Cosmetics ಬಳಕೆಯ ಸುತ್ತ
ನಮ್ಮ ಕಿಟ್ಟಿ ಸರ್ ಹೇಳುತ್ತಿದ್ದರು:
ಫೇರ್ ಎಂಡ್ ಲವ್ಲಿ ಹಚ್ಚಿಕೊಳ್ಳೋದು, ಹಚ್ಚಿಕೊಂಡು "ನಾನೇ ಫೇರ್, ನಾನೇ ಲವ್ಲಿ" ಅಂದುಕೊಳ್ಳೋದು! ಅಂತ.
ಭಾರತ "ಫೇರ್ನೆಸ್ ಕ್ರೀಮು"ಗಳ ನಾಡು. ನಮ್ಮ ದೇಶದಲ್ಲಿ ಮಾರಾಟವಾಗುವ ಫೇರ್ನೆಸ್ ಕ್ರೀಮಿನ ಅಂಕಿಗಳನ್ನು ಗಮನಿಸಿ ವಿಶ್ವದೆಲ್ಲೆಡೆ ಮಲ್ಟಿ ನ್ಯಾಶನಲ್ಲುಗಳು ಬೆರಗಾಗಿ ಬಾಯಿ ಮೇಲೆ ಕೈ ಇಟ್ಟುಕೊಂಡದ್ದುಂಟಂತೆ. "ಎಂತಹ opportunity ಹಾಳಾಗುತ್ತಿದೆ, ನಾವೂ ಫೇರ್ನೆಸ್ ಕ್ರೀಮು ಮಾಡಬೇಕು" ಎಂದು.
ತಮಾಷೆಯೆಂದರೆ ಮಾರುಕಟ್ಟೆ ಆಕ್ರಮಿಸಿಕೊಳ್ಳುವ ಕಾತುರದಲ್ಲಿ ಬರುವ ಹತ್ತಲವು ಪ್ರಾಡಕ್ಟುಗಳು ಸರಿಯಾಗಿ ಟೆಸ್ಟ್ ಆಗಿರುವುದೇ ಕಡಿಮೆ. ಬಹುಪಾಲು ರಿಲೀಸ್ ಆದ ನಂತರ ಬಳಸಿದ ಬಡಪಾಯಿ ಚರ್ಮಗಳ ಮೇಲೆ ಟೆಸ್ಟ್ ಆಗುತ್ತವೆ. ಟಿವಿಯಲ್ಲಿ ಬಂದ ಜಾಹೀರಾತು ಅದನ್ನು ಕೊಳ್ಳುವವರಿಗೆ ಪ್ರಚೋದನೆ ನೀಡಿರುತ್ತದೆ. ದುಡ್ಡು ಮಾಡಬೇಕೆಂಬ ಒಂದೇ ಉದ್ದೇಶದಿಂದ ಹುಟ್ಟುಹಾಕಿದ ಟಿ ವಿ ಚ್ಯಾನಲ್ಲು "ಮಾರುವವರು ಇವರು, ಕೊಳ್ಳುವವರು ಅವರು. ಇದರಲ್ಲಿ ನನ್ನದೇನು" ಎನ್ನುತ್ತ ಧೋರಣೆಯಲ್ಲಿ ತಾನೂ ಒಂದು ಪಕ್ಕಾ ಮಲ್ಟಿನ್ಯಾಶನಲ್ ಆಗಿರುತ್ತದೆ.
ಹೀಗಿರುವಾಗ ಹೆಚ್ಚು ಕಡಿಮೆಯಾದದ್ದರ ಹೊಣೆ ಯಾರದ್ದು ಎಂಬುದು ಗೊಂದಲಮಯವೇ. ದೇಶದ ಎಕಾನಮಿ ಬೆಳೆಯಲು ಸಹಾಯ ಮಾಡುವ ಉತ್ಪನ್ನಗಳಿಗೆ ದೇಶ ಕಡಿವಾಣ ಹಾಕಲಾರದು. ಹಾಕಿದರೂ ಜನ ಸುಮ್ಮನಿರಲಾರರು. ಅವರಿಗೂ ಚೆಂದ ಕಾಣಬೇಕಲ್ಲ! ಫೇರ್ ಆಗಿರಬೇಕಲ್ಲ! ಕೂದಲಿನ ಬಣ್ಣ ಬೆಳ್ಳಗಾದರೂ ಹೊರಗಿನವರಿಗೆ ಕಪ್ಪಗೆ ಕಾಣುವಂತೆ ಮಾಡಬೇಕಲ್ಲ.
ನಿನ್ನೆ [:http://www.washingtonpost.com/wp-dyn/content/article/2008/08/14/AR2008081401159.html|ವಾಷಿಂಗ್ಟನ್ ಪೋಸ್ಟಿನಲ್ಲಿ ಬಂದಿರುವ ಈ ಸುದ್ದಿ ನೋಡಿ]. ಸಾಧಾರಣ ಬಳಕೆಯಲ್ಲಿರುವ Moisturizing creamಉಗಳು ಇಲಿಗಳ ಮೇಲೆ ಟೆಸ್ಟ್ ಮಾಡುತ್ತಿದ್ದರಂತೆ. ನಿಧಾನವಾಗಿ ಟ್ಯೂಮರ್ ಬೆಳೆಯ ಹತ್ತಿತಂತೆ! ಅದೂ ಆಗಲೇ ಮಾರ್ಕೆಟ್ಟಿನಲ್ಲಿ ಬಳಕೆಯಲ್ಲಿರುವ ಬ್ರ್ಯಾಂಡುಗಳು.
ಟೆಸ್ಟಿಂಗ್ environmentನಲ್ಲಿ ಬಂದದ್ದು ಮನುಷ್ಯರಿಗೆ ಆಗಬೇಕು ಎಂಬುದಿಲ್ಲ, ನಿಜ. ಏಕೆಂದರೆ ಅಲ್ಲಿ ಸ್ವಲ್ಪ ಅತಿಯಾಗಿಯೇ ರೇಡಿಯೇಶನ್ ಬಳಸಿರುತ್ತಾರೆ. ಅದಲ್ಲದೆ ಪ್ರಾಣಿಗಳ ಮೇಲೆ ಟೆಸ್ಟ್ ಮಾಡಿರುತ್ತಾರೆ. ಆದರೆ ಇದು ಒಂದು ಪ್ರಶ್ನಾರ್ಥಕವನ್ನು ಮೂಡಿಸುವುದಂತೂ ನಿಜ.
ಪ್ರಶ್ನೆ: ಮನುಷ್ಯರ ಚರ್ಮ ನಿಜವಾಗಲೂ ಈಗೀಗ ಬರುತ್ತಿರುವ ಕಾಸ್ಮೆಟಿಕ್ ಉತ್ಪನ್ನಗಳನ್ನು ತಾಳಿಕೊಳ್ಳಬಲ್ಲುದೇ? ವಿಜ್ಞಾನವೆಂದು ಹೊಸಹೊಸತನ್ನು ಕಂಡುಹಿಡಿದು ಪರಿಸರದ ಮೇಲೆ ಹೇರಿ ಅದನ್ನು ನಾಶಮಾಡಿದಂತೆ ನಮ್ಮನ್ನೂ ನಾವು ನಾಶ ಮಾಡಿಕೊಳ್ಳುತ್ತಿದ್ದೇವೆಯೇ?
ಚಿತ್ರ: Brian Boulos from NYC. (License: [: http://creativecommons.org/licenses/by/2.0/|Creative Commons Attribution 2.0])
Comments
ಉ: Cosmetics ಬಳಕೆಯ ಸುತ್ತ
In reply to ಉ: Cosmetics ಬಳಕೆಯ ಸುತ್ತ by kalpana
ಉ: Cosmetics ಬಳಕೆಯ ಸುತ್ತ
In reply to ಉ: Cosmetics ಬಳಕೆಯ ಸುತ್ತ by hpn
ಉ: Cosmetics ಬಳಕೆಯ ಸುತ್ತ
In reply to ಉ: Cosmetics ಬಳಕೆಯ ಸುತ್ತ by kalpana
ಉ: Cosmetics ಬಳಕೆಯ ಸುತ್ತ
In reply to ಉ: Cosmetics ಬಳಕೆಯ ಸುತ್ತ by Ennares
ಉ: Cosmetics ಬಳಕೆಯ ಸುತ್ತ
In reply to ಉ: Cosmetics ಬಳಕೆಯ ಸುತ್ತ by ಗಣೇಶ
ಉ: Cosmetics ಬಳಕೆಯ ಸುತ್ತ
In reply to ಉ: Cosmetics ಬಳಕೆಯ ಸುತ್ತ by Ennares
ಉ: Cosmetics ಬಳಕೆಯ ಸುತ್ತ
In reply to ಉ: Cosmetics ಬಳಕೆಯ ಸುತ್ತ by kalpana
ಉ: Cosmetics ಬಳಕೆಯ ಸುತ್ತ
In reply to ಉ: Cosmetics ಬಳಕೆಯ ಸುತ್ತ by kalpana
ಉ: Cosmetics ಬಳಕೆಯ ಸುತ್ತ
In reply to ಉ: Cosmetics ಬಳಕೆಯ ಸುತ್ತ by kalpana
ಉ: Cosmetics ಬಳಕೆಯ ಸುತ್ತ
ಉ: Cosmetics ಬಳಕೆಯ ಸುತ್ತ
In reply to ಉ: Cosmetics ಬಳಕೆಯ ಸುತ್ತ by Rajeshwari
ಉ: Cosmetics ಬಳಕೆಯ ಸುತ್ತ
In reply to ಉ: Cosmetics ಬಳಕೆಯ ಸುತ್ತ by hpn
ಉ: Cosmetics ಬಳಕೆಯ ಸುತ್ತ