ಅಂತರ ಮತ್ತು ಅರಸ

ಅಂತರ ಮತ್ತು ಅರಸ

ಅಂತರ

ಬಂಗಾರದ ಉಂಗುರದಲ್ಲಿ,
ಬಂಗಾರ ನಿರಾಕಾರ,
ಉಂಗುರ ಸಾಕಾರ,
ಉಂಗುರ ಬಂಗಾರದ್ದು,
ಆದರೆ
ಬಂಗಾರವೆಂದರೆ ಉಂಗುರವಲ್ಲ
ಹೀಗಿದೆ
ನಮ್ಮ ಮತ್ತು ದೇವರ
ಅಂತರ.

ಅರಸ

ಆಳುವವ ಅಳಭಾರದು,
ಆಸಕ್ತಿ ಅಳುವಿಗೆ ಆಧಾರ,
ಅಳುವ ಆಸಕ್ತ ಆಳಾದರೇ,
ಆಳುವ ಅನಾಸಕ್ತ
ಅಪೇಕ್ಷೆಯೆಂಬ
ರಸವಿಲ್ಲದ
ಅರಸನಾಗುತ್ತನೆ,
ಅಜೇಯನಾಗುತ್ತಾನೆ.

ಅಹೋರಾತ್ರ.

Rating
No votes yet

Comments