ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"

ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"

ನಯಸೇನ, ದಿನಬದುಕಿನಲ್ಲಿ ತುಂಬ ಪಳಗಿದ ಹಯ್ದ ಅಂತ ತಿಳಿಸೋಕೆ ಈ ಕೆಳಗಿನ ಸಾಲುಗಳು ಮಾದರಿ

ಕಂಪಿಲ್ಲದ ತುಪ್ಪಮುಂ
ಪೆಂಪಿಲ್ಲದ ಪ್ರಬುತ್ವಮುಂ
ಸ್ನೇಹಮಿಲ್ಲದ ಕೋಡುಂ
ಮೋಹಮಿಲ್ಲದ ಬಾೞುಂ
ಬಕುತಿಯಿಲ್ಲದ ಕೊಂಡಾಟಮುಂ
ಶಕುತಿಯಿಲ್ಲದ ಸೆಣಸುಂ
ಕೋಡಿಲ್ಲದ ಸಿರಿಯುಂ
ನಾಡಿಲ್ಲದರಸುಂ
ಪಲವಿಲ್ಲದ ತೋಟಮುಂ
ಕುಲಮಿಲ್ಲದ ಮಹಿಮೆಯುಂ
ಬಟ್ಟೆಯಿಲ್ಲದ ಪಯಣಮುಂ
ಪಟ್ಟಣಮಿಲ್ಲದ ರಾಜ್ಯಮುಂ
ಕಿಚ್ಚಿಲ್ಲದಡುಗೆಯುಂ
ನೆಚ್ಚಿಲ್ಲದ ಪೆಂಡತಿಯುಂ
ದಯೆಯಿಲ್ಲದ ನೆಗೞ್ತೆಯುಂ
ನಯಮಿಲ್ಲದ ಸೇವೆಯುಂ
ಬಂಡಮಿಲ್ಲದಂಗಡಿಯುಂ
ಗಂಡನಿಲ್ಲದ ಸತಿಯುಂ
ಮೊದಲಿಲ್ಲದ ಪರದುಂ
ಮದಮಿಲ್ಲದಾನೆಯುಂ
ನೀರಿಲ್ಲದೂರುಂ
ಕೇರಿಲ್ಲದ ಮನೆಯುಂ
ಶ್ರುತಮಿಲ್ಲದ ತಪಮುಂ
ತುಪ್ಪವಿಲ್ಲದೂಟಮುಂ
ಸಮಱಿದರುಸನಮಿಲ್ಲದ ದಾನಮುಂ ತಪಮುಂ ಜಪಮುಂ ದರ್ಮಮುಮೊಪ್ಪಲಾರ್ಕುಮೆ?

ಗಮನಿಕೆ:

೧) ಮತ್ತೆ ಮೇಲಿನ ಪದ್ಯ ತುಂಬಾ ಸಲೀಸಾದ ಸಾಲುಗಳು

೨) ಕೇರಿಲ್ಲದ ಮನೆಯುಂ ..ಅಕ್ಕಿ ಕೇರುವುದು ಅಂತ ನಮ್ಗಳ ಮನೆಗಳಲ್ಲಿ ಹೆಂಗಸರು ಹೇಳುತ್ತಿರುತ್ತಾರೆ... ನೆನಪಿಸಿಕೊಳ್ಳಿ. ಇಲ್ಲಿ 'ಕಸ ಗುಡಿಸದ ಮನೆ' ಅಂತ ಅರಿತುಕೊಳ್ಳಬಹುದು

೩) ತುಪ್ಪವಿಲ್ಲದೂಟಂ: ನಾವು ಕನ್ನಡಿಗರು ತುಪ್ಪ ತುಂಬ ಬಳಸ್ತಿವಿ ಅಂತ ನನ್ನ ತಮಿಳು ಒಡಕೆಲಸಗಾರರು ಹೇಳುತ್ತಿರುತ್ತಾರೆ. ಕನ್ನಡಿಗರು ತುಪ್ಪವಿಲ್ಲದ ಊಟವನ್ನು ಊಹಿಸಿಕೊಳ್ಳಲಾರರು ಅನ್ಸುತ್ತೆ.

೪) ಕೊನೆಸಾಲಿನಲ್ಲಿ ದರುಮದ ಬಗ್ಗೆ ಯಾವುದೆ ತೀರ್ಪನ್ನೀಯದೆ(ಸಮಱಿದರುಸನ=ಸಮ್ಯಗ್ದರ್ಶನ) ಕೇಳ್ಮೆಯಾಗಿ ಇಟ್ಟಿರುವುದು ನಯಸೇನನ ಜಾಣ್ಮೆಗೆ ಕಯ್ಗನ್ನಡಿ.

ಸಮಱಿದರುಸನ ಅಂದ್ರೇನು?

Rating
No votes yet

Comments