ಏಕೆ ಹೀಗೆ ಮಾಡಿದೆ ನೀನು?
ಏಕೆ ಹೀಗೆ ಮಾಡಿದೆ ನೀನು, ಗೆಳೆಯ,
ಅದೇಕೆ ಹೀಗೆ ಮಾಡಿದೆ ನೀನು ||ಪ||
ಬದುಕಿನ ಒಂದೊಂದೂ ಹೆಜ್ಜೆಗೂನು,
ಜೊತೆಗಿರುವೆನೆಂದು ಮಾಡಿದ ಆಣೆಯ,
ಏಕೆ ಮರೆತೆಯೋ, ಗೆಳೆಯ,
ಅದೇಕೆ ಮರೆತೆಯೋ ||೧||
ಏಕೆ ಹೀಗೆ ಮಾಡಿದೆ ನೀನು, ಗೆಳೆಯ,
ಅದೇಕೆ ಹೀಗೆ ಮಾಡಿದೆ ನೀನು
ಇದ್ದಕ್ಕಿದ್ದಂತೆ ಎದ್ದು ಹೊರಟೆ,
ಹೇಳೆದೇ ಕೇಳದೇ ಕೈ ಬಿಟ್ಟು ಹೋದೆ,
ಏಕೇ ಹೋದೆಯೋ, ಗೆಳೆಯ,
ಅದೇಕೇ ಹೋದೆಯೋ ||೨||
ಏಕೆ ಹೀಗೆ ಮಾಡಿದೆ ನೀನು, ಗೆಳೆಯ,
ಅದೇಕೆ ಹೀಗೆ ಮಾಡಿದೆ ನೀನು
ನನ್ನ-ನಿನ್ನ ಮಕ್ಕಳನ್ನು ಮುದ್ದು ಮಾಡಿ,
ಬೆಳೆಸಿ ನಿಲಿಸುವ, ಗುರುತರ ಹೊಣೆಯ,
ಹೊರಿಸಿ ಹೋದೆಯೋ, ಗೆಳೆಯ,
ಅದೇಕೆ ಹೋದೆಯೋ ||೩||
ಏಕೆ ಹೀಗೆ ಮಾಡಿದೆ ನೀನು, ಗೆಳೆಯ,
ಅದೇಕೆ ಹೀಗೆ ಮಾಡಿದೆ ನೀನು
ಜಗ್ಗೆನು ಕುಗ್ಗೆನು, ಕುಸಿದರೆ ನಿನ್ನಾಣೆ,
ಮಕ್ಕಳ ಸಡಗರ ಕಾಣದೇ, ಹೋದ,
ನಿನ್ನದೇ ಚಿಂತೆಯೋ, ಗೆಳೆಯ,
ನಿನ್ನದೇ ಚಿಂತೆಯೋ ||೪||
Rating
Comments
ಉ: ಏಕೆ ಹೀಗೆ ಮಾಡಿದೆ ನೀನು?
In reply to ಉ: ಏಕೆ ಹೀಗೆ ಮಾಡಿದೆ ನೀನು? by ಗಣೇಶ
ಉ: ಏಕೆ ಹೀಗೆ ಮಾಡಿದೆ ನೀನು?
ಉ: ಏಕೆ ಹೀಗೆ ಮಾಡಿದೆ ನೀನು?
In reply to ಉ: ಏಕೆ ಹೀಗೆ ಮಾಡಿದೆ ನೀನು? by Jayalaxmi.Patil
ಉ: ಏಕೆ ಹೀಗೆ ಮಾಡಿದೆ ನೀನು?
ಉ: ಏಕೆ ಹೀಗೆ ಮಾಡಿದೆ ನೀನು?
In reply to ಉ: ಏಕೆ ಹೀಗೆ ಮಾಡಿದೆ ನೀನು? by harshab
ಉ: ಏಕೆ ಹೀಗೆ ಮಾಡಿದೆ ನೀನು?