ಮಾ(ನವ) ಜೀ(ವನ)ದ ಕಥೆ:

ಮಾ(ನವ) ಜೀ(ವನ)ದ ಕಥೆ:

ಕಥೆ ಎಲ್ಲೋ ಓದಿದ ನೆನಪು (ನನ್ನದಲ್ಲ):

ದಾರಿ ಗೊತ್ತಿಲ್ಲದ ಒಬ್ಬ ಮಾ(ನವ), ಜೀ(ವನ) ಎಂಬ ಕಾಡಿನಲ್ಲಿ  ಬುರುತ್ತಿದ್ದಾಗ ಹಸಿದ ಹೆಬ್ಬುಲಿಯೊಂದು ಅಟ್ಟಿಸಿಕೊಂಡು ಬರುತ್ತದೆ. ಅದಕ್ಕೆ ಹೆದರಿ ಓಡುತ್ತಾನೆ. ಹುಲಿಯೂ ಬಿಡುವುದಿಲ್ಲ ಮನುಷ್ಯನನ್ನು ತಿಂದೇ ತೀರುತ್ತೇನೆ ಎಂಬ ಹಠದಲ್ಲಿ ಅಟ್ಟಿಸಿಕೊಂಡು ಬರುತ್ತಿರುತ್ತದೆ. ಆ ಮನುಷ್ಯ ದಾರಿ ಕಾಣದೆ ಮುಂದೆ ಇದ್ದ ಹಾಳುಬಾವಿಯಲ್ಲಿ ಬೀಳುತ್ತಾನೆ. ಆದರೆ ಬಿದ್ದ ಮನುಷ್ಯ ಬಾವಿಯ ಮಧ್ಯದಲ್ಲಿ ಹರಡಿದ್ದ ಒಂದು ಮರದ ಕೊಂಬೆಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ಕೆಳಗೆ ನೋಡುತ್ತಾನೆ, ಕತ್ತಲಲ್ಲಿಯೂ ಫಳ ಫಳ ಎಂದು ಹೊಳೆಯುವ ಕಣ್ಗಳು. ನೋಡಿದರೆ ಬಾಯ್ತೆರೆದು ಕಾಯುತ್ತಿರುವ ಹೆಬ್ಬಾವು. ಅಷ್ಟರಲ್ಲಿ ಬಿದ್ದ ರಭಸಕ್ಕೆ ಅಲ್ಲಿಯೆ ಕೊಂಬೆಯ ಮೇಲಿದ್ದ ಒಂದು ಜೇನು ಗೂಡು ಕೆಡವಿ, ಅಲ್ಲಿಂದ ಎದ್ದ ಜೇನ್ನೊಣಗಳು ಮನುಷ್ಯನನ್ನು ಮುತ್ತುತ್ತದೆ. ಆದರೂ ಕೆಡವಿದ ಜೇನುಗೂಡಿನಿಂದ ಜೇನುತುಪ್ಪ ಆ ಮಾ(ನವ)ನ ನಾಲಿಗೆ ಮೇಲೆ ತೊಟ್ಟು ತೊಟ್ಟಾಗಿ ಬೀಳಲಾರಂಭಿಸುತ್ತದೆ. ಮೇಲೆ ಹೆಬ್ಬುಲಿ, ಕೆಳಗೆ ಹೆಬ್ಬಾವು, ನಡುವೆ ಜೇನುನೊಣಗಳ ನಡುವೆ ಸಿಲುಕಿದ ಮಾ(ನವ)ನಿಗೆ ತೊಟ್ಟು ತೊಟ್ಟಾಗಿ ನಾಲಗೆ ಮೇಲೆ ಬೀಳುತ್ತಿರುವ ಜೇನು ತುಪ್ಪವೇ, ಜೀ(ವನ)ದಲ್ಲಿ ಸಿಗುವ ಅಪ್ಯಾಯಮಾನವಾದ ಒಂದು ಸುಖವಾಗಿ ಅನುಭವಕ್ಕೆ ಬರುತ್ತದೆ. ಆ ಅನುಭವದಿಂದ ಮನುಷ್ಯ ಮೇಲೆ ಕಾಯುತ್ತಿರುವ ಹೆಬ್ಬುಲಿ, ಕೆಳಗೆ ಬಾಯ್ತೆರೆದಿರುವ ಹೆಬ್ಬಾವು, ಕಿತ್ತುತಿನ್ನುತಿರುವ ಜೇನ್ನೊಣಗಳನ್ನು ಮರೆಯುತ್ತಾನೆ.

Rating
No votes yet

Comments