ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?

ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?

ಕವಿ -ಲೇಖಕ -ಕತೆಗಾರ ಇವರುಗಳ ಬಗ್ಗೆ ಒಂದು ಕುತೂಹಲದ ಕಣ್ಣು ಎಲ್ಲರಿಗು ಇದ್ದೆ ಇರುತ್ತೆ ಅಲ್ವಾ ?

ಲೈಬ್ರೆರಿಗಳ ಒಳ ಹೊಕ್ಕರೆ ನನಗೆ ತಲೆ ಕೆಟ್ಟು ಹೋಗೋದುಂಟು .ಯಾವ ವಿಷಯಗಳ ಬಗ್ಗೆ ಈಗಾಗಲೇ

ಬರೆದಿಲ್ಲ ಹೇಳಿ .ಎಲ್ಲ ಮುಗಿದಿದೆಯೇನೋ ಅನ್ನಿಸುತ್ತದೆ ಅಲ್ವಾ ? ಆದ್ರೂ ನಮಗೆ ಏನೋ ತೋಚುತ್ತೆ ,

ಮತ್ತೆ ಹಾಳೆ ,ಪೆನ್ನು ತೆಗೊಂಡು ಗೀಚೋಕೆ ಶುರು ಮಾಡ್ತೀವಿ.

ನೀವು ಒಂದೆರಡು ಲೇಖನವೋ ,ಕವನವೋ ಗೀಚಿದ್ದರೆ ಸಾಕು .ನಿಮ್ಮ ಆಪ್ತ ವಲಯದಲ್ಲಿ ನೀವೊಬ್ರು ಸಣ್ಣಗೆ 'ಬುದ್ದಿಜೀವಿ '

ಅನ್ನಿಸಿಕೊಳ್ಳೋದುಂಟು .ಮತ್ತೆ ಈ ಬರಹಗಾರರು ಅಸ್ಟೆ, ಸುಮ್ಮಗೆ ಕೂಡುವ ಜಾಯಮಾನದವರಲ್ಲ ಏನಾದರೂ ಒಂದು ವಿಷಯ ಎತ್ತಿಕೊಂಡು

ಚಿಂತೆ ಮಾಡ್ತಾನೆ ಇರ್ತಾರೆ .

ಹೌದು ಈ ಬರವಣಿಗೆ ಅನ್ನೋದು ಶುರುವಾಗೋದು ಎಲ್ಲಿಂದ ? ತುಂಬ ಓದೋದರಿಂದ್ಲ,ತುಂಬ ಕಹಿ ಜೀವನಾನುಬವದಿಂದಲ ,ತುಂಬ

ಖುಷಿಗಾ ,ಪ್ರೀತಿಸೋದರಿಂದಲ ,ಅಥವ ತುಂಬ ಶೋದಿಸುವ ಗುಣದಿಂದಲಾ..........??

ಒಂದು ಕ್ಷಣ ಯೋಚಿಸಿ ಮೊಟ್ಟಮೊದಲು ನೀವು ಬರೆದ ಲೇಖನ ,ಕತೆ ,ಕವನ ,ಚುಟುಕು , ಯಾವುದೇ ಪ್ರಕಾರ ಇರಬಹುದು ಈಗಲೂ

ನಿಮಗೆ ಅದರ ಬಗ್ಗೆ ಅಸಾಧಾರಣ ಅಭಿಮಾನವೊಂದು ಇದ್ದೆ ಇರುತ್ತೆ ಅಲ್ವಾ ?

ಅದ್ಯಾವುದೋ ಅಪರಿಮಿತ ಸೆಳೆತಕ್ಕೆ ಸಿಕ್ಕಿ ಶುರು ಮಾಡೋ ಬರವಣಿಗೆ ಕೆಲವರಿಗೆ ಎಂತಹ ಹೆಸರು ,ಹಣ ,ಬದುಕನ್ನ ಕಲ್ಪಿಸಿಲ್ಲ ಹೇಳಿ

..ಎಂತೆಂತ ಕ್ರಾಂತಿಗಳಿಗೆ ಕಾರಣವಾಗಿಲ್ಲ ಹೇಳಿ .........

ಅದೆಲ್ಲ ಬಿಡಿ ...........

ಹೌದು........ಈ ಬರೆಯೋ ಅಭ್ಯಾಸ ನಿಮಗೆ ಹೇಗೆ ,ಎಲ್ಲಿಂದ ಪ್ರಾರಂಭ ಆಯ್ತು ...?

(ಸಾದ್ಯವಾದರೆ ನೀವು ಮೊಟ್ಟಮೊದಲು ಬರೆದುದನ್ನ ತಿಳಿಸಿ )

ರಾಘವೇಂದ್ರ ಆಚಾರ್
ನಾಯಕವಾಡಿ .

Rating
No votes yet

Comments