ದೇಶ್ ರಾಗ್

ದೇಶ್ ರಾಗ್

ಅಶೋಕರು ಮಿಲೇ ಸುರ್ ಮೇರಾ ತುಮ್ಹಾರಾ ಕೇಳಿಸುತ್ತಿದ್ದಂತೆ, ದೂರದರ್ಶನದ ಮತ್ತಷ್ಟು ಹಳೆ ನೆನಪುಗಳು.

ದೇಶ್ (ಅಥವಾ ದೇಸ್) ಅನ್ನುವ ಹಿಂದೂಸ್ತಾನಿ ರಾಗ ಈಗ ಕರ್ನಾಟಕ ಸಂಗೀತದಲ್ಲೂ ಪ್ರಚಲಿತವಾಗಿದೆ. ಇವೆರಡಕ್ಕೂ ಹಿಂದೆ ೧೪-೧೫ನೇ ಶತಮಾನದಲ್ಲಿದ್ದ ದೇಶವಾಲ ಗೌಡವೆಂಬ ರಾಗವೇ ತಾಯಿ. ಸಂಗೀತ ಎರಡು ಕವಲೊಡೆದಾಗ, ಉತ್ತರದಲ್ಲಿ ಅದು ದೇಶ್ ಆದರೆ, ದಕ್ಷಿಣದಲ್ಲಿ ಕೇದಾರಗೌಳ ವೆಂಬ ರಾಗವಾಗಿ ಬೆಳೆಯಿತು. ಕೆಲವು ಕಾಲ ಬೇರೆಬೇರೆ ದಾರಿಗಳಲ್ಲಿ ಹೊಮ್ಮಿದ ಈ ಎರಡು ರಾಗಗಳು ಹತ್ತೊಂಬತ್ತನೆ ಶತಮಾನದ ಕೊನೆಗೆ ಎರಡು ಬೇರೆ ಚಹರೆ ಹೊಂದಿದ ರಾಗಗಳಾಗಿ ಬದಲಾದವು.

ಇಪ್ಪತ್ತನೆ ಶತಮಾನದಲ್ಲಿ, ಉತ್ತರಾದಿಯ ದೇಶ್ ರಾಗವನ್ನೂ ಕರ್ನಾಟಕ ಸಂಗೀತದಲ್ಲೂ ದೇಶ್ ಅನ್ನುವ ಹೆಸರಿನಲ್ಲೇ ಮತ್ತೆ ಹಾಡುವ ಬಳಕೆಯೂ ಆರಂಭವಾಯಿತು. ಈಗ ಈ ರಾಗದಲ್ಲಿ ಕರ್ನಾಟಕ ಸಂಗೀತ ಶೈಲಿಯಲ್ಲಿ ಶ್ಲೋಕ, ರಾಗಮಾಲಿಕೆ, ದೇವರನಾಮ, ಭಜನೆ ಮೊದಲಾದ ಪ್ರಕಾರಗಳನ್ನು ಹಾಡಲಾಗುತ್ತೆ. 

ಇನ್ನು ಈ ರಾಗದ ಒಂದು ಒಳ್ಳೇ ಉದಾಹರಣೆಯನ್ನು ಕೇಳಿ- ನೋಡಿ ಆನಂದಿಸಲು ಈ ಕೆಳಗಿನ ಕೊಂಡಿಯನ್ನು ಚಿಟಕಿಸಿ:

ದೇಶ್ ರಾಗ್

-ಹಂಸಾನಂದಿ

 

Rating
No votes yet

Comments