ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ದಟ್ಸ ಕನ್ನಡದಲ್ಲಿ ಇವತ್ತು ಪ್ರಕಟವಾಗಿರುವ ವರದಿ ಒಂದರ ಕೊಂಡಿ ಕೆಳಗಿದೆ.
ಕುಂಭ ರಾಶಿ ಮೇಲೆ ಕೆಟ್ಟ ಪರಿಣಾಮ ಬೀರಲಿರುವ ಗ್ರಹಣ
ಎಸ್.ಕೆ. ಜೈನ್ ಅವರು ಏನಾದರೂ ಹೇಳಲಿ, ಅದು ಅವರ ಹಕ್ಕು, ಮತ್ತು ನಂಬಿಕೆ.ಆದರೆ,ವರದಿಗಾರರು ವಾರ್ತೆಯೊಂದನ್ನು ಪ್ರಕಟಿಸುವ ಮೊದಲು ಸ್ವಲ್ಪವಾದರೂ, ಅದು ಸರಿಯೇ ತಪ್ಪೇ ಅನ್ನುವುದನ್ನು ನೋಡಿ ತಿದ್ದಿ ಬರೆಯಬೇಡವೇ?
ಈ ಕೆಳಗಿನ ರೀತಿಯ ತಪ್ಪು ತಪ್ಪಾದ ಸಾಲುಗಳ ಬಗ್ಗೆ ನನಗೆ ಬಹಳ ಸಿಟ್ಟು ಬರುತ್ತೆ.
ಸೂರ್ಯಗ್ರಹಣ ಹಾಗೂ ಚಂದ್ರಗ್ರಣ ಕೇವಲ 15 ದಿನಗಳ ಅಂತರದಲ್ಲಿ ಸಂಭವಿಸುವುದು ಬಹಳ ಅಪರೂಪದ ಘಟನೆ.
ಇದೆಷ್ಟು ಸರಿ ಎಂದು ತಿಳಿಯಲು, ಕಳೆದ ೫ ವರ್ಷಗಳಲ್ಲಿ ನಡೆದಿರೋ ಗ್ರಹಣಗಳ ಪಟ್ಟಿ ನೋಡೋಣವೇ?
೨೦೦೪:
ಏಪ್ರಿಲ್ ೧೯: ಸೂರ್ಯಗ್ರಹಣ; ಮೇ ೪: ಚಂದ್ರಗ್ರಹಣ
ಅಕ್ಟೋಬರ್ ೧೪: ಸೂರ್ಯಗ್ರಹಣ; ಅಕ್ಟೋಬರ್ ೨೮: ಚಂದ್ರಗ್ರಹಣ
೨೦೦೫
ಏಪ್ರಿಲ್ ೦೮: ಸೂರ್ಯಗ್ರಹಣ; ಏಪ್ರಿಲ್ ೨೪: ಚಂದ್ರ ಗ್ರಹಣ
ಅಕ್ಟೋಬರ್ ೩: ಸೂರ್ಯಗ್ರಹಣ ;ಅಕ್ಟೋಬರ್ ೧೭: ಚಂದ್ರಗ್ರಹಣ
೨೦೦೬:
ಮಾರ್ಚ್ ೧೪: ಚಂದ್ರಗ್ರಹಣ;ಮಾರ್ಚ್ ೨೯: ಸೂರ್ಯಗ್ರಹಣ
ಸೆಪ್ಟೆಂಬರ್ ೭: ಚಂದ್ರಗ್ರಹಣ; ಸೆಪ್ಟೆಂಬರ್ ೨೨: ಸೂರ್ಯಗ್ರಹಣ
೨೦೦೭:
ಮಾರ್ಚ್ ೩: ಚಂದ್ರಗ್ರಹಣ; ಮಾರ್ಚ್ ೧೯:ಸೂರ್ಯಗ್ರಹಣ
ಆಗಸ್ಟ್ ೨೮: ಚಂದ್ರಗ್ರಹಣ;ಸೆಪ್ಟೆಂಬರ್ ೧೧: ಸೂರ್ಯಗ್ರಹಣ
೨೦೦೮:
ಫೆಬ್ರವರಿ ೭: ಸೂರ್ಯಗ್ರಹಣ; ಫೆಬ್ರವರಿ ೨೧: ಚಂದ್ರಗ್ರಹಣ
ಆಗಸ್ಟ್ ೧: ಸೂರ್ಯಗ್ರಹಣ; ಅಗಸ್ಟ್ ೧೬: ಚಂದ್ರಗ್ರಹಣ
ಈ ಪಟ್ಟಿಯನ್ನು ನೋಡಿದರೆ ಏನು ಅರ್ಥವಾಗುತ್ತೆ?
೧. ಪ್ರತಿ ಗ್ರಹಣವೂ ಇನ್ನೊಂದು ಗ್ರಹಣವಾದ ಹದಿನಾಕು/ಹದಿನೈದು ದಿನಗಳಿಗೇ ಆಗುತ್ತೆ
೨. ೧೦ ಗ್ರಹಣ ಜೋಡಿಗಳಲ್ಲಿ, ಆರು ಸಲ ಸೂರ್ಯಗ್ರಹಣವಾಗಿ ಹದಿನೈದು ದಿನದ ನಂತರ ಚಂದ್ರಗ್ರಹಣ ಬಂದಿದೆ. ಇನ್ನು ನಾಕು ಸಲ ಮೊದಲು ಚಂದ್ರಗ್ರಹಣವಾಗಿ, ಮತ್ತೆ ಒಂದು ಪಕ್ಷವಾದ ನಂತರ ಸೂರ್ಯ ಗ್ರಹಣ ಬಂದಿದೆ.
ಹಾಗಾದರೆ, ಈ ಬಾರಿಯ ಗ್ರಹಣ ಅದು ಯಾವ ಮೂಲೆಯಿಂದ "ಅಪರೂಪದ ಘಟನೆ"?
ಇದು ನಿಜವಾದರೆ, ಹತ್ತು ದಿನಗಳಲ್ಲಿ ಆರು ದಿನ ನಮ್ಮ ಮನೆಗೆ ಬರುವರಿಗೆ ನಾವು ಇನ್ನು ಮೇಲೆ "ಅಪರೂಪದ ಅತಿಥಿಗಳು" ಅನ್ನಬೇಕು ಅನ್ನಿಸುತ್ತೆ!!
-ಹಂಸಾನಂದಿ
ಸೂ: ಸಂಪದದಲ್ಲಿ ಬರೆಯುವ/ಓದುವ ಬಳಗದಲ್ಲಿ ಹಲವಾರು ಪತ್ರಕರ್ತರು - ವರದಿಗಾರರು ಇದ್ದಾರೆ ಅಂತ ನನ್ನೆಣಿಕೆ. ಈ ಬರಹ ಮೊನಚಾಗಿದೆ ಎಂದೆನಿಸಿದರೂ ನನಗೇನೂ ಬೇಸರವಿಲ್ಲ. ದಯವಿಟ್ಟು ನಾನು ಏಕೆ ಹೀಗೆ ಹೇಳುತ್ತಿದ್ದೀನೆಂಬುದರ ಬಗ್ಗೆ ಗಮನ ಕೊಡಿ. ದಟ್ಸ್ ಕನ್ನಡದಲ್ಲೇ ನನ್ನ ಅಭಿಪ್ರಾಯ ಪ್ರಕಟಿಸಲು ನೋಡಿದೆ. ಆದರೆ, ಅದೇನೋ ಅಲ್ಲಿ ಹಾಕಲು ಆಗುತ್ತಿಲ್ಲ! ಅದಕ್ಕೆಂದು ಇಲ್ಲಿ ಬರೆದೆ.ಅಂದಹಾಗೆ, ದಟ್ಸ್ ಕನ್ನಡದಲ್ಲಿ ಈ ರೀತಿ ವರದಿಗಳು ಪ್ರಕಟವಾಗುತ್ತಿರುವುದೇನೂ ಮೊದಲ ಸರತಿ ಅಲ್ಲ!
Comments
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
In reply to ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ? by srinivasps
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
In reply to ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ? by madhava_hs
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
In reply to ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ? by hamsanandi
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?