ಅಂತೂ ಇಂತೂ ಜಿಗುಪ್ಸೆ ಬಂತು

ಅಂತೂ ಇಂತೂ ಜಿಗುಪ್ಸೆ ಬಂತು

ಪೇಪರ್ ನವರು ಮತ್ತೆ ನಮಗೆ ಮೋಸಮಾಡಿದರು. ನೆನ್ನೆ ಈ ಚಿತ್ರ ಚೆನ್ಣಾಗಿದೆ ಎಂದು ನಾವುಗಳು ನಂಬಿಕೊಂಡು ಹೋಗಿದ್ದಾಯ್ತು. ಒಬ್ಬನ ಜೊತೆ ಒಂದು ಹುಡುಗಿಯ ಎಂಗೇಜ್ಮೆಂಟಾಗಿರುತ್ತೆ. ಪ್ರೇಮಸುಳಿಯಲ್ಲಿ ಸಿಕ್ಕಿ ಎಂಗೇಜ್ ಮೆಂಟ್ ಆದವನಿಗೆ ಬಿಸ್ಕಿಟ್ ಹಾಕಿ ತನ್ನಿಷ್ಟ ಬಂದವನ ಜೊತೆ ಮದುವೆಯಾಗುವುದು ಈ ಕತೆಯ ತಿರುಳು. ’ನುವ್ವೇ ಕಾವಾಲಿ’ ಯ ರಿಮೇಕ್ ಚಿತ್ರ ಹಿಂದೆ ಕನ್ನಡದಲ್ಲಿ ಬಂದಿತ್ತಲ್ಲವೇ. ಅದೂ ಇದೇ ಕತೆ. ಏಕೆ ಮತ್ತೊಮ್ಮೆ ಅದೇ ಕತೆ ಮಾಡಿ ನಮ್ಮ ತಲೆತಿಂದರು? ಕೆಲವು ’ಸಿನಿಮೀಯ ದೃಷ್ಯಗಳು’ ಇಂತಿವೆ.

೧. ಹಳ್ಳಿಗೆ ಹೋದ ನಾಯಕ ಏಕಾ ಏಕಿ ಸುಮಾರು ಹತ್ತಿಪ್ಪತ್ತು ಜನರನ್ನು ಅನಾಮತ್ತು ಹೊಡೆದುಬಿಡುತ್ತಾನೆ. ಸುತ್ತಲು ನಿಂತಿದ್ದವರೆಲ್ಲ ಮೂಕ ಪ್ರೇಕ್ಷಕರಾಗಿರುತ್ತಾರೆ.
೨. ಎಂಗೇಜ್ ಮೆಂಟ್ ಆದ ಭೂಪನಿಗೆ ಹುಡುಗಿಯ ಮೇಲೆ ಯಾವುದೇ ಪ್ರೀತಿ ಇತ್ಯಾದಿ ಮಣ್ಣಾಂಗಟ್ಟಿ ಭಾವನೆಗಳಿರುವುದಿಲ್ಲ. ಸ್ನೇಹಿತನಿಗೋಸ್ಕರ ಏನುಬೇಕಾದರು ಬಿಡಬಲ್ಲ.
೩. ನಾಯಕನೊಬ್ಬನೇ ಅದ್ಭುತವಾಗಿ ಹಾಡಬಲ್ಲ.
೪. ಸಾಫ್ಟ್ವೇರೆ ಕಂಪೆನಿಯ ಸರ್ವರ್ ಕ್ರಾಶ್ ಆಗಿದ್ದನ್ನು ಹೊಸದಾಗಿಸೇರಿದ್ದ ನಾಯಕ ಕಮ್ ಗಾಯಕ ರಾತ್ರೋರಾತ್ರಿ ಸರಿಪಡಿಸಿ ಸಿ.ಇ.ಓ ನಿಂದ ಶ್ಲಾಘನೆ ಅನುಭವಿಸುತ್ತಾನೆ.
೫. ಅಪ್ಪ ಮಗ ಒಟ್ಟಿಗೆ ಕುಳಿತು ಗುಂಡು ಹಾಕುತ್ತಾರೆ.

ಎಂಗೇಜ್ಮೆಂಟ್ ಮುರಿದು ಮದುವೆಯಾಗುವುದು ನಮ್ಮ ಕನ್ನಡ ಸಿನಿಮಾ ಸಂಸ್ಖೃತಿಗೆ ಒಗ್ಗುವುದಿಲ್ಲ. ’ಮುಂಗಾರು ಮಳೆ’ ಯಲ್ಲಿ ಕುಟುಂಬದ ಗೌರವಕ್ಕೋಸ್ಕರ ಪ್ರೀತಿ ತ್ಯಾಗಮಾಡಿದ ಗಣೇಶ ಹೇಗೆ ದಿನ ಬೆಳಗಾಗುವುದರಲ್ಲಿ ಹೀರೋ ಆದ ನೋಡಿ.

ನೀವುಗಳು ಅತೀವ ಸಂತೋಶದಿಂದ, ನೆಮ್ಮದಿಯಿಂದ ಇರುವವರಾಗಿದ್ದರೆ ಒಮ್ಮೆ ಬ್ರೇಕ್ ತೆಗೆದುಕೊಳ್ಳಲು ಈ ಚಿತ್ರ ನೋಡಿಬನ್ನಿ.

Rating
No votes yet

Comments