ಬೆತ್ತಲೆ ಚಿತ್ರ ನೋಡಲು ’ಕನ್ನಡ ಪ್ರಭ’ದ ಶಿಫಾರಸ್ಸು !

ಬೆತ್ತಲೆ ಚಿತ್ರ ನೋಡಲು ’ಕನ್ನಡ ಪ್ರಭ’ದ ಶಿಫಾರಸ್ಸು !

ಹಿಂದಿನಟಿಯೊಬ್ಬಳು ಬೆತ್ತಲೆ ಫೋಸು ಕೊಟ್ಟಿದ್ದಾಳೆ. ಅದು ಆ ಇಂಗ್ಲೀಷ್ ಪತ್ರಿಕೆಯಲ್ಲಿದೆ ನೋಡಿ ಎಂದು ನಮ್ಮ ಕನ್ನಡಪ್ರಭ ಪತ್ರಿಕೆ ಇವತ್ತು[http://www.kannadaprabha.com/Cinema/cineItems.asp?ID=KPJ20080810104625&Title=Manaranjane&lTitle=%C8%DA%DF%AB%DA%C1%DAMd%AB%E6&Topic=0&Dist=0|ಶಿಫಾರಸ್ಸು ಮಾಡಿದೆ.] ಜೊತೆಗೆ ಸ್ಯಾಂಪಲ್ಲಿಗೆ ಎರಡು ಚಿತ್ರಗಳನ್ನು ಬೇರೆ ಕೊಟ್ಟಿದೆ. ! ಧನ್ಯರಾದರು ಕನ್ನಡಿಗರು. ಮಾಧ್ಯಮಗಳಿಂದ ಉದ್ಧಾರಾದರು ದೇಶದ ಜನರು.

********************

ಕೆಲತಿಂಗಳುಗಳ ಹಿಂದೆ ಅದ್ಯಾವುದೋ ಲಂಡನ್ನಿನ ಪತ್ರಿಕೆಯೊಂದು ಬಿಪಾಷಾ ಬಸು ಅತೀ ಸೆಕ್ಸಿ ನಟಿ ಎಂದು ಸರ್ವೆಮಾಡಿ ವರದಿ ಮಾಡಿದ ಎಂಜಲನ್ನು ನಮ್ಮ ದೇಶದ ಎಲ್ಲಾ ಪತ್ರಿಕೆಗಳೂ ಮಹಾಪ್ರಸಾದವೆಂಬಂತೆ ನೆಕ್ಕಿ, ಜನರಿಗೂ ನೆಕ್ಕಿಸಿದ್ದರು.

ಪತ್ರಿಕೆಗಳು ತಲೆಹಿಡುಕ ಕೆಲಸವನ್ನೇ ಪತ್ರಿಕೋದ್ಯಮವೆಂದುಕೊಂಡಿವೆಯೋ ಹೇಗೆ! ಸಾಮಾಜಿಕ ಜವಾಬ್ದಾರಿ ದೂರದ ಮಾತಾಯಿತು.
ಎಲ್ಲಾ ಟೈಮ್ಸಾಫಿಂಡಿಯಾದ ಪ್ರಭಾವ!

Rating
No votes yet

Comments