ಕನ್ನಡ ಬರ್ದೋನು ಕೋಡಂಗಿ
ಕನ್ನಡ ಬರದೇ ಇರೋರು ಸಂಪದ ಓದೋ ಹಾಗಿಲ್ಲ. ಆದ್ರೂ ಯಾರಾದ್ರೂ ದೂರು ಕೊಟ್ಟು, ನನ್ನ ಬೆನ್ನಿಗೆ ಅವರೆಲ್ಲ ಬೀಳೋ ಮೊದಲು ಪೂರ್ತಿ ಪದ್ಯ ಕೇಳಿ :)
ಸಂಪದದಲ್ಲೆಲ್ಲ್ರೂ ಆಡೋ ಮಾತೇನು?
ವಾಲ್ಮೀಕಿ ರಾಮಾಯಣಕ್ಕೇನಾಗ್ಬೇಕು?
ಮಂಗಂಗಿನ್ನೊಂದ್ಹೆಸರ್ ಗೊತ್ತಾ?
ಕನ್ನಡ ಬರ್ದೋನು ಕೋಡಂಗಿ
ಕಂತಿ ಹಂಪನ ಸಮಸ್ಯೆಗಳ ಬಗ್ಗೆ ಕೇಳೇ ಇರ್ತೀರ. ಒಂದು ಸಾಲು ಪದ್ಯ ಕೊಟ್ಟು ಅದರಲ್ಲಿ ತಪ್ಪು ತಪ್ಪಾಗಿ ಅರ್ಥ ಮಾಡೋ ಹಾಗಿಟ್ಟು, ಆಮೇಲೆ ಉಳಿದ ಸಾಲುಗಳನ್ನ ಬರೀಬೇಕಾದ್ದು ಇಲ್ಲಿಯ ಚಮತ್ಕಾರ.
ಇವತ್ತು ಯಾವ್ದೋ ಸಂಸ್ಕೃತ ಪದ್ಯ ಓದೋವಾಗ, ಅದನ್ನ ಅನುವಾದ ಮಾಡೋ ಬದಲು ಹೊಸದಾಗಿ ಅದೇ ತರಹ ಬರೆಯಣ ಅನ್ನಿಸ್ತು. ಅದೇ ಈ ಪ್ರಯತ್ನ. ಅಷ್ಟೇ.
ಕನ್ನಡ ಬರ್ದೋನು ಕೋಡಂಗಿ ಅನ್ನೋ ಒಂದು ಸಾಲು ಕೊಟ್ಟರೆ, ಮೊದಲಿಗೆ ಮೂರು ಪ್ರಶ್ನೆಗಳು ಬರೋ ಸಾಲು ಹಾಕಿದ್ರೆ ಹೇಗಾಗತ್ತೆ - ನೋಡಿ.
ಪ್ರಶ್ನೆ: ಸಂಪದದಲ್ಲೆಲ್ಲ್ರೂ ಆಡೋ ಮಾತೇನು? - ಉತ್ತರ: ಕನ್ನಡ
ಪ್ರಶ್ನೆ: ವಾಲ್ಮೀಕಿ ರಾಮಾಯಣಕ್ಕೇನಾಗ್ಬೇಕು? - ಉತ್ತರ: ಬರ್ದೋನು (ಬರೆದವನು :) ಬರದವನು ಅಲ್ಲ :) :) ) - ನಮ್ಮೂರ್ ಕಡೆ ಆಡುಮಾತಲ್ಲಿ ಎರಡಕ್ಕೂ ಬರ್ದೋನು ಅಂತ ಹೇಳೋದೇ ರೂಢಿ!
ಪ್ರಶ್ನೆ: ಮಂಗಂಗಿನ್ನೊಂದ್ಹೆಸರ್ ಗೊತ್ತಾ? - ಉತ್ತರ: ಕೋಡಂಗಿ
ಅದಕ್ಕೇ ಕೊನೇಸಾಲು ಕನ್ನಡ ಬರ್ದೋನು ಕೋಡಂಗಿ
ಕನ್ನಡ ’ಬರ’ದೇ ಇರೋರು, ನನ್ನ ಹೊಡೀಬೇಡಿ ಸದ್ಯಕ್ಕೆ!
-ಹಂಸಾನಂದಿ
Comments
ಉ: ಕನ್ನಡ ಬರ್ದೋನು ಕೋಡಂಗಿ
ಉ: ಕನ್ನಡ ಬರ್ದೋನು ಕೋಡಂಗಿ
ಉ: ಕನ್ನಡ ಬರ್ದೋನು ಕೋಡಂಗಿ
ಉ: ಕನ್ನಡ ಬರ್ದೋನು ಕೋಡಂಗಿ
In reply to ಉ: ಕನ್ನಡ ಬರ್ದೋನು ಕೋಡಂಗಿ by anivaasi
ಉ: ಕನ್ನಡ ಬರ್ದೋನು ಕೋಡಂಗಿ
ಉ: ಕನ್ನಡ ಬರ್ದೋನು ಕೋಡಂಗಿ
ಉ: ಕನ್ನಡ ಬರ್ದೋನು ಕೋಡಂಗಿ
In reply to ಉ: ಕನ್ನಡ ಬರ್ದೋನು ಕೋಡಂಗಿ by ಗಣೇಶ
ಉ: ಕನ್ನಡ ಬರ್ದೋನು ಕೋಡಂಗಿ
ಉ: ಕನ್ನಡ ಬರ್ದೋನು ಕೋಡಂಗಿ