ಚೈನಿಸ್ ಅಲ್ಲದೇ ಇಂಗ್ಲೀಷ್, ಅರಾಬಿಕ್ ಅಲ್ಲಿ ಕೂಡಾ ಇತ್ತು. ಜಗತ್ತಿನ ಇತರ ಜನರ ಅನುಕೂಲಕ್ಕೆ ಬೇರೆ ಭಾಷೆಯಲ್ಲಿ ಮಾಡಿರೋದು ಸರಿಯಾಗಿದೆ, ಆದ್ರೆ ಒಂದು ವೆಬ್ ಸೈಟ್ ನ ವಿಷಯದಲ್ಲೂ ತಮ್ಮ ಭಾಷೆನಾ ಯಾವ ಕಾರಣಕ್ಕೂ ಕಡೆಗಣಿಸಿಲ್ಲ ಅನ್ನೋದು ವಿಶೇಷ. ನಮ್ಮ ಮೈಸೂರು ಸಿಲ್ಕ್ಸ್ ನ ವೆಬ್ ಸೈಟ್ ನ ಇದಕ್ಕೆ ಹೋಲಿಸಿ ನೋಡಿ, ನಮ್ಮವರಿಗೆ ಇರೋ ಅಭಿಮಾನ ಶೂನ್ಯತೆ ಕಣ್ಣಿಗೆ ಕಟ್ಟುತ್ತೆ.
  • ಅದು ಹೋಟೆಲ್ ಇರಲಿ, ಮಾಲ್ ಇರಲಿ, ಏರ್ ಪೋರ್ಟ್ ಇರಲಿ, ತಮ್ಮ ಭಾಷೆ, ಸಂಸ್ಕೃತಿನ ಜಗತ್ತಿಗೆ ಸಾರೋ ಯಾವ ಅವಕಾಶವನ್ನು ಚೀನಿಯರು ಹಾಗೆ ಬಿಟ್ಟಿಲ್ಲ. ಇದು ಚೀನಾಕೆ ೧೫ ದಿನಗಳ ಹಿಂದೆ ಅಲ್ಲಿನ ಜಿಯಾ ಮುಸಿ ಚೈನ ಮೆಡಿಕಲ್ ವಿಶ್ವವಿದ್ಯಾಲಯಕ್ಕೆ ಹೋಗಿ ಬಂದ ನನ್ನ ಸ್ನೇಹಿತನ ಅನುಭವ.

ಇದೇ ಸಮಯದಲ್ಲಿ ನಮ್ಮ ದೇಶದಿಂದ ಹೋಗಿರೋ ಲಿಯಾಂಡರ್ ಪೇಸ್ ಟಿ.ವಿ ಚಾನೆಲ್ ಒಂದರ ಜೊತೆ ಮಾತಾಡ್ತಾ, ಬೀಜಿಂಗ್ ಅಲ್ಲಿ ಭಾಷೆಯ ಸಮಸ್ಯೆ ಆಗ್ತಿದೆ, ಆದ್ರೆ ನಮಗಾಗಿ ಅವರು ಬದಲಾಗಲಿ ಎಂದು ನಿರೀಕ್ಷೆ ಮಾಡೋದು ತಪ್ಪು, ಅವರ ಭಾಷೆ, ಸಂಸ್ಕೃತಿನಾ ಅವರು ಹೆಮ್ಮೆಯಿಂದ ಜಗತ್ತಿಗೆ ತೋರಿಸಲು ಸಿಕ್ಕಿರೊ ಈ ಅವಕಾಶಾನಾ ಅವರು ಸರಿಯಾಗೇ ಬಳಸಿಕೊಳ್ಳುತ್ತಿದ್ದಾರೆ ಅಂತ ಮಾತಾಡಿದ್ರು. ಆದ್ರೆ ಇಲ್ಲೂ ಕೂಡಾ, ಆ ಇಂಗ್ಲೀಷ್ ಚಾನಲ್ ನ ವರದಿಗಾರ,, ಈ ಚೈನಿಸ್ ಗಳು ಡಬ್ಬಾ ನನ್ ಮಕ್ಕಳು, ಇಂಗ್ಲೀಷ್ ಬರಲ್ಲ, ಅದೇನ್ ಒಲಂಪಿಕ್ಸ್ ಮಾಡ್ತಾರೆ ಅನ್ನೊ ರೀತಿಲಿ ಮಾತಾಡ್ತಾ ಇದ್ದಿದ್ದು ನೋಡೊಕೆ ಸಕತ್ ತಮಾಷೆ ಆಗಿತ್ತು :)

ಚೀನಿಯರ ಭಾಷಾ ಪ್ರೇಮದಿಂದ ನಾವು ಸಾಕಷ್ಟು ಕಲಿಯೋದು ಇದೆ, ಏನ್ ಅಂತೀರಾ?

Rating
No votes yet

Comments